ಆಹಾರದ ಮೇಲೆ ಉಗುಳುವ, ನೆಕ್ಕುವುದರ ವಿರುದ್ಧ ಉತ್ತರ ಪ್ರದೇಶದಲ್ಲಿ ಕಠಿಣ ಕಾಯ್ದೆ ತರಲು ಯೋಗಿ ಸರ್ಕಾರ ನಿರ್ಧಾರ

ಲಖನೌ (ಉತ್ತರ ಪ್ರದೇಶ): ಹೋಟೆಲ್‌ಗಳಲ್ಲಿ ಹಾಗೂ ರಸ್ತೆ ಬದಿಯ ಫುಡ್‌ ಸ್ಟಾಲ್‌ಗಳಲ್ಲಿ ಆಹಾರ ಕಲಬೆರಕೆ ವಿರುದ್ಧ ಮತ್ತಷ್ಟು ಕಠಿಣ ಕೈಗೊಳ್ಳಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದ್ದು, 2 ಸುಗ್ರೀವಾಜ್ಞೆ ಜಾರಿಗೆ…

ಲಖನೌ (ಉತ್ತರ ಪ್ರದೇಶ): ಹೋಟೆಲ್‌ಗಳಲ್ಲಿ ಹಾಗೂ ರಸ್ತೆ ಬದಿಯ ಫುಡ್‌ ಸ್ಟಾಲ್‌ಗಳಲ್ಲಿ ಆಹಾರ ಕಲಬೆರಕೆ ವಿರುದ್ಧ ಮತ್ತಷ್ಟು ಕಠಿಣ ಕೈಗೊಳ್ಳಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದ್ದು, 2 ಸುಗ್ರೀವಾಜ್ಞೆ ಜಾರಿಗೆ ಸಿದ್ಧತೆ ನಡೆಸಿದೆ.

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಫುಡ್‌ ಸ್ಟಾಲ್‌ನಲ್ಲಿನ ಅಡುಗೆ ಮಾಡುವವರು ಆಹಾರ ಪದಾರ್ಥಗಳ ಮೇಲೆ ಧಾರ್ಮಿಕ ಕಾರಣ ನೀಡಿ ಉಗಿದ ಹಾಗೂ ಜ್ಯೂಸ್‌ಗಳಲ್ಲಿ ಮೂತ್ರ ಮಾಡಿದ ವಿಡಿಯೋ ವೈರಲ್‌ ಆಗಿದ್ದವು. ಅಲ್ಲದೇ ಖರ್ಜೂರವನ್ನು ನೆಕ್ಕುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡಿತ್ತು.

ಹೀಗಾಗಿ ಹೋಟೆಲ್‌ನಲ್ಲಿ ಸ್ವಚ್ಛತೆಗೆ ಇತ್ತೀಚೆಗೆ ಸರ್ಕಾರ ಕೆಲವು ಕ್ರಮ ಕೈಗೊಂಡಿತ್ತು. ಆದರೆ, ನಿಯಮ ಮತ್ತಷ್ಟು ಕಠಿಣಗೊಳಿಸಲು ‘ಉಗಿತ ನಿಷೇಧ ಸುಗ್ರೀವಾಜ್ಞೆ-2024’ ಹಾಗೂ ‘ಆಹಾರ ಕಲಬೆರಕೆ ತಡೆ ಸುಗ್ರೀವಾಜ್ಞೆ-2024’ ಜಾರಿಗೆ ಯೋಗಿ ಮುಂದಾಗಿದ್ದಾರೆ.

Vijayaprabha Mobile App free

ಇವುಗಳು ಜಾರಿ ಆದರೆ ಶುಚಿತ್ವ ಕಾಪಾಡದ ಹೋಟೆಲ್‌ಗಳ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗಿತ್ತದೆ. ಜತೆಗೆ ಆಹಾರ ತಯಾರಿಕೆ ವಿಧಾನ ಹಾಗೂ ಶುಚಿತ್ವದ ಮಾಹಿತಿ ಕೇಳುವ ಹಕ್ಕು ಗ್ರಾಹಕರಿಗೆ ಲಭಿಸಲಿದೆ.

ಬಿಜವಿಲ್ಲದ ಖರ್ಜೂರ ನೇವಿಸಬೇಡಿ: ರವಿಶಂಕರ್ ಗುರೂಜಿ ಕರೆ

ಸೋಷಿಯಲ್ ಮೀಡಿಯಾದಲ್ಲಿ ಒಂದು ಸಮುದಾಯದ ಜನರು ಖರ್ಜೂರವನ್ನು ನೆಕ್ಕುವ ದೃಶ್ಯ ವೈರಲ್ ಆಗಿತ್ತು. ಇದನ್ನು ಗಮನಿಸಿದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವಿಶಂಕರ್ ಗುರೂಜಿ ಅವರು, ಯಾರು ಸಹ ಬೀಜವಿಲ್ಲದ ಖರ್ಜೂರವನ್ನು ಸೇವಿಸಬೇಡಿ ಎಂದು ಹೇಳಿದ್ದರು. ನಾನು ಆ ವಿಡಿಯೋ ನೋಡಿದ್ದೇನೆ. ಅದರಲ್ಲಿ ಖರ್ಜೂರಕ್ಕೆ ಉಗುಳು ಹಚ್ಚುವುದನ್ನು ಕಂಡು ಅಸಯ್ಯವಾಗಿದೆ. ಹಾಗಾಗಿ ಖರ್ಜೂರ ಸೇವನೆ ಮಾಡಬೇಡಿ. ಅದರಲ್ಲಿಯೂ ಬೀಜ ಇಲ್ಲದ ಖರ್ಜೂರವನ್ನು ಖರಿದಾಸಬೇಡಿ ಎಂದು ಕರೆ ನೀಡಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.