ನಿಮ್ಮ ಕೈಯಲ್ಲಿರುವ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ಅದಕ್ಕೆ ನಿಮಗೆ ಸಾಕಷ್ಟು ಆಯ್ಕೆಗಳಿವೆ. ಆದರೆ, ಎಲ್ಲಾ ಹೂಡಿಕೆಗಳು ಒಂದೇ ರೀತಿಯ ಆದಾಯವನ್ನು ನೀಡುವುದಿಲ್ಲ. ಆದ್ದರಿಂದ ನೀವು ಹಣವನ್ನು ಹೂಡಿಕೆ ಮಾಡುವ ಮೊದಲು ಉತ್ತಮ ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಇನ್ನು ಇನ್ವೆಸ್ಟ್ಮೆಂಟ್ ಆಫರ್ ಗಳಲ್ಲಿ ನ್ಯಾಷನಲ್ ಪೆನ್ಷನ್ ಸಿಸ್ಟಮ್ (NPS) ಸಹ ಉತ್ತಮ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಇದರಲ್ಲಿ ಎರಡು ಖಾತೆಗಳನ್ನು ತೆರೆಯಬೇಕು. ಒಂದು ಖಾತೆಯಲ್ಲಿ ಸುಮಾರು 8% ಲಾಭ ಪಡೆಯಬಹುದು. ಉಳಿದ ಇನ್ನೊಂದು ಖಾತೆಯಿಂದ ಸುಮಾರು 12% ರಷ್ಟು ಲಾಭ ಸಿಗುತ್ತದೆ.
ಹೂಡಿಕೆ ತಜ್ಞರ ಪ್ರಕಾರ, ನೀವು ತಿಂಗಳಿಗೆ 6,000 ರೂ. ಹೂಡಿಕೆ ಮಾಡಿದರೆ, ಮುಕ್ತಾಯಕ್ಕೆ ಕಾಲಕ್ಕೆ ನೀವು 1.3 ಕೋಟಿ ರೂ. ಪಡೆಯಬಹುದು. ಅಷ್ಟೇ ಅಲ್ಲದೆ, ನಿವೃತ್ತಿಯ ನಂತರ ತಿಂಗಳಿಗೆ 27,000 ರೂ.ಗಳ ಪಿಂಚಣಿ ಪಡೆಯಬಹುದು. ಆದರೆ ನೀವು 30 ನೇ ವಯಸ್ಸಿನಲ್ಲಿ ಈ ಸ್ಕೀಮ್ ನಲ್ಲಿ ಸೇರಬೇಕು. ಇನ್ನೂ 40 ಶೇಕಡಾ ವರ್ಷಾಶನ ಆಯ್ಕೆಯನ್ನು ಆರಿಸಬೇಕು.
ಉದಾಹರಣೆಗೆ ನಿಮಗೆ 30 ವರ್ಷ ವಯಸ್ಸಾಗಿದೆ ಎಂದು ಭಾವಿಸೋಣ. ಈಗ ನೀವು ಎನ್‌ಪಿಎಸ್‌ಗೆ ಸೇರಿದ್ದೀರಿ. ತಿಂಗಳಿಗೆ 6,000 ರೂ. ಕಟ್ಟುತ್ತಿದ್ದಿರಾ. ಹೀಗೆ ನೀವು 30 ವರ್ಷಗಳವರೆಗೆ ಪಾವತಿಸಬೇಕು. ಹೀಗೆ ಮಾಡುವುದರಿಂದ ಮುಕ್ತಾಯ ಕಾಲಕ್ಕೆ ನಿಮಗೆ 1.27 ಕೋಟಿ ರೂ. ಸಿಗುತ್ತದೆ. ಮತ್ತು ತಿಂಗಳಿಗೆ 42,000 ರೂ.ಗಳ ಪಿಂಚಣಿ ಸಹ ಪಡೆಯಬಹುದು. ಇಲ್ಲಿ ಹೂಡಿಕೆ ಆದಾಯವನ್ನು ಶೇಕಡಾ 12 ಮತ್ತು ವರ್ಷಾಶನ ಆದಾಯವನ್ನು ಶೇಕಡಾ 6 ಎಂದು ಪರಿಗಣಿಸಲಾಗುತ್ತದೆ.
ಇದನ್ನು ಓದಿ: ಸಿಹಿಸುದ್ದಿ: ತತ್ಕಾಲ್ LPG ಸೇವೆಯಲ್ಲಿ ಬುಕಿಂಗ್ ಮಾಡಿದ ದಿನವೇ ಡೆಲಿವರಿ; LPG ಗ್ಯಾಸ್ ಬುಕ್ ಮಾಡಿ ಕ್ಯಾಶ್ ಬ್ಯಾಕ್ ಪಡೆಯಿರಿ
ಇದನ್ನು ಓದಿ: ಸರ್ಕಾರದಿಂದ ಅದ್ಬುತ ಯೋಜನೆ; ತಿಂಗಳಿಗೆ 1000 ರೂ ಠೇವಣಿ ಮಾಡಿ 5 ಲಕ್ಷ ರೂ ಪಡೆಯಿರಿ