LPG ಸಬ್ಸಿಡಿ: ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ (Gas cylinder) ಇದೆಯೇ? ಅಗಾದರೆ, ನಿಮಗೆ ಒಳ್ಳೆಯ ಸುದ್ದಿ. ಗ್ಯಾಸ್ ಸಿಲಿಂಡರ್ ಮೇಲೆ ಏಕಾಏಕಿ ರೂ 2,400 ಸಹಾಯಧನ ಲಭ್ಯವಿದೆ. ಹೇಗೆ ಎಂದು ಭಾವಿಸುತ್ತೀರಾ?
ಇದನ್ನು ಓದಿ: Udyog Aadhar: ಆಧಾರ್ ಗೊತ್ತು.. ಇದೇನು ಉದ್ಯೋಗ ಆಧಾರ್? ಪ್ರಯೋಜನಗಳೇನು..ಅರ್ಜಿ ಸಲ್ಲಿಸುವುದು ಹೇಗೆ?
ಕೇಂದ್ರ ಸರ್ಕಾರ (Central Govt) ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದ್ದು, ಇದರಲ್ಲಿ ಪ್ರದಾನ ಮಂತ್ರಿ ಉಜ್ವಲ ಯೋಜನೆಯೂ (Pradan Mantri Ujwala Yojana) ಒಂದಾಗಿದ್ದು, ಗ್ಯಾಸ್ ಸಂಪರ್ಕ (Gas Connection) ಪಡೆದವರು ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ (Subsidy) ಪಡೆಯಬಹುದಾಗಿದ್ದು, ಕೇಂದ್ರ ಸರ್ಕಾರ ಇತ್ತೀಚೆಗೆ ಈ ಪ್ರಯೋಜನವನ್ನು ಇನ್ನೂ ಒಂದು ವರ್ಷದವರೆಗೆ ವಿಸ್ತರಿಸಿದೆ.
ಇದನ್ನು ಓದಿ: ಪ್ರತಿ ತಿಂಗಳು ನಿಮಗೆ ಹಣ ಬೇಕೇ? ಈ 7 ಅದ್ಭುತ ಯೋಜನೆಗಳು ನಿಮಗಾಗಿ!
ಉಜ್ವಲ ಯೋಜನೆಯಡಿಯಲ್ಲಿ (Ujwala Yojana) ಸಂಪರ್ಕ ಪಡೆಯುವವರು ಪ್ರತಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ (14.2 ಕೆಜಿ) ಮೇಲೆ ರೂ 200 ಸಬ್ಸಿಡಿ ಪಡೆಯಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ವರ್ಷಕ್ಕೆ 12 ಸಿಲಿಂಡರ್‌ಗಳವರೆಗೆ ಗ್ಯಾಸ್ ಸಬ್ಸಿಡಿ (Gas Subsidy) ಅನ್ವಯಿಸುತ್ತದೆ.
ಅಂದರೆ, ಪ್ರತಿ ಸಿಲಿಂಡರ್‌ಗೆ ರೂ 200 ಸಬ್ಸಿಡಿ ಎಂದರೆ ವರ್ಷಕ್ಕೆ 12 ಸಿಲಿಂಡರ್‌ಗಳಿಗೆ ರೂ 200 ಸಬ್ಸಿಡಿ ದರದಲ್ಲಿ ಒಟ್ಟು ರೂ 2,400 ಸಹಾಯಧನ ಪಡೆಯಬಹುದಾಗಿದ್ದು, ಇದರಿಂದ LPG ಗ್ರಾಹಕರಿಗೆ ಬಹಳ ಅನುಕೂಲವಾಗಲಿದೆ. ದೇಶದಲ್ಲಿ ಉಜ್ವಲ ಯೋಜನೆಯಡಿ ಸುಮಾರು 10 ಕೋಟಿ ಸಂಪರ್ಕಗಳಿದ್ದು, ಎಲ್ಲರಿಗು 2,400 ಗ್ಯಾಸ್ ಸಿಲಿಂಡರ್ ಸಬ್ಸಿಡಿ (Gas Cylinder Subsidy) ಲಭ್ಯವಿದ್ದು, ಇದರಿಂದ ಕೇಂದ್ರಕ್ಕೆ ರೂ 7680 ಕೋಟಿ ಹೊರೆಯಾಗಲಿದೆ.
ಇದನ್ನು ಓದಿ: ವಿದ್ಯುತ್ ಇಲಾಖೆಯಲ್ಲಿ ವಿವಿಧ ಹುದ್ದೆಗಳು; ಅರ್ಜಿ ಸಲ್ಲಿಸಲು ಏಪ್ರಿಲ್ 28 ಕೊನೆ ದಿನ
ಇನ್ನು, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಈ ಗ್ಯಾಸ್ ಸಬ್ಸಿಡಿಯನ್ನು ನೀಡುತ್ತಿವೆ. ಆದ್ದರಿಂದ ಈ ಯೋಜನೆಯಡಿ ಎಲ್ ಪಿ ಜಿ ಗ್ಯಾಸ್ ಸಂಪರ್ಕ ಪಡೆದವರು ಯಾವ ಸಿಲಿಂಡರ್ ಬಳಸಿದರೂ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗುತ್ತದೆ. ಯಾವುದೇ ಸಮಸ್ಯೆ ಇಲ್ಲ.
ಇದನ್ನು ಓದಿ: Jan Dhan Scheme: ಜನ್ ಧನ್ ಗ್ರಾಹಕರಿಗೆ 10 ಸಾವಿರ ರೂ,1.30 ಲಕ್ಷ ರೂ ಬೆನಿಫಿಟ್ಸ್!
ಇನ್ನು, ಬಿಪಿಎಲ್ ಕಾರ್ಡ್(BPL Card) ಹೊಂದಿರುವವರು ಮಾತ್ರ ಈ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆಯಬಹುದಾಗಿದ್ದು, ಬಡ ಮಹಿಳೆಯರಿಗೆ ಮಾತ್ರ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡಲಾಗುತ್ತಿದ್ದು, ಇದಕ್ಕೆ ಯಾವುದೇ ಠೇವಣಿ ಅಗತ್ಯವಿಲ್ಲ. ಈ ಯೋಜನೆಯಡಿ ಗ್ಯಾಸ್ ಸಂಪರ್ಕ ಉಚಿತವಾಗಿ ಪಡೆಯಲು ಆಧಾರ್ ಕಾರ್ಡ್ (Aadhar Card), ಪಡಿತರ ಚೀಟಿ (Ration Card) , ಬ್ಯಾಂಕ್ ಖಾತೆ (Bank Account) ಮುಂತಾದ ದಾಖಲೆಗಳು ಬೇಕಾಗುತ್ತವೆ.
ಇದನ್ನು ಓದಿ: SBI ನ ಹೊಸ ಯೋಜನೆ ಮತ್ತೆ ಬಂದಿದೆ; ಗ್ರಾಹಕರಿಗೆ ಹೆಚ್ಚು ಲಾಭ, ಕೊನೆಯ ದಿನಾಂಕ ಯಾವಾಗ? ಇಲ್ಲಿದೆ ನೋಡಿ
ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಉಚಿತವಾಗಿ ಪಡೆಯಬಹುದಾಗಿದ್ದು, ಗ್ಯಾಸ್ ಸ್ಟೌವ್ (Gas Stove) ಮತ್ತು ಮೊದಲ ಗ್ಯಾಸ್ ಸಿಲಿಂಡರ್ಗೆ ಯಾವುದೇ ಹಣವನ್ನು ಪಾವತಿಸುವ ಅಗತ್ಯವಿಲ್ಲ. ಇದರಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಬಹುದು. ಈ ಯೋಜನೆಯಡಿ ನೀವು 14.2 ಕೆಜಿ ಗ್ಯಾಸ್ ಸಿಲಿಂಡರ್ ಅಥವಾ 5 ಕೆಜಿ ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳಬಹುದು.
ನೀವು ಈ ಯೋಜನೆಗೆ ಸೇರಲು ಬಯಸಿದರೆ PMYU ಪೋರ್ಟಲ್ ಮೂಲಕ ಹೊಸ ಗ್ಯಾಸ್ ಸಂಪರ್ಕಕ್ಕಾಗಿ (Gas connection) ಅರ್ಜಿ ಸಲ್ಲಿಸಬಹುದು. ಇಲ್ಲದಿದ್ದರೆ, ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ಯಾಸ್ ವಿತರಕರ (gas distributor) ಹತ್ತಿರ ಹೋಗಿ ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಿ ಈ ಯೋಜನೆಗೆ ಸೇರಬಹುದು.
ಇದನ್ನು ಓದಿ: VIMUL ನಲ್ಲಿ ವಿವಿಧ ಹುದ್ದೆಗಳು; ಎಸ್‌ಎಸ್‌ಎಲ್‌ಸಿ, ಐಟಿಐ, ಪದವಿ ವಿದ್ಯಾರ್ಹತೆ, 25 ಏಪ್ರಿಲ್ ಕೊನೆ ದಿನ