ವಿಶ್ವಾದ್ಯಂತ 2021ರ ಜನವರಿಯಲ್ಲಿ 420 ಕೋಟಿ ಜನರು ಸಾಮಾಜಿಕ ಮಾಧ್ಯಮವನ್ನು ಬಳಸಿದ್ದು, ಈ ವರ್ಷದ ಜನವರಿ ವೇಳೆಗೆ ಆ ಸಂಖ್ಯೆ 462 ಕೋಟಿಗೆ ಏರಿಕೆಯಾಗಿದೆ.
ಹೌದು, ಗ್ಲೋಬಲ್ ಸೋಶಿಯಲ್ ಮೀಡಿಯಾ ಸ್ಟ್ಯಾಟಿಸ್ಟಿಕ್ಸ್ ರಿಸರ್ಚ್- 2022ರ ಪ್ರಕಾರ, ಈ ವರ್ಷದ ಜನವರಿ ವೇಳೆಗೆ 462 ಕೋಟಿ ಜನರು ಬಳಸುತ್ತಿದ್ದೂ, ಜನರು ಸರಾಸರಿ 2.27 ಗಂಟೆಗಳ ಕಾಲ ಅವುಗಳನ್ನು ಬಳಸಿದ್ದಾರೆ.
ಈ ಪೈಕಿ ಫೇಸ್ಬುಕ್ ಅತಿ ಹೆಚ್ಚು (291 ಕೋಟಿ) ಬಳಕೆದಾರರನ್ನು ಹೊಂದಿದ್ದರೆ, ನಂತರದ ಸ್ಥಾನದಲ್ಲಿ ಯೂಟ್ಯೂಬ್( 265.2 ಕೋಟಿ) ಮತ್ತು ವಾಟ್ಸಾಪ್ (200 ಕೋಟಿ) ಬಳಕೆದಾರರನ್ನು ಹೊಂದಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




