Gruhalakshmi Yojana: ಗೃಹಲಕ್ಷ್ಮೀ ಯೋಜನೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದು ಪ್ರತಿ ಮನೆಯ ಯಜಮಾನಿಗೆ ಮಾಸಿಕ ₹2,000 ಹಣಕಾಸಿನ ನೆರವನ್ನು ಒದಗಿಸುತ್ತದೆ. ಈ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸಲು ಮತ್ತು ಕುಟುಂಬದ ಆದಾಯವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ಈ ಯೋಜನೆಗೆಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಕರ್ನಾಟಕದ ಮಹಿಳೆಯರು ಮಾತ್ರ ಅರ್ಹರು. ಒಂದು ವರ್ಷದಲ್ಲಿ 25 ಸಾವಿರ ಕೋಟಿ ರೂ. ಹಣ ಮಹಿಳೆಯರ ಖಾತೆಗೆ ಜಮೆಯಾಗಿದೆ.
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಬಾಕಿ ಉಳಿಸಿಕೊಂಡ ಗೃಹಲಕ್ಷ್ಮಿ ಹಣ
ಮಹಿಳಾ ಸಬಲೀಕರಣಕ್ಕೆ ಸರ್ಕಾರ ಕೈಗೊಂಡ ಪ್ರಮುಖ ಗೃಹಲಕ್ಷ್ಮೀ ಯೋಜನೆಯ ಮಾಸಿಕ 2000 ರೂ. ಕೆಲವು ತಿಂಗಳಲ್ಲಿ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆ ಯೋಜನೆಯ ಫಲಾನುಭವಿಗಳು ಆತಂಕಕ್ಕೆ ಒಳಗಾಗಿದ್ದರು.
ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲಿಸುವುದಿಲ್ಲ. 11 ತಿಂಗಳ ಹಣ ಬಿಡುಗಡೆಯಾಗಿದ್ದು ಬಾಕಿ ಉಳಿಸಿಕೊಂಡ ಜೂನ್, ಜುಲೈ ಹಾಗೂ ಆಗಸ್ಟ್ ಹಣವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.
ಗೃಹಲಕ್ಷ್ಮಿ 12ನೇ ಕಂತಿನ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಏನು ಹೇಳಿದ್ದಾರೆ?
ಗೃಹಲಕ್ಷ್ಮಿ ಯೋಜನೆಯ ಹಣ ಎರಡ್ಮೂರು ತಿಂಗಳಿಂದ ಮಹಿಳೆಯರ ಖಾತೆಗಳಿಗೆ ವರ್ಗಾವಣೆಯಾಗದೇ ಬಾಕಿ ಇದೆ. ಈ ವಿಚಾರವಾಗಿ ರಾಜ್ಯ ಸರ್ಕಾರ ವಿರುದ್ಧ ಆಕ್ಷೇಪ ವ್ಯಕ್ತವಾಗುತ್ತಿದ್ದು, ಗೃಹಲಕ್ಷ್ಮಿ ಯೋಜನೆ ಹಣ ಬಾಕಿ ಉಳಿದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಗೃಹಲಕ್ಷ್ಮಿ ಹಣದಿಂದ ಮಹಿಳೆಯರಿಗೆ ಎಷ್ಟೆಲ್ಲಾ ಉಪಯೋಗವಾಗುತ್ತಿದೆ?
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ರಾಜ್ಯದ ಮಹಿಳೆಯರಿಗೆ ಸಾಕಷ್ಟು ಉಪಯೋಗವಾಗುತ್ತಿದ್ದು, ಅನೇಕರು ಜೀವನ ಮಟ್ಟ ಸುಧಾರಿಸಲು ಇದು ನೆರವಾಗಿದೆ.
ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಬೆಳಗಾವಿಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಇನ್ನು ಕೆಲ ಮಹಿಳೆಯರು ಹಣವನ್ನು ಒಟ್ಟುಗೂಡಿಸಿ ಮೊಬೈಲ್, ಚಿನ್ನ, ಫ್ರಿಡ್ಜ್ ಸೇರಿದಂತೆ ತಮ್ಮ ಇಚ್ಛೆಯ ವಸ್ತು ಖರೀದಿಸುತ್ತಿದ್ದಾರೆ. ಜೊತೆಗೆ ಪ್ರವಾಸಕ್ಕೂ ಹೋಗುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಯಾವ ತಿಂಗಳು ಎಷ್ಟು ಪಾವತಿಯಾಗಿದೆ?
ಗೃಹಲಕ್ಷ್ಮಿ ಯೋಜನೆಗೆ ಈವರೆಗೆ ಆಗಸ್ಟ್ ನಲ್ಲಿ 2018 ಕೋಟಿ ರೂ., ಸೆಪ್ಟೆಂಬರ್ ನಲ್ಲಿ 2199.74 ಕೋಟಿ ರೂ., ಅಕ್ಟೋಬರ್ ನಲ್ಲಿ 2244.63 ಕೋಟಿ ರೂ. ನವೆಂಬರ್ ನಲ್ಲಿ 2258.83 ಕೋಟಿ ರೂ., ಡಿಸೆಂಬರ್ ನಲ್ಲಿ 2271.41 ಕೋಟಿ ರೂ., ಜನವರಿ ನಲ್ಲಿ 2312.56 ಕೋಟಿ ರೂ., ಫೆಬ್ರವರಿ ನಲ್ಲಿ 2360.56 ಕೋಟಿ ರೂ., ಮಾರ್ಚ್ ನಲ್ಲಿ 2400.64 ಕೋಟಿ ರೂ., ಏಪ್ರಿಲ್ ನಲ್ಲಿ 2403.91 ಕೋಟಿ ರೂ., ಮೇ ನಲ್ಲಿ 2405.04 ಕೋಟಿ ರೂ., ಜೂನ್ ನಲ್ಲಿ 2273.54 ಕೋಟಿ ರೂ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಎಲ್ಲಿ ಹೆಚ್ಚಿದ್ದಾರೆ?
ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಹಾಗೂ ಆರ್ಥಿಕ ಚಟುವಟಿಕೆ ಗರಿಗೆದರಲು ಗೃಹಲಕ್ಷ್ಮಿ ಸಹಕಾರಿಯಾಗಿದೆ. ಇದರ ಫಲಾನುಭವಿಗಳ ಸಂಖ್ಯೆಯಲ್ಲಿ ಬೆಳಗಾವಿ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ 9,83,766 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲೆ 2 ನೇ ಸ್ಥಾನ, ಮೈಸೂರು ಮೂರನೇ ಸ್ಥಾನ ಹಾಗೂ ಕೊಡಗು ಕೊನೆಯ ಸ್ಥಾನದಲ್ಲಿದೆ. ಗೃಹಲಕ್ಷ್ಮೀ ಯೋಜನೆ ಕುರಿತಂತೆ ಹೆಚ್ಚಿನ ಮಾಹಿತಿ ಬೇಕಾದರೆ 080 22279954, 8792662814 ಹಾಗೂ 8792662816 ಗೆ ಸಂಪರ್ಕಿಸಲು ಕೋರಲಾಗಿದೆ.
https://vijayaprabha.com/how-to-perform-pradosha-vrata-ritual-pooja/