ಭಾರೀ ಏರಿಕೆಯಾದ ಬಂಗಾರ ಬೆಲೆ!; 10 ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ..?

ದೇಶದ ಚಿನಿವಾರ ಪೇಟೆಯಲ್ಲಿ ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಇಂದು ಮತ್ತೆ ಏರಿಕೆ ಕಂಡಿದ್ದು,10 ಗ್ರಾಂ ಚಿನ್ನದ ಬೆಲೆಯಲ್ಲಿ 540ರೂ ಹೆಚ್ಚಳ ಕಂಡಿದೆ. ಆದರೆ ಬೆಳ್ಳಿಯ ಬೆಲೆ 300 ರೂ. ಕುಸಿತವಾಗಿದ್ದು, ಬೆಳ್ಳಿ…

ದೇಶದ ಚಿನಿವಾರ ಪೇಟೆಯಲ್ಲಿ ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಇಂದು ಮತ್ತೆ ಏರಿಕೆ ಕಂಡಿದ್ದು,10 ಗ್ರಾಂ ಚಿನ್ನದ ಬೆಲೆಯಲ್ಲಿ 540ರೂ ಹೆಚ್ಚಳ ಕಂಡಿದೆ. ಆದರೆ ಬೆಳ್ಳಿಯ ಬೆಲೆ 300 ರೂ. ಕುಸಿತವಾಗಿದ್ದು, ಬೆಳ್ಳಿ ಖರೀದಿಸುವವರಲ್ಲಿ ಖುಷಿ ತರಿಸಿದೆ.

ಏರಿಕೆಯಾದ ಬಳಿಕ 22 ಕ್ಯಾರೆಟ್ ಚಿನ್ನಕ್ಕೆ 46,900 ರೂ ಆಗಿದ್ದು, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 540 ರೂ. ಹೆಚ್ಚಳವಾಗಿ 51,160ರೂ. ಆಗಿದೆ. 1 ಕೆಜಿ ಬೆಳ್ಳಿ ಬೆಲೆ 300 ರೂ. ಇಳಿಕೆಯಾಗಿ 55,100 ರೂ. ದಾಖಲಾಗಿದೆ.

ಇನ್ನು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾ. 10 ಗ್ರಾಂ ಚಿನ್ನದ ಬೆಲೆ 46,950 ರೂ. ಇದ್ದು, 1 ಕೆಜಿ ಬೆಳ್ಳಿ ಬೆಲೆ 61,200 ರೂ. ದಾಖಲಾಗಿದೆ.

Vijayaprabha Mobile App free

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.