ಮಹಾರಾಷ್ಟ್ರ, ಗುಜರಾತ್ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಮಹಾರಾಷ್ಟ್ರ, ಗುಜರಾತ್ ರಾಜ್ಯಗಳ ಜಲಾಶಯಗಳು ಬಾರಿ ಮಳೆಯಿಂದ ತುಂಬಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಅಲ್ಲಿನ ಜಲಾಶಯಗಳಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ಬೆಳಗಾವಿಯ ವೇದಗಂಗಾ, ದೂಧ್‌ಗಂಗಾ ನದಿ ತುಂಬಿ ಹರಿಯುತ್ತಿದೆ.
ಇನ್ನು, ಬೆಳಗಾವಿಯ ವೇದಗಂಗಾ, ದೂಧ್‌ಗಂಗಾ ನದಿಗಳಲ್ಲಿ 27 ಸಾವಿರ ಕ್ಯೂಸೆಕ್ ಗಿಂತ ಅಧಿಕ ಒಳಹರಿವು ಉಂಟಾಗಿರುವುದರಿಂದ ನೂರಾರು ಎಕರೆ ಕಬ್ಬು ತೋಟ ಜಲಾವೃತವಾಗಿದ್ದು, ಈಗಾಗಲೇ ಸದಲಗಾ-ಬೋರಗಾಂವ ಸೇತುವೆಗಳು ಕೂಡ ಮುಳುಗಡೆಯಾಗಿದೆ.