Cooperative Milk Producers Association : ಕರ್ನಾಟಕದ ಪ್ರಮುಖ ಹಾಲು ಉತ್ಪಾದಕರ ಒಕ್ಕೂಟ KMF SHIMUL (ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್) ಸಂಸ್ಥೆಯು ಉದ್ಯೋಗಾಕಾಂಕ್ಷಿಗಳಿಗೆ ಹೊಸ ಅವಕಾಶವನ್ನು ನೀಡಿದೆ. ಸಂಸ್ಥೆಯು 27 ಸಹಾಯಕ ವ್ಯವಸ್ಥಾಪಕ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರಮುಖ ಮಾಹಿತಿ

- ಸಂಸ್ಥೆಯ ಹೆಸರು: KMF SHIMUL
- ಹುದ್ದೆ ಹೆಸರು: ಸಹಾಯಕ ವ್ಯವಸ್ಥಾಪಕ
- ಹುದ್ದೆಗಳ ಸಂಖ್ಯೆ: 27
- ವೇತನ ಶ್ರೇಣಿ ತಿಂಗಳಿಗೆ : ₹34,100 – ₹99,400
ಶಿಕ್ಷಣ ಅರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ B.Sc ಪದವಿ ಪಡೆದಿರಬೇಕು. ಸೆಪ್ಟೆಂಬರ್ 29, 2025 ಸಂಜೆ 5:00 ಗಂಟೆ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ವಯೋಮಿತಿ & ಸಡಿಲಿಕೆ
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 40 ವರ್ಷ
- 2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
- SC, ST ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
ಅರ್ಜಿ ಶುಲ್ಕ
- 2A, 2B, 3A, 3B ಅಭ್ಯರ್ಥಿಗಳು: ₹500
- ಇತರೆ ಅಭ್ಯರ್ಥಿಗಳು: ₹1000
ಅರ್ಜಿ ಸಲ್ಲಿಸುವ ವಿಧಾನ
- ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ
- ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಫಾರ್ಮ್ ಭರ್ತಿ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
- ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಸೇರಿಸಿ.
- ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



