ಗುಜರಾತ್‌ನ ಅಹಮದಾಬಾದ್ ಮತ್ತು ಬೊಟಾಡ್ ಜಿಲ್ಲೆಯ ಹಳ್ಳಿಗಳಲ್ಲಿ ಕಳ್ಳಭಟ್ಟಿ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, 12 ಮಂದಿ ಅಸ್ವಸ್ಥರಾಗಿದ್ದು, 5 ಜನರ ಸ್ಥಿತಿ ಚಿಂತಾಜನಕವಾಗಿದೆ.
ಸ್ಯಾಚೆಟ್‌ಗಳಲ್ಲಿ ಮದ್ಯದ ಬದಲು ಮಿಥೈಲ್ ಮಾರಾಟ ಮಾಡಿದ್ದು, ಘಟನೆಗೆ ಕಾರಣವಾಗಿದ್ದು, ಅದನ್ನು ಸೇವಿಸಿದ ಕನಿಷ್ಠ 24 ಮಂದಿ ಪ್ರಾಣಬಿಟ್ಟಿದ್ದು, 20 ಮಂದಿಯನ್ನ ಆಸ್ಪತ್ರೆಗೆ ದಾಖಲಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆ ಸಂಬಂಧ ಸುಮಾರು 60 ಸಾವಿರ ರೂ. ಮೌಲ್ಯದ 200 ಲೀಟರ್ ಮಿಥೈಲ್ ಸರಬರಾಜು ಮಾಡಿದ ಗೋಡೌನ್ ಮ್ಯಾನೇಜರ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, 450 ಲೀಟರ್ ಮಿಥೈಲ್ ವಶಪಡಿಸಿಕೊಂಡಿದ್ದಾರೆ.
ಇನ್ನು, ಈ ಘಟನೆ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸಲಾಗಿದ್ದು, ಇದರೊಂದಿಗೆ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈಗಾಗಲೇ ಗುಜರಾತ್ ರಾಜ್ಯದಲ್ಲಿ ಮದ್ಯದ ತಯಾರಿಕೆ, ಮಾರಾಟ ಮತ್ತು ಸೇವನೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.