ದಕ್ಷಿಣ ಭಾರತದ ಖ್ಯಾತ ನಟಿ ಇಲಿಯಾನಾ ಡಿಕ್ರೂಜ್ (Ileana D’Cruz) ಗರ್ಭಿಣಿಯಾಗಿರುವ (pregnant) ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಾನು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ(Social Media) ಬಹಿರಂಗಪಡಿಸಿದ್ದು, ಎರಡು ಫೋಟೋಗಳನ್ನು ಶೇರ್ ಮಾಡುವ ಮೂಲಕ ಇಲಿಯಾನಾ ತನ್ನ ಗರ್ಭಾವಸ್ಥೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪ್ರಕಟಿಸಿದ್ದಾರೆ.
ಇದನ್ನು ಓದಿ: ಸ್ವಲ್ಪವೂ ಕಡಿಮೆಯಾಗದ ಇಲಿಯಾನಾ ಗ್ರೇಸ್; ಬೆಲ್ಲಿ ಡ್ಯಾನ್ಸ್ ಜೊತೆ ರ್ಯಾಪ್ ಸಾಂಗ್ ನಲ್ಲಿ ಶೇಕಿಂಗ್ ಪರ್ಫಾಮೆನ್ಸ್!
ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಮಗುವಿನ ಟೀ ಶರ್ಟ್ ಅನ್ನು ಹಂಚಿಕೊಂಡಿದ್ದು, ‘ಅತಿ ಶೀಘ್ರದಲ್ಲಿ, ನಿಮ್ಮ ಭೇಟಿ ಪುಟ್ಟ ಪ್ರಿಯತಮೆ’ ಎಂದು ಬರೆದುಕೊಂಡಿದ್ದು, ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಪೋಸ್ಟ್‌ನಲ್ಲಿ ಎರಡು ಚಿತ್ರಗಳಿದ್ದು, ಮೊದಲ ಚಿತ್ರದಲ್ಲಿ “ಮತ್ತೊಂದು ಸಾಹಸ ಶುರು” ಎಂದು ಬರೆದಿರುವ ಟೀ ಶರ್ಟ್ ಇದೆ. ಇನ್ನೊಂದು ಚಿತ್ರ ಲಾಕೆಟ್ ಹೊಂದಿದೆ.
ಇದನ್ನು ಓದಿ: LPG ಗ್ರಾಹಕರಿಗೆ ಗುಡ್ ನ್ಯೂಸ್; ಗ್ಯಾಸ್ ಸಿಲಿಂಡರ್ ಮೇಲೆ ಬರೋಬ್ಬರಿ 2,400 ರೂ ಸಬ್ಸಿಡಿ, ಹೀಗೆ ಪಡೆಯಬಹುದು!
ಈ ಸುದ್ದಿಯ ನಂತರ, ಕೆಲವು ಬಳಕೆದಾರರು ನಟಿ ಇಲಿಯಾನಾ ಅವರನ್ನು ಅಭಿನಂದಿಸುತ್ತಿದ್ದರೆ, ಇನ್ನು ಕೆಲವರು ಮಗುವಿನ ತಂದೆಯ ಹೆಸರನ್ನು ಕೇಳಿದ್ದಾರೆ. ಒಬ್ಬ ಬಳಕೆದಾರ ‘ಮಗುವಿನ ತಂದೆ ಯಾರು’ (Who is the Father of the Baby) ಎಂದು ಪ್ರಶ್ನಿಸಿದರೆ ಮತ್ತೊಬ್ಬ ‘ಮದುವೆಯಾಗದೆ ಗರ್ಭಿಣಿಯಾಗಿದ್ದೀರಾ? ಎಂದು ಕೇಳಿದ್ದಾನೆ.
ಇದನ್ನು ಓದಿ: ಪ್ರತಿ ತಿಂಗಳು ನಿಮಗೆ ಹಣ ಬೇಕೇ? ಈ 7 ಅದ್ಭುತ ಯೋಜನೆಗಳು ನಿಮಗಾಗಿ!
ದಕ್ಷಿಣ ಭಾರತದ ಟಾಲಿವುಡ್, ಕಾಲಿವುಡ್ ಸ್ಟಾರ್ ಹೀರೋಗಳಿಗೆ ಜೋಡಿಯಾಗಿ ನಟಿಸಿದ ಇಲಿಯಾನಾ ಡಿ ಕ್ರೂಜ್ (ileana d’cruz) ನಂತರ ಬಾಲಿವುಡ್ ಕಡೆ ಮುಖ ಮಾಡಿದ್ದಳು. ಆದರೆ, ಬಾಲಿವುಡ್‌ನಲ್ಲಿ ಅವಕಾಶಗಳನ್ನು ಪಡೆದರು ಸಹ ಯಶಸ್ಸು ಸಾದಿಸಲು ಮಾತ್ರ ನಟಿ ಇಲಿಯಾನಾಗೆ ಸಾಧ್ಯವಾಗಲಿಲ್ಲ.ಬಾಲಿವುಡ್ ನಲ್ಲಿ ನಾಲ್ಕು ವರ್ಷಗಳ ಹಿಂದೆ ನಟಿಸಿದ ‘ದಿ ಬಿಗ್ ಬುಲ್’ ಚಿತ್ರವೇ ಇಲಿಯಾನ ಕೊನೆಯ ಚಿತ್ರ.
ಇದನ್ನು ಓದಿ: ವಿದ್ಯುತ್ ಇಲಾಖೆಯಲ್ಲಿ ವಿವಿಧ ಹುದ್ದೆಗಳು; ಅರ್ಜಿ ಸಲ್ಲಿಸಲು ಏಪ್ರಿಲ್ 28 ಕೊನೆ ದಿನ
ಸಂಗೀತ ವೀಡಿಯೊದಲ್ಲಿ ಬೆಲ್ಲಿ ಡಾನ್ಸ್:
ಇತ್ತೀಚಿಗೆ ಜನಪ್ರಿಯ ರ್ಯಾಪರ್ ಬಾದ್‌ಶಾ (Rapper Badshah) ಅವರ ಮ್ಯೂಸಿಕ್ ವೀಡಿಯೊದಲ್ಲಿ ಇಲಿಯಾನಾ ನಟಿಸಿದ್ದು,‘ಸಬ್ ಗಜಾಬ್’ (Sab Gazab) ಹೆಸರಿನ ಈ ವಿಡಿಯೋದಲ್ಲಿ ಮಾದಕ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ತನ್ನ ಟ್ರೇಡ್ ಮಾರ್ಕ್ ಬೆಲ್ಲಿ ಡಾನ್ಸ್ (Belly Dance) ಮೂಲಕ ಸದ್ದು ಮಾಡಿದ್ದು, ಅವರಲ್ಲಿರುವ ಹಿಂದಿನ ಗ್ರೇಸ್ ಸ್ವಲ್ಪವೂ ಕಡಿಮೆ ಮಾಡಿಲ್ಲ ಎಂದು ಸಾಬೀತುಪಡಿಸಿದ್ದಾರೆ..
ಆದರೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಇಲಿಯಾನಾ ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್ (Body Dysmorphic Disorder) ನಿಂದ ಬಳಲುತ್ತಿರುವುದಾಗಿ ಹೇಳಿದ್ದು, ತನಗೆ 12 ವರ್ಷ ವಯಸ್ಸಿನಿಂದಲೂ ಈ ಸಮಸ್ಯೆ ಇದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಸದ್ಯ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದಾಗಿ ಇಲಿಯಾನಾ ತಿಳಿಸಿದ್ದಾರೆ.
ಇದನ್ನು ಓದಿ: Jan Dhan Scheme: ಜನ್ ಧನ್ ಗ್ರಾಹಕರಿಗೆ 10 ಸಾವಿರ ರೂ,1.30 ಲಕ್ಷ ರೂ ಬೆನಿಫಿಟ್ಸ್!
View this post on Instagram