GOOD NEWS: ನೀವು PPF ಯೋಜನೆಗೆ ಸೇರಿದರೆ ಕೈಗೆ 10 ಲಕ್ಷ ರೂ; ಇನ್ನೂ ಅನೇಕ ಪ್ರಯೋಜನಗಳು!

ಸಾರ್ವಜನಿಕ ಭವಿಷ್ಯ ನಿಧಿ ಪಿಪಿಎಫ್ ( Public Provident Fund) ಯೋಜನೆ ಕೇಂದ್ರ ಸರ್ಕಾರ ನೀಡುವ ಯೋಜನೆಗಳಲ್ಲಿ ಒಂದು. ಈ ಯೋಜನೆಗೆ ಸೇರ್ಪಡೆಗೊಳ್ಳುವುದರಿಂದ ನಿಮಗೆ ಖಚಿತವಾದ ಲಾಭ ದೊರೆಯುತ್ತದೆ. ಯಾವುದೇ ಅಪಾಯವಿಲ್ಲ. ನಿಮ್ಮ ಹತ್ತಿರದ…

PPF scheme vijayaprabha news

ಸಾರ್ವಜನಿಕ ಭವಿಷ್ಯ ನಿಧಿ ಪಿಪಿಎಫ್ ( Public Provident Fund) ಯೋಜನೆ ಕೇಂದ್ರ ಸರ್ಕಾರ ನೀಡುವ ಯೋಜನೆಗಳಲ್ಲಿ ಒಂದು. ಈ ಯೋಜನೆಗೆ ಸೇರ್ಪಡೆಗೊಳ್ಳುವುದರಿಂದ ನಿಮಗೆ ಖಚಿತವಾದ ಲಾಭ ದೊರೆಯುತ್ತದೆ. ಯಾವುದೇ ಅಪಾಯವಿಲ್ಲ. ನಿಮ್ಮ ಹತ್ತಿರದ ಬ್ಯಾಂಕ್‌ಗೆ ಹೋಗಿ ಈ ಯೋಜನೆಗೆ ಸೇರಬಹುದು. ಅಲ್ಲದೆ ಪೋಸ್ಟ್ ಆಫೀಸ್ ನಲ್ಲಿ ಕೂಡ ಪಿಪಿಎಫ್ ಯೋಜನೆ ಲಭ್ಯವಿದೆ.

ಸಾರ್ವಜನಿಕ ಭವಿಷ್ಯ ನಿಧಿ ( Public Provident Fund) ಯೋಜನೆ ಮುಕ್ತಾಯ ಅವಧಿ 15 ವರ್ಷಗಳು. ಅಂದರೆ ನೀವು 15 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಬೇಕು. ಪಿಪಿಎಫ್ ಯೋಜನೆಗೆ ಸೇರುವ ಮೂಲಕ ನೀವು ತೆರಿಗೆ ಕಡಿತ ಪ್ರಯೋಜನಗಳನ್ನು ಸಹ ಪಡೆಯಬಹುದು. ಠೇವಣಿ ಇಟ್ಟ ಹಣ, ಗಳಿಸಿದ ಬಡ್ಡಿ, ತೆಗೆದುಕೊಂಡ ಹಣಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ.

ಪಿಪಿಎಫ್ ಯೋಜನೆಯಲ್ಲಿ ಪ್ರಸ್ತುತ ಶೇಕಡಾ 7.1 ರಷ್ಟು ಬಡ್ಡಿ ಸಿಗುತ್ತದೆ. ಪಿಪಿಎಫ್ ಯೋಜನೆಯಲ್ಲಿ ನೀವು ತಿಂಗಳಿಗೆ 3,000 ರೂಗಳನ್ನು ಹಾಕಿದರೆ, ನೀವು ಮುಕ್ತಾಯಕದ ಸಮಯಕ್ಕೆ ಸುಮಾರು 10 ಲಕ್ಷ ರೂ. ಪಡೆಯಬಹುದು. ನೀವು ಹೂಡಿಕೆ ಮಾಡುವ ಹಣ ರೂ 5.4 ಲಕ್ಷ ಆಗುತ್ತದೆ. ನಿಮಗೆ ಹೆಚ್ಚುವರಿ ಬಡ್ಡಿ ರೂಪದಲ್ಲಿ 4.4 ಲಕ್ಷ ರೂ. ಸಿಗುತ್ತದೆ.

Vijayaprabha Mobile App free

ಪಿಪಿಎಫ್ ಯೋಜನೆಗೆ ಸೇರುವವರು ದೀರ್ಘಕಾಲದವರೆಗೆ ಹೂಡಿಕೆ ಮಾಡಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು. ಇನ್ನೂ ಮೂರು ತಿಂಗಳಿಗೊಮ್ಮೆ ಬಡ್ಡಿದರ ಬದಲಾಗುವ ಸಾಧ್ಯತೆಯಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಈ ಯೋಜನೆಯ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತದೆ. ಅಂದರೆ ದರಗಳು ಏರಿಕೆಯಾಗಬಹುದು. ಇಲ್ಲದಿದ್ದರೆ ಅದು ಕಡಿಮೆಯಾಗಬಹುದು, ಇಲ್ಲದಿದ್ದರೆ ಸ್ಥಿರವಾಗಿ ಮುಂದುವರಿಯಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.