ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ತಲಾ ₹25,000 ಪರಿಹಾರ ಧನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಭಾರಿ ಮಳೆ ಹಿನ್ನೆಲೆ ಸಚಿವರು & ಅಧಿಕಾರಿಗಳೊಂದಿಗೆ ಕಾವೇರಿಯಲ್ಲಿಂದು ಸಭೆ ನಡೆಸಿದ ನಂತರ ಸಿಎಂ ಈ ಘೋಷಣೆ ಮಾಡಿದ್ದು, ಮಳೆಯಿಂದಾಗಿ ಮನೆ ಹಾನಿ, ಸಂಕಷ್ಟಗಳನ್ನು ಎದುರಿಸಿದ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡುವುದಾಗಿ ಹೇಳಿದ್ದಾರೆ.
ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ: ಯಡಿಯೂರಪ್ಪ
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇಂದು ಧಾರಾಕಾರ ಮಳೆ ಹಿನ್ನೆಲೆ ನೆರೆಗೆ ತುತ್ತಾಗಿದ್ದ ಬೆಂಗಳೂರಿನ ಹೊಸಕೆರೆಹಳ್ಳಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೆರೆಗೆ ತುತ್ತಾಗಿ ಹಾನಿಗೊಳಗಾದ ಮನೆಗಳಿಗೆ ತಲಾ 25,000 ರೂ. ಕೊಡುತ್ತೇವೆ. ಈ ವೇಳೆ ಶಾಶ್ವತ ಪರಿಹಾರ ನೀಡುವ ಕುರಿತು ಭರವಸೆಯನ್ನೂ ನೀಡುತ್ತೇವೆ. ಸಚಿವ ಆರ್.ಅಶೋಕ್ ಅವರು ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಶಾಶ್ವತ ಪರಿಹಾರ ಸಂಬಂಧ ಚರ್ಚಿಸಿದ್ದಾರೆ ಎಂದೂ ತಿಳಿಸಿದರು.