ಭೂಪಾಲ್ : ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ನಿಲಯ್ ದಗ ಅವರ ಒಡೆತನದ ಸೋಯಾ ಉತ್ಪನ್ನಗಳ ಸಂಸ್ಥೆ ಮೇಲೆ ನಡೆದ ಐಟಿ ದಾಳಿ ನಡೆಸಿದ್ದು, ದಾಳಿಯಲ್ಲಿ ₹450 ಕೋಟಿ ಕಪ್ಪುಹಣ ಪತ್ತೆಯಾಗಿದೆ.
ಹೌದು ಕಾಂಗ್ರೆಸ್ ಶಾಸಕ ನಿಲಯ್ ದಗ ಒಡೆತನದ ಸೋಯಾ ಉತ್ಪನ್ನಗಳ ಸಂಸ್ಥೆ ಮೇಲೆ ಫೆಬ್ರುವರಿ 18 ರಿಂದ 22 ರವರೆಗೆ ಮಧ್ಯಪ್ರದೇಶದ ಬೇತುಲ್, ಸತ್ನಾ, ಮಹಾರಾಷ್ಟ್ರದ ಮುಂಬೈ, ಸೋಲಾಪುರ ಮತ್ತು ಪಶ್ಸಿಮಾ ಬಂಗಾಳದ ಕೋಲ್ಕತಾದಲ್ಲಿ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ದೊರೆತ ಲ್ಯಾಪ್ಟಾಪ್, ಹಾರ್ಡ್ ಡ್ರೈವ್ಗಳು, ಪೆನ್ ಡ್ರೈವ್ಗಳನ್ನು ಪರಿಶೀಲಿಸಿದಾಗ ಸುಮಾರು ₹450 ಕೋಟಿ ಕಪ್ಪು ಹಣ ಇರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.