BPL card | ರಾಜ್ಯಾದ್ಯಂತ ಸುಮಾರು 4.09 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿ ಎಪಿಎಲ್ ಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.
ಹೌದು, ರಾಜ್ಯದಲ್ಲಿ ರೇಷನ್ ಕಾರ್ಡ್ ಪಡೆಯಲು ಅದರಲ್ಲೂ BPL ಕಾರ್ಡ್ ಪಡೆಯಲು ಕೆಲವು ಮಾನದಂಡಗಳು ಇವೆ. ಇದನ್ನು ಮರೆಮಾಚಿ ಮಾನದಂಡ ಉಲ್ಲಂಘಿಸಿ ಅನರ್ಹರು ಪಡೆದಿದ್ದ ಈ ಕಾರ್ಡ್ ಗಳನ್ನು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಗುರುತಿಸಿದೆ.
ಯಾರದ್ದೆಲ್ಲಾ ರೇಷನ್ ಕಾರ್ಡ್ ರದ್ದು?
ಅಂದರೆ, ತೆರಿಗೆ ಪಾವತಿದಾರರು, ಹೆಚ್ಚುವರಿ ಕೃಷಿ ಭೂಮಿ ಹೊಂದಿರುವವರೂ ಸೇರಿದಂತೆ ವಿವಿಧ ಆದಾಯದ ಮೂಲ ಇದ್ದರೂ ಸಹ ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿದ್ದರು. ಅಂತಹ ಹಲವು ವರ್ಗದ ಅನರ್ಹರನ್ನು ಗುರುತಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅವರ ಕಾರ್ಡ್ ಅನ್ನು ಈಗ ಎಪಿಎಲ್ ಮಾಡಲಾಗಿದೆ. ಇಷ್ಟೇ ಅಲ್ಲದೆ, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದ ಫಲಾನುಭವಿಗಳಿಗೆ ದಂಡ ವಿಧಿಸುವ ಬಗ್ಗೆ ಇಲಾಖೆ ನಿಯಮ ರೂಪಿಸಲು ಸಿದ್ದತೆ ನಡೆಸಿದೆ.




