ಜಿಎಸ್ ಟಿ ಸಂಗ್ರಹದಲ್ಲಿ ದಾಖಲೆ: ಜುಲೈ ತಿಂಗಳಲ್ಲಿ1,48,995 ಕೋಟಿ ಕಲೆಕ್ಷನ್

ಏಪ್ರಿಲ್ 2022 ರಲ್ಲಿ ದಾಖಲೆಯ 1.68 ಲಕ್ಷ ಕೋಟಿ ರೂಪಾಯಿ ಸಂಗ್ರಹದ ಬಳಿಕ, ಜುಲೈ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹ 1,48,995 ಕೋಟಿಗೆ ತಲುಪಿದ್ದು, ಇದು ಜಿಎಸ್‌ಟಿಯನ್ನು ಪರಿಚಯಿಸಿದ ನಂತರದ…

gst vijayaprabhanews

ಏಪ್ರಿಲ್ 2022 ರಲ್ಲಿ ದಾಖಲೆಯ 1.68 ಲಕ್ಷ ಕೋಟಿ ರೂಪಾಯಿ ಸಂಗ್ರಹದ ಬಳಿಕ, ಜುಲೈ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹ 1,48,995 ಕೋಟಿಗೆ ತಲುಪಿದ್ದು, ಇದು ಜಿಎಸ್‌ಟಿಯನ್ನು ಪರಿಚಯಿಸಿದ ನಂತರದ ಎರಡನೇ ಅತಿ ಹೆಚ್ಚು ಆದಾಯವಾಗಿದೆ.

ಹೌದು, ಕಳೆದ ವರ್ಷ ಇದೇ ತಿಂಗಳಲ್ಲಿ 1,16,393 ಕೋಟಿ ರೂ.ಗಳ ಜಿಎಸ್‌ಟಿ ಸಂಗ್ರಹವಾಗಿದ್ದು,ಈ ವರ್ಷ ಈ ಪ್ರಮಾಣ ಶೇಕಡಾ 28 ರಷ್ಟು ಹೆಚ್ಚಾಗಿದೆ. ತಿಂಗಳ ಅವಧಿಯಲ್ಲಿ, ಸರಕುಗಳ ಆಮದುಗಳ ಆದಾಯವು ಶೇಕಡಾ 48 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಬಂದ ಆದಾಯಕ್ಕಿಂತ 22 ಶೇಕಡಾ ಹೆಚ್ಚಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.