ಉದ್ಯೋಗ ಮಾಹಿತಿ (Jobs): ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ರೈಲ್ವೆ ಇಲಾಖೆಯು (Railway Board) ಭರ್ಜರಿ ಸಿಹಿಸುದ್ದಿ ನೀಡಿದ್ದು, ಬರೋಬ್ಬರಿ 11,127 ‘ಸಹಾಯಕ ಲೋಕೋ ಪೈಲಟ್’ (Assistant Loco Pilot – ALP) ಹುದ್ದೆಗಳ ಭರ್ತಿಗೆ ಇಲಾಖೆ ಚಾಲನೆ ನೀಡಿದ್ದು, ಈ ತಿಂಗಳ ಅಂತ್ಯದೊಳಗೆ ಅಧಿಕೃತ ಅಧಿಸೂಚನೆ (Notification) ಹೊರಬೀಳಲಿದೆ. ಕೇವಲ 10ನೇ ತರಗತಿ ಹಾಗೂ ಐಟಿಐ ಮುಗಿಸಿದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ.
ಇದನ್ನೂ ಓದಿ: Govt Jobs: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ; ಕೂಡಲೇ ಅರ್ಜಿ ಸಲ್ಲಿಸಿ
ಹುದ್ದೆಗಳ ಸಂಕ್ಷಿಪ್ತ ವಿವರ:

- ಇಲಾಖೆ: ರೈಲ್ವೆ ನೇಮಕಾತಿ ಮಂಡಳಿ (RRB)
- ಹುದ್ದೆಯ ಹೆಸರು: ಸಹಾಯಕ ಲೋಕೋ ಪೈಲಟ್ (ALP)
- ಒಟ್ಟು ಹುದ್ದೆಗಳು: 11,127
- ಆರಂಭಿಕ ವೇತನ: ತಿಂಗಳಿಗೆ ₹25,000
ಶೈಕ್ಷಣಿಕ ಅರ್ಹತೆ ಹಾಗೂ ವಯೋಮಿತಿ:
ವಿದ್ಯಾರ್ಹತೆ: ಮಾನ್ಯತೆ ಪಡೆದ ಬೋರ್ಡ್‌ನಿಂದ ಕಡ್ಡಾಯವಾಗಿ 10ನೇ ತರಗತಿ (SSLC) ಪಾಸ್ ಮಾಡಿರಬೇಕು ಹಾಗು ಜೊತೆಗೆ ಸಂಬಂಧಪಟ್ಟ ವೃತ್ತಿಯಲ್ಲಿ ಐಟಿಐ (ITI) ಅಥವಾ ಡಿಪ್ಲೊಮಾ (Diploma) ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷದೊಳಗಿರಬೇಕು (ಮೀಸಲಾತಿ ಅನ್ವಯ ವಯೋಮಿತಿ ಸಡಿಲಿಕೆ ಇರಲಿದೆ).
ಇದನ್ನು ಓದಿ: RBI Recruitment 2026: ಡಿಗ್ರಿ ಆಗಿದ್ರೂ ಸಾಕು, ಆರ್‌ಬಿಐ (RBI) ನಲ್ಲಿ ಭರ್ಜರಿ ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ
ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT – Computer Based Test) ನಡೆಸಲಾಗುವುದು. ಇದರಲ್ಲಿ ತೇರ್ಗಡೆಯಾದವರನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಈ ತಿಂಗಳಾಂತ್ಯಕ್ಕೆ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಕೆಯ ಲಿಂಕ್ ಆಕ್ಟಿವ್ ಆಗಲಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳನ್ನು ಈಗಲೇ ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.




