Nipah virus: ಮತ್ತೊಬ್ಬ ವ್ಯಕ್ತಿಗೆ ತಗುಲಿದ ನಿಫಾ ವೈರಸ್, ಸಂಪರ್ಕ ಪಟ್ಟಿಯಲ್ಲಿ 706 ಜನ; ನಿಫಾ ಎಷ್ಟು ಅಪಾಯಕಾರಿ?

Vijayaprabha

Nipah virus : ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮತ್ತೊಬ್ಬ ವ್ಯಕ್ತಿಗೆ ನಿಫಾ ವೈರಸ್ ತಗುಲಿದೆ ಎಂದು ಹೇಳಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಐವರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

ಇದನ್ನೂ ಓದಿ: ಫಿದಾ ಬ್ಯೂಟಿಗೆ ಒಲಿದ ಅದೃಷ್ಟ , ಅಮಿರ್ ಖಾನ್ ಪುತ್ರನಿಗೆ ಸಾಯಿ ಪಲ್ಲವಿ ನಾಯಕಿ!

24 ವರ್ಷ ವಯಸ್ಸಿನ ಕೋಝಿಕ್ಕೋಡ್‌ನ ಆರೋಗ್ಯ ಕಾರ್ಯಕರ್ತರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ವೈರಸ್‌ಗೆ ತುತ್ತಾಗಿದ್ದಾರೆ. ಸದ್ಯ 706 ಮಂದಿ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಘೋಷಿಸಿದ್ದಾರೆ. ಅವರಲ್ಲಿ, 77 ಮಂದಿಯನ್ನು ಹೆಚ್ಚಿನ ಅಪಾಯದಲ್ಲಿ ಪರಿಗಣಿಸಲಾಗಿದೆ, ಆದರೆ 153 ಕಾರ್ಮಿಕರು ಆರೋಗ್ಯವಾಗಿದ್ದಾರೆ. ಹೆಚ್ಚಿನ ಅಪಾಯದ ಗುಂಪಿನಲ್ಲಿರುವವರು ಪ್ರಸ್ತುತ ಯಾವುದೇ ರೋಗಲಕ್ಷಣಗಳನ್ನು ಅನುಭವಿಸುತ್ತಿಲ್ಲ ಎಂದು ತಿಳಿಸಿದ್ದಾರೆ

Nipah virus

ಇದೀಗ ಆಸ್ಪತ್ರೆಯಲ್ಲಿ 13 ಮಂದಿಗೆ ಆರೋಗ್ಯ ಸರಿಯಿಲ್ಲದ ಕಾರಣ ಹಾಗೂ ತಲೆನೋವಿನಂತಹ ಸಣ್ಣಪುಟ್ಟ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ನಿಗಾ ವಹಿಸಲಾಗಿದೆ. ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗುವ ಜನರು ತಮ್ಮ ಮನೆಯೊಳಗೆ ಇರಬೇಕು ಎಂದು ಸರ್ಕಾರ ಸಲಹೆ ನೀಡಿದೆ..

 Nipah virus: ನಿಫಾ ವೈರಸ್ ಎಷ್ಟು ಅಪಾಯಕಾರಿ?

  • ಇದು ಝೂನೋಟಿಕ್‌ ವೈರಸ್‌. ಪ್ರಾಣಿಗಳಿಂದ ಮನುಷ್ಯನಿಗೆ ಹರಡುತ್ತದೆ. ಕಲುಷಿತ ಆಹಾರ, ನೀರು & ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ
  • ಕೆಮ್ಮು, ಜ್ವರ, ತಲೆನೋವು, ಗಂಟಲು ನೋವು, ವಾಂತಿ, ಉಸಿರಾಟದ ತೊಂದರೆ ಸಾಮಾನ್ಯ ಲಕ್ಷಣ
  • 1998ರಲ್ಲಿ ಮಲೇಷ್ಯಾದಲ್ಲಿ ಮೊದಲ ಬಾರಿ ಕಾಣಿಸಿಕೊಂಡಿತ್ತು
  • ಕೊರೊನಾಕ್ಕೆ ಹೋಲಿಕೆ ಮಾಡಿದರೆ ಹರಡುವ ವೇಗ ಕಡಿಮೆ. 2007ರಲ್ಲಿ ಪ.ಬಂಗಾಳದಲ್ಲಿ 66 ಸೋಂಕಿತರಲ್ಲಿ 45 ಜನ ಸತ್ತಿದ್ದರೆ, 2018ರಲ್ಲಿ ಕೇರಳದಲ್ಲಿ 18 ಸೋಂಕಿತರಲ್ಲಿ 17 ಜನರು ಸಾವು ಕಂಡಿದ್ದರು.

ಇದನ್ನೂ ಓದಿ: ಇಂದಿನ ಹವಾಮಾನ ವರದಿ, ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ..!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version