Stock Markets: ಪ್ರಪಂಚದ ಷೇರು ಮಾರುಕಟ್ಟೆಗಳು (World’s Stock Markets) ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡುತ್ತಿರುವ ಸ್ಟಾಕ್ ಮಾರುಕಟ್ಟೆಗಳಲ್ಲಿ (Stock Markets) ಅಮೆರಿಕದ S&P-500 ಮೊದಲ ಸ್ಥಾನದಲ್ಲಿದ್ದು, ಭಾರತದ ನಿಫ್ಟಿ-50 (Indian Stock Market) ಎರಡನೇ ಸ್ತಾನದಲ್ಲಿದೆ.
ಹೌದು, ಒಂದು ವರ್ಷದಲ್ಲಿ ಶೇ.29.2ರಷ್ಟು ಲಾಭ ನೀಡುವ ಮೂಲಕ ಅಮೆರಿಕದ S&P-500 ವಿಶ್ವದ ಅತ್ಯುತ್ತಮ ಪ್ರದರ್ಶನ ನೀಡಿದ ಷೇರು ಮಾರುಕಟ್ಟೆಯಾಗಿದೆ ಎಂದು ‘Tradingview’ ಅನ್ನು ಉಲ್ಲೇಖಿಸಿ Investiwise ಹೇಳಿದೆ.
ಹಾಗಾಗಿ ಇದು ವಿಶ್ವದ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿರುವ ಸ್ಟಾಕ್ ಮಾರುಕಟ್ಟೆಯಾಗಿದೆ. ನಂತರದ ಸ್ಥಾನವನ್ನು ಭಾರತದ ನಿಫ್ಟಿ-50 (ಶೇ.27.1ರಷ್ಟು), ಟರ್ಕಿಯ ಬಿಸ್ಟ್-100 (ಶೇ.26.4ರಷ್ಟು), ಜಪಾನಿನ ನಿಕ್ಕಿ (ಶೇ.19.4ರಷ್ಟು), ಇಟಲಿಯ ಮಿಲನ್ (MILANO) (ಶೇ.18.1ರಷ್ಟು) ಹಾಗೂ ಜರ್ಮನಿಯ ಡಾಕ್ಸ್ (ಶೇ.17.4ರಷ್ಟು) ಪಡೆದುಕೊಂಡಿದ್ದು, ಇವು ಕೂಡ ಅತ್ಯುತ್ತಮವಾಗಿ ಸ್ಟಾಕ್ ಮಾರುಕಟ್ಟೆಗಳಾಗಿವೆ.
https://vijayaprabha.com/12-lakh-bpl-card-cancellation/