ಹುಬ್ಬಳ್ಳಿ: ಫ್ಲೈಓವರ್ ಕಾಮಗಾರಿಯ ರಾಡ್ ಬಿದ್ದು ಗಾಯಗೊಂಡಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್‌ಐ ನಾಭಿರಾಜ್ ದಯಣ್ಣವರ (59)ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸೆಪ್ಟೆಂಬರ್ 10ರಂದು ಕೋರ್ಟ್ ವೃತ್ತದ ಬಳಿ ಕರ್ತವ್ಯದ ವೇಳೆ ಫ್ಲೈಓವರ್ ಕಾಮಗಾರಿಯ ರಾಡ್ ಬಿದ್ದು ಎಎಸ್‌ಐ ನಾಭಿರಾಜ್ ದಯಣ್ಣವರ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೆ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು (ಸೆ.15) ಚಿಕಿತ್ಸೆ ಫಲಿಸದೆ ಎಎಸ್‌ಐ ನಾಭಿರಾಜ್ ದಯಣ್ಣವರ ಕೊನೆಯುಸಿರೆಳೆದಿದ್ದಾರೆ. ಗುತ್ತಿಗೆದಾರರ ನಿರ್ಲಕ್ಷ್ಯ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ಝಂಡು ಕನ್ಸ್ಟ್ರಕ್ಷನ್ ನಿರ್ದೇಶಕರಾದ ರಾಮ್‌ಕುಮಾರ್, ಮೋಹಿತ್ ಮತ್ತು ಮನುದೀಪ್, ಯೋಜನಾ ನಿರ್ದೇಶಕ, ಎಂಜಿನಿಯರ್, ಸುರಕ್ಷತಾ ಅಧಿಕಾರಿ, ಕ್ರೇನ್ ಆಪರೇಟರ್ ಮತ್ತು ಕಾರ್ಮಿಕರ ವಿರುದ್ಧ ಎಎಸ್‌ಐ ಪುತ್ರ ರುಷಭ್ ದೂರು ದಾಖಲಿಸಿದ್ದಾರೆ.
ಫ್ಲೈಓವರ್ ಕಾಮಗಾರಿ ರಾಡ್ ಬಿದ್ದು ಗಾಯಗೊಂಡಿದ್ದ ಎಎಸ್‌ಐ ಸಾವು..!
ಹುಬ್ಬಳ್ಳಿ: ಫ್ಲೈಓವರ್ ಕಾಮಗಾರಿಯ ರಾಡ್ ಬಿದ್ದು ಗಾಯಗೊಂಡಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್‌ಐ ನಾಭಿರಾಜ್ ದಯಣ್ಣವರ (59)ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸೆಪ್ಟೆಂಬರ್ 10ರಂದು ಕೋರ್ಟ್ ವೃತ್ತದ ಬಳಿ ಕರ್ತವ್ಯದ ವೇಳೆ ಫ್ಲೈಓವರ್ ಕಾಮಗಾರಿಯ ರಾಡ್…
![](https://vijayaprabha.com/wp-content/uploads/2024/09/WhatsApp-Image-2024-09-15-at-10.53.43-AM.jpeg)
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.