ಇಂದು ವಿಶ್ವ ತೆಂಗಿನ ಕಾಯಿಯ ದಿನ; ತೆಂಗಿನಕಾಯಿ ಬಗ್ಗೆ ನೀವು ತಿಳಿದಿರದ ಅಚ್ಚರಿ ಸಂಗತಿಗಳು..!

world coconut day: ಇಂದು ವಿಶ್ವ ತೆಂಗು ದಿನವಾಗಿ (coconut day) ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ದಕ್ಷಿಣ ಏಷ್ಯಾ ಮತ್ತು ಮಧ್ಯಪೂರ್ವ ಏಷ್ಯನ್‌ ದೇಶಗಳಲ್ಲಿ ಜನ್ಮತಳೆದ ತೆಂಗು ಇವತ್ತು ಜಗತ್ತಿನ ಬಹುತೇಕ ದೇಶಗಳಲ್ಲಿ ಹರಡಿ ಹೋಗಿದ್ದು,…

World Coconut Day

world coconut day: ಇಂದು ವಿಶ್ವ ತೆಂಗು ದಿನವಾಗಿ (coconut day) ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ದಕ್ಷಿಣ ಏಷ್ಯಾ ಮತ್ತು ಮಧ್ಯಪೂರ್ವ ಏಷ್ಯನ್‌ ದೇಶಗಳಲ್ಲಿ ಜನ್ಮತಳೆದ ತೆಂಗು ಇವತ್ತು ಜಗತ್ತಿನ ಬಹುತೇಕ ದೇಶಗಳಲ್ಲಿ ಹರಡಿ ಹೋಗಿದ್ದು, ಜನಜೀವನದ ಭಾಗವಾಗಿದೆ.

ಅನೇಕ ರೈತರ ಜೀವನಕ್ಕೆ ಆಧಾರವಾಗಿರುವ ಕಲ್ಪವೃಕ್ಷಕ್ಕೆ ವಿಶಿಷ್ಟ ಸ್ಥಾನಮಾನ ಇದೆ. ತೆಂಗಿನಕಾಯಿ ಮತ್ತು ಎಳನೀರಿನ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಪ್ರತೀ ವರ್ಷ ಸೆಪ್ಟೆಂಬರ್ ೨ರಂದು ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ತೆಂಗಿನ ಕಾಯಿಯ ದಿನದ ಇತಿಹಾಸ..!

ವಿಶ್ವ ತೆಂಗಿನಕಾಯಿ ದಿನವನ್ನು ಸೆಪ್ಟೆಂಬರ್ 2ರಂದು ಆಚರಿಸಲಾಗುತ್ತದೆ. ತೆಂಗಿನಕಾಯಿಯ ಮೌಲ್ಯ ಮತ್ತು ಪ್ರಯೋಜನಗಳ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಲು ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು..

Vijayaprabha Mobile App free

ಪ್ರಪಂಚದಾದ್ಯಂತ ಹೆಚ್ಚು ಸೇವಿಸುವ ಹಣ್ಣುಗಳಲ್ಲಿ ತೆಂಗಿನಕಾಯಿ ಸಹ ಸ್ಥಾನ ಪಡೆದಿದೆ. ಇದಲ್ಲದೆ, ಹಣ್ಣಿನ ವಿವಿಧೋದ್ದೇಶ ಸ್ವಭಾವವು ಅದನ್ನು ಆರೋಗ್ಯಕರವೆಂದು ಪರಿಗಣಿಸುವಂತೆ ಮಾಡಿದೆ. ತೆಂಗಿನಕಾಯಿ ತಿನ್ನುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು.

ತೆಂಗಿನಕಾಯಿ ಬಗ್ಗೆ ನೀವು ತಿಳಿದಿರದ ಸಂಗತಿಗಳು..!

ತೆಂಗಿನಕಾಯಿ ಎಂಬ ಹೆಸರು ಪೋರ್ಚುಗೀಸ್ ಪದ ‘ಕೊಕೊ’ದಿಂದ ಬಂದಿದೆ, ಇದರರ್ಥ ‘ತಲೆಬುರುಡೆ’ ಎಂಬುದಾಗಿದೆ. ತೆಂಗಿನಕಾಯಿ ಮೊದಲು ಇಂಡೋ-ಮಲಯನ್ ಪ್ರದೇಶದಲ್ಲಿ ಎಲ್ಲೋ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ.

1 ತೆಂಗಿನ ಮರವು ಪ್ರತೀ ವರ್ಷ ಸುಮಾರು 100 ತೆಂಗಿನ ಕಾಯಿ ನೀಡುತ್ತದೆ. ತೆಂಗಿನಕಾಯಿ ಸಂಪೂರ್ಣವಾಗಿ ಬೆಳೆಯಲು ಒಂದು ವರ್ಷ ಬೇಕಾಗುತ್ತದೆ. ಹಾಗೂ ಇಂಡೋನೇಷ್ಯಾ, ಫಿಲಿಪೈನ್ಸ್, ಶ್ರೀಲಂಕಾದೊಂದಿಗೆ ಭಾರತವು ವಿಶ್ವದ ಅತಿದೊಡ್ಡ ರಫ್ತುದಾರರಲ್ಲಿ ಒಂದಾಗಿದೆ.

ತೆಂಗಿನಕಾಯಿಯ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು

ತೆಂಗಿನ ಕಾಯಿಯನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ನಾವು ದೂರ ಇರಬಹುದು. ತೆಂಗಿನಕಾಯಿಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಹಲವಾರು ಪ್ರಮುಖ ಖನಿಜಗಳು ಮತ್ತು ಸಣ್ಣ ಪ್ರಮಾಣದ ಬಿ ಜೀವಸತ್ವಗಳು ಇರುತ್ತದೆ.

ಒಣ ಕೊಬ್ಬರಿಯಿಂದ ತಯಾರಿಸಿದ ಶುದ್ಧ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಿ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

ಆರೋಗ್ಯಕ್ಕೆ ತೆಂಗಿನಕಾಯಿಯ ಸೇವನೆಯ ಅದ್ಭುತ ಪ್ರಯೋಜನಗಳು ..!

ತೆಂಗಿನಕಾಯಿ ಸೇವನೆಯಿಂದ ದೇಹಕ್ಕೆ ಉತ್ತಮ ಪೌಷ್ಟಿಕಾಂಶ ದೊರೆಯುತ್ತವೆ. ಇದರಲ್ಲಿ ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್ ಮತ್ತು ಆಂಟಿ-ಪರಾವಲಂಬಿ ಗುಣಗಳು ಇರುವುದರಿಂದ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜೊತೆಗೆ ತೆಂಗಿನಕಾಯಿ ತಿನ್ನುವುಯರಿಂದ ದೇಹಕ್ಕೆ ತ್ವರಿತ ಶಕ್ತಿ ಸಿಗುತ್ತದೆ. ತೆಂಗಿನಕಾಯಿ ಸೇವನೆಯಿಂದ ಜೀರ್ಣಕ್ರಿಯೆಯು ಸುಧಾರಿಸುತ್ತದೆ. ಹಾಗೂ ಒಳಗಿನಿಂದ ಕೂದಲನ್ನು ರಕ್ಷಿಸಲು ಸಹಕಾರಿಯಾಗುತ್ತದೆ.

https://vijayaprabha.com/kichcha-sudeep-is-celebrating-his-51st-birthday-today/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.