BIG SHOCK:100 ಗಡಿ ದಾಟಿದ ಪೆಟ್ರೋಲ್; ಅಲ್ಪ ಏರಿಕೆ ಕಂಡ ಚಿನ್ನದ ಬೆಲೆ; ಎಲ್ಲಿ, ಎಷ್ಟು ಬೆಲೆ? ಇಲ್ಲಿದೆ ಮಾಹಿತಿ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸಲ್ ಬೆಲೆ ಆಗಾಗ ಏರಿಕೆ ಕಾಣುತ್ತಲೇ ಇರುವ ಪರಿಣಾಮ ಮುಂಬೈನಲ್ಲಿ ಪೆಟ್ರೋಲ್ ಈಗಾಗಲೇ ₹100 ಗಡಿ ದಾಟಿದೆ. ಹೌದು, ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ ₹100.98 ಮತ್ತು ಪ್ರತೀ…

gold, silver, petrol and diesel prices vijayaprabha

ಬೆಂಗಳೂರು: ಪೆಟ್ರೋಲ್ ಮತ್ತು ಡೀಸಲ್ ಬೆಲೆ ಆಗಾಗ ಏರಿಕೆ ಕಾಣುತ್ತಲೇ ಇರುವ ಪರಿಣಾಮ ಮುಂಬೈನಲ್ಲಿ ಪೆಟ್ರೋಲ್ ಈಗಾಗಲೇ ₹100 ಗಡಿ ದಾಟಿದೆ.

ಹೌದು, ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ ₹100.98 ಮತ್ತು ಪ್ರತೀ ಲೀಟರ್ ಡೀಸಲ್ ದರ ₹92.99 ರೂ.ಗೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್-₹94.76 ಡೀಸಲ್-₹85.66, ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ₹94.76 & ₹88.51, ಚೆನ್ನೈನಲ್ಲಿ ₹96.92 & ₹90.38 ಹಾಗೂ ಬೆಂಗಳೂರಿನಲ್ಲಿ ಪೆಟ್ರೋಲ್-₹97.92 & ಡೀಸಲ್-90.81 ರೂ.ಗೆ ಏರಿಕೆಯಾಗಿದೆ.

ರಾಜ್ಯದ ವಿವಿಧ ನಗರಗಳಲ್ಲಿ ಪೆಟ್ರೋಲ್, ಡಿಸೇಲ್ ದರ:

Vijayaprabha Mobile App free

ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಿದ್ದು ವಿವಿಧ ನಗರಗಳಲ್ಲಿ ಏರಿಕೆಯಾದ ನಂತರ ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ಬೆಲೆ ₹97.92/ ಡೀಸೆಲ್ ದರ ₹90.81 ಇದ್ದು, ಚಿಕ್ಕಮಗಳೂರಿನಲ್ಲಿ 1 ಲೀ. ಪೆಟ್ರೋಲ್ ಬೆಲೆ ₹98.06 ಇದೆ. ಇನ್ನು ದಾವಣಗೆರೆಯಲ್ಲಿ 1 ಲೀ. ಪೆಟ್ರೋಲ್ ದರ ₹99.13 ಆಗಿದೆ.

ಶುಕ್ರವಾರದ ಚಿನ್ನ, ಬೆಳ್ಳಿ ದರ:

ದೇಶದಲ್ಲಿ ಶುಕ್ರವಾರ ಚಿನ್ನ, ಬೆಳ್ಳಿ ಬೆಲೆ ಅಲ್ಪ ಏರಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,823 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹46,200 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹50,400 ಇದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹72,000 ಆಗಿದೆ.

ಹೈದರಾಬಾದಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹46,200 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹50,400 ದಾಖಲಾಗಿದ್ದು, ಒಂದು ಕೆಜಿ ಬೆಳ್ಳಿ ದರ ₹77,500 ಆಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.