ಯೋಗೇಶ್ವರ್ ₹67.54 ಕೋಟಿ ಒಡೆಯ, ಪತ್ನಿ ಶೀಲಾ ಹೆಸರಿಗೆ ಸ್ಥಿರಾಸ್ತಿ: 10 ಕೇಸ್ ದಾಖಲು

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಸಿ.ಪಿ.ಯೋಗೇಶ್ವರ್ ಕುಟುಂಬದ ಚರಾಸ್ತಿ ಮತ್ತು ಸ್ಥಿರಾಸ್ತಿ ಕಳೆದ ಒಂದೂವರೆ ವರ್ಷದಲ್ಲಿ 26.72 ಕೋಟಿ ರು.ಗಳಷ್ಟು ವೃದ್ಧಿಯಾಗಿದೆ. 2023ರ ಚುನಾವಣೆ ವೇಳೆ…

CP Yogeshwar vijayaprabha news

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಸಿ.ಪಿ.ಯೋಗೇಶ್ವರ್ ಕುಟುಂಬದ ಚರಾಸ್ತಿ ಮತ್ತು ಸ್ಥಿರಾಸ್ತಿ ಕಳೆದ ಒಂದೂವರೆ ವರ್ಷದಲ್ಲಿ 26.72 ಕೋಟಿ ರು.ಗಳಷ್ಟು ವೃದ್ಧಿಯಾಗಿದೆ.

2023ರ ಚುನಾವಣೆ ವೇಳೆ 40.82 ಕೋಟಿಯಷ್ಟು ಆಸ್ತಿ ಘೋಷಿಸಿಕೊಂಡಿದ್ದ ಯೋಗೇಶ್ವರ್, 2024ರ ಉಪಚುನಾವಣೆಯಲ್ಲಿ 67.54 ಕೋಟಿ ಎಂದು ವಿವರ ಸಲ್ಲಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 26.72 ಕೋಟಿ ರು.ಗಳಷ್ಟು ಆಸ್ತಿ ಹೆಚ್ಚಳವಾಗಿದೆ.

ಬಿ.ಎಸ್ಸಿ ಪದವೀಧರರಾಗಿರುವ ಯೋಗೇಶ್ವರ್ ಕೊಡಬೇಕಾಗಿರುವ ಸಾಲ 25.86 ಕೋಟಿ ರು. ಕ್ರಿಮಿನಲ್ ಮೊಕದ್ದಮ್ಮೆಗಳನ್ನು ಸಹ ಯೋಗೇಶ್ವರ್ ಎದುರಿಸುತ್ತಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ 10 ಪ್ರಕರಣಗಳಿವೆ.

Vijayaprabha Mobile App free

ಪತ್ನಿ ಹೆಸರಿಗೆ ಸ್ಥಿರಾಸ್ತಿ ವರ್ಗ:

ಮತ್ತೊಂದು ಪ್ರಮುಖ ಅಂಶವೆಂದರೆ ಕಳೆದ ಬಾರಿ ಯೋಗೇಶ್ವರ್ ಬಳಿ 34.20 ಕೋಟಿ ರು.ಗಳಿದ್ದ ಆಸ್ತಿ ಈಗ 35.09 ಕೋಟಿಗೆ ಏರಿಕೆಯಾದರೆ, ಪತ್ನಿ ಶೀಲಾ ಯೋಗೇಶ್ವರ್ ಬಳಿ 6.62 ಕೋಟಿ ರು.ಗಳಿದ್ದ ಆಸ್ತಿ ಈಗ 32.45 ಕೋಟಿ ರು.ಗಳಷ್ಟಾಗಿದೆ. ಯೋಗೇಶ್ವರ್ ರವರು ತಮ್ಮ ಹೆಸರಿನಲ್ಲಿದ್ದ ಸ್ಥಿರಾಸ್ತಿಯನ್ನು ಪತ್ನಿ ಶೀಲಾ ಅವರಿಗೆ ವರ್ಗಾವಣೆ ಮಾಡಿದ್ದಾರೆ.

2023ನೇ ಚುನಾವಣೆ ವೇಳೆ ಯೋಗೇಶ್ವರ್ 2021-22ನೇ ಸಾಲಿನ ಆಸ್ತಿ ವಿವರ ಸಲ್ಲಿಸಿದ್ದರು. ಈಗಿನ ಉಪ ಚುನಾವಣೆಯಲ್ಲಿ 2022-23ನೇ ಸಾಲಿನ ಆಸ್ತಿ ವಿವರ ಸಲ್ಲಿಸಿದ್ದಾರೆ. ಈಗ ಸಿ.ಪಿ.ಯೋಗೇಶ್ವರವರು 7.15 ಕೋಟಿ ಮೌಲ್ಯದ ಚರಾಸ್ತಿ, 27.94 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 35.09 ಕೋಟಿ ಹಾಗೂ ಪತ್ನಿ ಪಿ.ವಿ.ಶೀಲಾ ರವರು 7.10 ಕೋಟಿ ಮೌಲ್ಯದ ಚರಾಸ್ತಿ, 25.35 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 32.45 ಕೋಟಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಸಿ.ಪಿ.ಯೋಗೇಶ್ವರ್ ಅವರು 2022-23ನೇ ಸಾಲಿಗೆ 46.23 ಲಕ್ಷ ರು. ಆದಾಯ ಘೋಷಿಸಿದ್ದು, ಇವರ ಬಳಿ ನಗದು 2.78 ಲಕ್ಷ, ಬ್ಯಾಂಕು ಖಾತೆಗಳಲ್ಲಿ 60.36 ಲಕ್ಷ ರು ಹಾಗೂ 23.12 ಕೋಟಿ ರು ಮಾರುಕಟ್ಟೆ ಮೌಲ್ಯದ ಕೃಷಿ ಭೂಮಿ, 1.44 ಕೋಟಿ ರು. ಮೌಲ್ಯದ ಕೃಷಿಯೇತರ ಭೂಮಿ, 27.94 ಕೋಟಿ ರು. ಮೌಲ್ಯದ ವಸತಿ ಕಟ್ಟಡ, 18.25 ಲಕ್ಷ ರು ಮೌಲ್ಯದ 250 ಗ್ರಾಂ ಚಿನ್ನಾಭರಣ ಇದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.