ಮೋದಿಯಿಂದ ಉಚಿತವಾಗಿ 2 ಲಕ್ಷ ರೂ!: ಇವರಿಗೆ ಮಾತ್ರ; ಅರ್ಜಿ ಸಲ್ಲಿಸಲು ಜೂ.30 ಕಡೆ ದಿನ

ಕೇಂದ್ರ ಸರ್ಕಾರ ಅದ್ಭುತವಾದ ಆಫರ್ ನೀಡಿದ್ದು, 2 ಲಕ್ಷ ರೂ ಗೆಲ್ಲುವ ಅದ್ಭುತ ಅವಕಾಶವನ್ನು ನೀಡುತ್ತಿದೆ. ಇದಕ್ಕಾಗಿ ನೀವು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ವಿಜೇತರಿಗೆ ನಗದು ಬಹುಮಾನ ಸಿಗುತ್ತದೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಅಪಾಯಗಳ…

money vijayaprabha news

ಕೇಂದ್ರ ಸರ್ಕಾರ ಅದ್ಭುತವಾದ ಆಫರ್ ನೀಡಿದ್ದು, 2 ಲಕ್ಷ ರೂ ಗೆಲ್ಲುವ ಅದ್ಭುತ ಅವಕಾಶವನ್ನು ನೀಡುತ್ತಿದೆ. ಇದಕ್ಕಾಗಿ ನೀವು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ವಿಜೇತರಿಗೆ ನಗದು ಬಹುಮಾನ ಸಿಗುತ್ತದೆ.

ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಭಾಗವಹಿಸಿ ಗೆದ್ದರೆ, 2 ಲಕ್ಷ ರೂ ಪಡೆಯಬಹುದು. ಇದನ್ನು ಟ್ವಿಟರ್ ವೇದಿಕೆಯಲ್ಲಿ ಕೇಂದ್ರ ಸರ್ಕಾರ ಬಹಿರಂಗಪಡಿಸಿದೆ.

ಇದಕ್ಕಾಗಿ ನೀವು ಮೊದಲು ಕಿರುಚಿತ್ರ (Short film) ತಯಾರು ಮಾಡಬೇಕು. ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ನೀವು ತಂಬಾಕಿನಿಂದ ಉಂಟಾಗುವ ಹಾನಿಗಳ ಕುರಿತು ಕಿರು ವೀಡಿಯೊವನ್ನು ಮಾಡಬೇಕು. ಈ ವಿಡಿಯೋ 30 ಸೆಕೆಂಡ್‌ನಿಂದ 60 ಸೆಕೆಂಡುಗಳು ಇದ್ದರೆ ಸಾಕು.18 ವರ್ಷಕ್ಕಿಂತ ಮೇಲ್ಪಟ್ಟವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

Vijayaprabha Mobile App free

ಪ್ರಥಮ ಬಹುಮಾನದಡಿ 2 ಲಕ್ಷ, ಎರಡನೇ ಬಹುಮಾನದ ಅಡಿಯಲ್ಲಿ 1.5 ಲಕ್ಷ ರೂ. ಮತ್ತು ಮೂರನೇ ಬಹುಮಾನದ ಅಡಿಯಲ್ಲಿ 1 ಲಕ್ಷ ರೂ ನೀಡುತ್ತಾರೆ. ಹಾಗೆ ಇತರ ಹತ್ತು ಜನರಿಗೆ ತಲಾ 10,000 ರೂ. ನೀಡುತ್ತಾರೆ. ಜೂನ್ 30 ರವರೆಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ – https://www.mygov.in/task/short-film-making-contest

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.