DRDO applications | ಭವಿಷ್ಯದ ದೃಷ್ಟಿಯಿಂದ ಮಿಲಿಟರಿ ಸಂಶೋಧನಾ ಕ್ಷೇತ್ರದಲ್ಲಿ ತರಬೇತಿ ಪಡೆಯಲು ಬಯಸುವ ಯುವಕರಿಗೆ ಇಲ್ಲೊಂದು ಉತ್ತಮ ಅವಕಾಶವಿದೆ.
ಹೌದು, ದೇಶದ ಹೆಮ್ಮೆಯ ಡಿಆರ್‌ಡಿಒ ಅಪ್ರೆಂಟಿಸ್ ನೇಮಕಾತಿ 2025 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹೈದರಾಬಾದ್‌ನಲ್ಲಿರುವ ಸಂಶೋಧನಾ ಕೇಂದ್ರ ಇಮಾರತ್‌ನಲ್ಲಿ ತರಬೇತಿ ನೀಡಲು ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಇದು ಒಂದು ವರ್ಷದ ತರಬೇತಿ ಕಾರ್ಯಕ್ರಮಕ್ಕಾಗಿ ಬಿಡುಗಡೆಯಾದ ಅಧಿಸೂಚನೆಯಾಗಿದೆ. ಹಾಗಾಗಿ, ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸೆಪ್ಟೆಂಬರ್ 27, 2025 ರಿಂದ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 28, 2025 ರವರೆಗೆ ಮುಂದುವರಿಯುತ್ತದೆ.
ಇನ್ನು, ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 195 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇವುಗಳಲ್ಲಿ 40 ಪದವೀಧರ ಅಪ್ರೆಂಟಿಸ್, 20 ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್ ಮತ್ತು 135 ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಾಗಿದೆ. ಹಾಗಾಗಿ, ಶೈಕ್ಷಣಿಕ ಅರ್ಹತೆಗಳು ಪ್ರತಿಯೊಂದು ವರ್ಗದ ಪ್ರಕಾರ ಇರಬೇಕು. ಅಂದ್ರೆ ಮೆಕ್ಯಾನಿಕಲ್ ಅಥವಾ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಇಸಿಇ, ಇಇಇ, ಸಿಎಸ್‌ಇ, ಬಿಇ ಅಥವಾ ಬಿಟೆಕ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಪದವೀಧರ ಅಪ್ರೆಂಟಿಸ್‌ಗಳ ಹುದ್ದೆಗಳಿಗೆ ಅರ್ಹರು.




