ಅವಿಶ್ವಾಸ ಗೊತ್ತುವಳಿ ಬೆದರಿಕೆಗೆ ಹೆದರಿ ಗ್ರಾಪಂ ಅಧ್ಯಕ್ಷ ಆತ್ಮಹತ್ಯೆ: ಸದಸ್ಯರ ವಿರುದ್ಧ ಕೇಸ್ ದಾಖಲು

ರಾಯಚೂರು: ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ಮಾಡುವ ಬೆದರಿಕೆದ್ದಕ್ಕೆ ಹೆದರಿ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ದೇವರಬೂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5 ಜನ ಗ್ರಾಮ ಪಂಚಾಯ್ತಿ ಸದಸ್ಯರು…

ರಾಯಚೂರು: ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ಮಾಡುವ ಬೆದರಿಕೆದ್ದಕ್ಕೆ ಹೆದರಿ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ದೇವರಬೂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5 ಜನ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಓರ್ವ ಗ್ರಾಮ ಪಂಚಾಯ್ತಿಯ ಸದಸ್ಯೆ ಪತಿಯ ಮೇಲೆ ಪ್ರಕರಣ ದಾಖಲಾಗಿದೆ.

ದೇವರಬೂಪುರ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 23 ಜನ ಸದಸ್ಯರು ಇದ್ದಾರೆ. ಮೊದಲ ಅವಧಿಗೆ ಅಧ್ಯಕ್ಷರಾಗಿದ್ದ ಐದಬಾವಿ ಗ್ರಾಮದ ದ್ಯಾವಪ್ಪ ಜಗಲೇರ (74), ಐದಬಾವಿ ಗ್ರಾಮದ ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ದ್ಯಾವಪ್ಪ ಜಗಲೇರ ದೇವರಬೂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಇದೇ 24ರಂದು ರಾಜೀನಾಮೆ ಕೊಟ್ಟದ್ದರು.

2ನೇ ಆರೋಪಿಯಾದ ಅಮರೇಶನ ತಂದೆ ಸೋಮಪ್ಪ ಹುಬ್ಬಳ್ಳಿ ಆತ್ಮಹತ್ಯೆ ಮಾಡಿಕೊಂಡ ಅಧ್ಯಕ್ಷನಿಗೆ ‘ನೀನು ರಾಜೀನಾಮೆ ಕೊಟ್ಟಿದ್ದಿ, ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ಸು ತೆಗೆದುಕೊಳ್ಳಬೇಡ, ವಾಪಸ್ಸು ಪಡೆದರೆ ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ಮಾಡುತ್ತೇವೆ. ಆದ್ದರಿಂದ ನೀನು ನಮ್ಮ ಜೊತೆ ಇರಬೇಕು’ ಎಂದು ಬೆದರಿಕೆ ಹಾಕಿದ್ದಾನೆ. ಆಗ ದ್ಯಾವಪ್ಪ ನಾನು ಎಲ್ಲಿಗೂ ಬರುವುದಿಲ್ಲ. ರಾಜೀನಾಮೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

Vijayaprabha Mobile App free

ಪ್ರಕರಣದ ಆರೋಪಿಗಳಾದ ಐದಬಾವಿ ಗ್ರಾಮದ ನಿಂಗಪ್ಪ ತಂದೆ ಈರಪ್ಪ ಕೆಂಗೇರಿ, ಅಮರೇಶ ತಂದೆ ಸೋಮಪ್ಪ ಹುಬ್ಬಳ್ಳಿ, ಅಯ್ಯಾಳಪ್ಪ ತಂದೆ ಬಸ್ಸಪ್ಪ ಕರ್ನಾಳ, ನಾಗಪ್ಪ ಅಡವಿಬಾವಿಯರ ದೊಡ್ಡಿ, ಹನುಮಂತ ಎಣ್ಣೇರ, ಸೋಮಲಿಂಗಪ್ಪ ‘ಜಗಲೇರ, ನೀನು ಸುಮ್ಮನೆ ನಮ್ಮ ಜೊತೆಗೆ ಬಂದರೆ ಸರಿ, ಇಲ್ಲದಿದ್ದರೆ ನಿನ್ನ ಎತ್ತಾಕಿಕೊಂಡು ಹೋಗುತ್ತೇವೆ’ ಎಂದು ಎಳೆದಾಡಿ ಅವಮಾನ ಮಾಡಿದ್ದಾರೆ. ಇದರಿಂದ ಅಧ್ಯಕ್ಷ ದ್ಯಾವಪ್ಪ ಮನಸ್ಸಿಗೆ ನೋವು ಮಾಡಿಕೊಂಡು ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಮೃತರ ಮಗ ಸೋಮಲಿಂಗ ಜಗಲೇರ ದೂರು ನೀಡಿದ್ದಾರೆ. ಮೃತ ಅಧ್ಯಕ್ಷನ ಮಗನ ದೂರು ಆಧರಿಸಿ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.