ರಷ್ಯಾ & ಉಕ್ರೇನ್ ಮಹಾಯುದ್ಧ: ದೇಶದಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ!

ಎರಡು ದಿನಗಳಿಂದ ಇಳಿಕೆಯತ್ತ ಸಾಗಿದ್ದ ಚಿನ್ನದ ಬೆಲೆ ನಿನ್ನೆಯಿಂದ (ಗುರುವಾರ) ಮತ್ತೆ ಏರಿಕೆಯಾಗಿದ್ದು, ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ನಂತರ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಇದರಿಂದ ಚಿನ್ನಾಭರಣ ಖರೀದಿಸುವವರಿಗೆ ಮತ್ತೆ…

ಎರಡು ದಿನಗಳಿಂದ ಇಳಿಕೆಯತ್ತ ಸಾಗಿದ್ದ ಚಿನ್ನದ ಬೆಲೆ ನಿನ್ನೆಯಿಂದ (ಗುರುವಾರ) ಮತ್ತೆ ಏರಿಕೆಯಾಗಿದ್ದು, ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ನಂತರ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಇದರಿಂದ ಚಿನ್ನಾಭರಣ ಖರೀದಿಸುವವರಿಗೆ ಮತ್ತೆ ನಿರಾಸೆಯಾದಂತಾಗಿದೆ.

ಹೌದು, ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 930 ರೂ. ಏರಿಕೆಯಾಗಿದ್ದು, ಅತ್ತ ಬೆಳ್ಳಿ ದರವೂ ಭಾರೀ ಏರಿಕೆಯಾಗಿದ್ದು, ಒಂದೇ ದಿನದಲ್ಲಿ ಚಿನ್ನ- ಬೆಳ್ಳಿಯ ಬೆಲೆ ಮತ್ತೆ ಗಗನಕ್ಕೇರಲು ಶುರುವಾಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗಿದ್ದು, ಇಂದು ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 850 ರೂ. ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 930 ರೂ. ಏರಿಕೆಯಾಗಿದೆ.

ವಿವಿಧ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:

Vijayaprabha Mobile App free

ಬೆಂಗಳೂರು- 51,110 ರೂ, ಹೈದರಾಬಾದ್- 51,110 ರೂ, ಕೇರಳ- 51,110 ರೂ, ಚೆನ್ನೈ- 52,660 ರೂ, ಮುಂಬೈ- 51,110 ರೂ, ದೆಹಲಿ- 51,110 ರೂ, ಕೊಲ್ಕತ್ತಾ- 51,110 ರೂ, ಪುಣೆ- 51,200 ರೂ, ಮಂಗಳೂರು- 51,110 ರೂ, ಮೈಸೂರು- 51,110 ರೂ. ಇದೆ. 2 ದಿನಗಳ ಹಿಂದೆ 280 ರೂ. ಇಳಿಕೆಯಾಗಿದ್ದ ಚಿನ್ನದ ದರ ಇಂದು 930 ರೂ. ಏರಿಕೆ ಕಂಡಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.