ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 20,628 ಹೊಸ ಸೋಂಕಿತ ಪ್ರಕರಣಗಳು ದೃಢ ಪಟ್ಟಿದ್ದು, 42,444 ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 21,89,064 ಸೋಂಕಿತರು ಚೇತರಿಸಿಕೊಂಡಿದ್ದಾರೆ.
ಇನ್ನು, ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,50,066 ಇದ್ದು, ಇಂದು 492 ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 28,298 ಏರಿಕೆಯಾಗಿದೆ.
ಇಂದು 20,628 ಕೇಸ್: ಯಾವ ಜಿಲ್ಲೆಯಲ್ಲಿ ಎಷ್ಟು?
ಬಾಗಲಕೋಟೆ-166, ಬಳ್ಳಾರಿ-671, ಬೆಳಗಾವಿ-1027, ಬೆಂ.ಗ್ರಾ-557, ಬೆಂಗಳೂರು-4889, ಬೀದರ್-42, ಚಾಮರಾಜನಗರ-365, ಚಿಕ್ಕಬಳ್ಳಾಪುರ-434, ಚಿಕ್ಕಮಗಳೂರು-843, ಚಿತ್ರದುರ್ಗ-763, ದ.ಕನ್ನಡ-923, ದಾವಣಗೆರೆ-449, ಧಾರವಾಡ-519, ಗದಗ-307, ಹಾಸನ-1024, ಹಾವೇರಿ-194, ಕಲಬುರಗಿ-107, ಕೊಡಗು-333, ಕೋಲಾರ-684, ಕೊಪ್ಪಳ-350, ಮಂಡ್ಯ-453, ಮೈಸೂರು-1720, ರಾಯಚೂರು-340, ರಾಮನಗರ-181, ಶಿವಮೊಗ್ಗ-672, ತುಮಕೂರು-1102, ಉಡುಪಿ-684, ಉ.ಕನ್ನಡ-536, ವಿಜಯಪುರ-210, ಯಾದಗಿರಿ-83 ಪ್ರಕರಣಗಳು ಪತ್ತೆಯಾಗಿವೆ.