BPL Ration card: ಗ್ಯಾರಂಟಿ ಯೋಜನೆ ಲಾಭಕ್ಕಾಗಿ ಬಿಪಿಎಲ್ ಕಾರ್ಡ್​ಗೆ ಮುಗಿಬಿದ್ದ ಜನರು; ಬಿಗ್ ಶಾಕ್ ನೀಡಿದ ಆಹಾರ ಇಲಾಖೆ!

Vijayaprabha

BPL Ration card:  ಈ ಬಾರಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ನೀಡುವ ಆಶ್ವಾಸನೆಯನ್ನು ನೀಡಿದ ಕಾಂಗ್ರೆಸ್‌ ಸರ್ಕಾರ ಇವುಗಳನ್ನು ಜಾರಿಗೆ ತರಲು ಮುಂದಾಗಿದ್ದು, ಈ ಎಲ್ಲಾ ಯೋಜನೆಗಳಿಗೆ ಮುಖ್ಯವಾಗಿ ಮೊದಲು ಬಿಪಿಎಲ್‌ ರೇಷನ್‌ ಕಾರ್ಡ್ (BPL Ration Card) ಬೇಕು. ಈ ಯೋಜನೆಗಳ ಲಾಭ ಪಡೆಯಲು ಜನರು ಮುಂದಾಗಿದ್ದು, ಇದರಿಂದಾಗಿ ಬಿಪಿಎಲ್‌ ರೇಷನ್‌ ಕಾರ್ಡ್‌ಗೆ ಜನರು ಮುಗಿ ಬಿದ್ದಿದ್ದಾರೆ.

ಇದನ್ನು ಓದಿ: ಪತಿ, ಪತ್ನಿ ಇಬ್ಬರೂ ಪಿಎಂ ಕಿಸಾನ್ ಪ್ರಯೋಜನ ಪಡೆಯಬಹುದೇ..? ಕೇಂದ್ರ ಸರ್ಕಾರದಿಂದ ಸ್ಪಷ್ಟ ಉತ್ತರ..!

ಹೌದು, ಕಾಂಗ್ರೇಸ್‌ ಈ ಎಲ್ಲಾ ಆಶ್ವಾಸನೆಗಳನ್ನು ಜಾರಿಗೆ ತರಲು ಸಿದ್ದರಾಮಯ್ಯ ಸರ್ಕಾರವು ಮುಂದಾಗಿದ್ದು, ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ಇವೆಲ್ಲವನ್ನೂ ಜಾರಿಗೆ ತರಲು ಸರ್ಕಾರ ಘೋಷಣೆ ಮಾಡಿದೆ. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರುಪಾಯಿ, ಪ್ರತಿ ಮನೆಗೂ 200 ಯೂನಿಟ್‌ ವಿದ್ಯುತ್‌ ಉಚಿತ, ಪ್ರತಿ ಕುಟುಂಬದ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ ಹಾಗು ನಿರುದ್ಯೋಗಿ ಯುವ ಪಧವೀದರರಿಗೆ ಧನ ಸಹಾಯ ಸೇರಿದಂತೆ 5 ಗ್ಯಾರಂಟಿಗಳನ್ನು ಕಾಂಗ್ರೇಸ್‌ ಸರ್ಕಾರ ನೀಡಿದ್ದು, ಇವುಗಳನ್ನು ಮುಂದಿನ ದಿನಗಳಲ್ಲಿಅನುಷ್ಠಾನಕ್ಕೆ ತರುವುದು ಗ್ಯಾರಂಟಿ ಎಂದು ಸ್ಪಷ್ಟಪಡಿಸಿದೆ.

ಇದನ್ನು ಓದಿ: 2 ಸಾವಿರ ರೂ ನೋಟು ಬದಲಾಯಿಸಿದ್ದರೆ ಏನಾಗುತ್ತದೆ?ಸೆಪ್ಟೆಂಬರ್ 30ರ ನಂತರ ನಡೆಯುವುದು ಇದೇನಾ?

ಹೀಗಾಗಿ, ಜನರಿಗೆ ನೀಡಿದಂತಹ ಉಚಿತವಾದ ಎಲ್ಲಾ ಭರವಸೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಿದ್ದು, ಬಿಪಿಎಲ್‌ ರೇಷನ್‌ ಕಾರ್ಡ್‌ (BPL Ration Card) ಇಲ್ಲದೇ ಹೋದರೆ ಈ ಎಲ್ಲಾ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಆಗಾಗಿ ರಾಜ್ಯದ ಜನತೆಯು ಬಿಪಿಎಲ್‌ ರೇಷನ್ ಕಾರ್ಡ್‌ ಪಡೆಯಲು ಮುಂದಾಗಿದ್ದು, ಹೊಸ ಬಿಪಿಎಲ್‌ ರೇಷನ್‌ ಕಾರ್ಡ್‌ ಮಾಡಿಸಲು ಮುಗಿಬಿದ್ದಿದ್ದಾರೆ.

ಬಿಪಿಎಲ್‌ ರೇಷನ್‌ ಕಾರ್ಡ್‌ ಮಾಡಿಸಲು ಮುಗಿಬಿದ್ದ ಜನ, ಅರ್ಜಿ ಪ್ರಕ್ರಿಯೆ ಸ್ಥಗಿತ

BPL Ration Card

ಸಾರ್ವಜನಿಕರು ತಮ್ಮ ಹೆಸರಿನಲ್ಲಿ ಬಿಪಿಎಲ್ ಪಡಿತರ ಚೀಟಿ ಮಾಡಿಸಲು ಎಲ್ಲಾ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಬಿಪಿಎಲ್‌ ಕಾರ್ಡ್‌ ಮಾಡಿಸಲು ಮುಂದಾಗಿದ್ದು, ಹೆಚ್ಚು ಜನ ಒಂದೇ ಸರಿ ಕಾರ್ಡ್‌ ಮಾಡಿಸಲು ಹೋಗಿರುವುದರಿಂದ ಇದರಿಂದಾಗಿ ವೆಬ್ಸೈಟ್‌ ನಿಧಾನವಾಗಿದ್ದು, ಕೆಲವೆಡೆ ಓಪನ್‌ ಕೂಡ ಆಗುತ್ತಿಲ್ಲ.

ಈ ಸಮಸ್ಯೆಯನ್ನು ಮನಗಂಡ ಆಹಾರ ಇಲಾಖೆ ಹೊಸ ಪಡಿತರ ಚೀಟಿ ಪಡೆಯುವ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಹೊಸ ಪಡಿತರ ಚೀಟಿಗಾಗಿ ಅರ್ಜಿ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಮ್ಮ ವೆಬ್ಸೈಟ್‌ನಲ್ಲಿಯೇ ತಿಳಿಸಿದೆ. ಇದರಿಂದ ಸರ್ಕಾರದ ಉಚಿತ ಕೊಡುಗೆಗಳನ್ನು ಪಡೆಯಲು ಮುಂದಾಗಿದ್ದ ಕೆಲವು ಜನರಿಗೆ ನಿರಾಶೆಯಾಗಿದೆ.

ಇದನ್ನು ಓದಿ: ನಟಿ ರಂಜಿತಾ ಮದುವೆಯ ಫೋಟೋಗಳೂ ಇವೆ; ಇಬ್ಬರೂ ಮಕ್ಕಳು ನಿತ್ಯಾನಂದ ಸ್ವಾಮಿ ಜೊತೆಯೇ ಇದ್ದಾರೆ..!

ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿದ ಬೇಡಿಕೆ

ರಾಜ್ಯದಲ್ಲಿ 2023 ಜನವರಿಯಿಂದ ಮೇ 20ರವರೆಗೆ ತುರ್ತು ಆರೋಗ್ಯ ಸೇವಾ ಸೌಲಭ್ಯಕ್ಕಾಗಿ ಹೊಸ ಪಡಿತರ ಚೀಟಿ ಪಡೆಯಲು ಸುಮಾರು 4.25 ಲಕ್ಷ ಜನ ಅರ್ಜಿ ಸಲ್ಲಿಸಿದ್ದು, ಸುಮಾರು 2.88 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿಗಳು ವಿಲೇವಾರಿಗಾಗಿ ಕಾಯುತ್ತಿವೆ. ಎರಡು ತಿಂಗಳಿಂದ ಸರ್ವರ್, ದಾಖಲೆಗಳ ಸಮಸ್ಯೆ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹೊಸ ಅರ್ಜಿಗಳ ವಿಲೇವಾರಿ, ಹೊಸ ಕಾರ್ಡ್ ವಿತರಣೆ ಕಾರ್ಯ ಸ್ಥಗಿತಗೊಂಡಿದೆ.

ಇದನ್ನು ಓದಿ: ಅಂಚೆ ಇಲಾಖೆಯಲ್ಲಿ 12,828 ಹುದ್ದೆಗಳಿಗೆ ಅರ್ಜಿ ಆಹ್ವಾನ, SSLC, PUC ವಿದ್ಯಾರ್ಹತೆ

ಈಗ ಕಾಂಗ್ರೆಸ್​ನ ಐದು ಗ್ಯಾರಂಟಿ ಯೋಜನೆಗಳ ಘೊಷಣೆ ನಂತರ ಮತ್ತು ಚುನಾವಣೆ ಫಲಿತಾಂಶದ ಬಳಿಕ ಬಿಪಿಎಲ್ ಕಾರ್ಡ್​ಗಳಿಗೆ ಬೇಡಿಕೆ ಹೆಚ್ಚಿದ್ದು, ಪ್ರತಿ ನಿತ್ಯ 8ರಿಂದ 10 ಜನರು ಹೊಸದಾಗಿ ಬಿಪಿಎಲ್ ಕಾರ್ಡ್​ಗಾಗಿ ಅರ್ಜಿ ಸಲ್ಲಿಸುತ್ತಿದ್ದು, ನೂತನ ಸರ್ಕಾರದ ಸೂಚನೆಯ ಬಳಿಕ ಹೊಸ ಕಾರ್ಡ್ ಗಳ ವಿತರಣೆ, ಅರ್ಜಿಗಳ ವಿಲೇವಾರಿ (Disposal of Applications) ಕೆಲಸ ಆರಂಭವಾಗಲಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

ಇದನ್ನು ಓದಿ: ಪಾನ್ ಕಾರ್ಡ್ ಇರುವವರಿಗೆ ಬಿಗ್ ಅಲರ್ಟ್, ಹೀಗೆ ಮಾಡಿದರೆ ರೂ.10 ಸಾವಿರ ಭಾರಿ ದಂಡ!

ಬಿಪಿಎಲ್‌ ಕಾರ್ಡ್‌ ಮಾಡಿಸುವುದು ಹೇಗೆ? ಬೇಕಾಗುವ ದಾಖಲೆಗಳು

  • ಸರ್ಕಾರದ ಉಚಿತ ಕೊಡುಗೆಗಳನ್ನು ಪಡೆಯಲು ಬಿಪಿಎಲ್‌ ಕಾರ್ಡ್‌ ಮಾಡಿಸುವವರು ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
  • ಅಥವಾ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.kar.nic.in/ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
  • ಈ ಕಾರ್ಡ್‌ ಮಾಡಿಸಲು ಆಧಾರ್‌ ಕಾರ್ಡ್‌, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು.
  • ಇನ್ನು, 6 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಅಗತ್ಯವಿರುವುದಿಲ್ಲ.
  • ಯಾವುದೇ ರೇಷನ್‌ ಕಾರ್ಡ್‌ನಲ್ಲಿ ಹೊಸ ರೇಷನ್‌ ಕಾರ್ಡ್‌ ಮಾಡಿಸುವವರ ಹೆಸರು ಇರಬಾರದು. ಒಂದು ವೇಳೆ ಇದ್ದರೆ ಅದನ್ನು ತೆಗೆದುಹಾಕಿ ಹೊಸ ರೇಷನ್‌ ಕಾರ್ಡ್‌ ಮಾಡಿಸಬಹುದಾಗಿದೆ.

ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿದವರೇ ಎಚ್ಚರಿಕೆ, 10 ವರ್ಷಕ್ಕಿಂತ ಹಳೆಯ ಆಧಾರ್ ನವೀಕರಿಸಲು ಜೂನ್ 14 ಕೊನೆ ದಿನ

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version