ತಿಕೋಟಾ : ತಂಬಾಕು ಮತ್ತು ತಂಬಾಕಿನ ಉಪ ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್‌ಕಾರಕ ಕಾಯಿಲೆಗಳು ಹೆಚ್ಚುತ್ತಿವೆ. ಕುಟುಂಬಗಳ ಮುಖ್ಯಸ್ಥರೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವಲಂಬಿತರ ಬದುಕು ದಯನೀಯವಾಗಲಿದೆ. ತಂಬಾಕು ನಿಯಂತ್ರಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಪ್ರಾಚಾರ್ಯರಾದ ಎಂ ಎ ಹಿರೇಮಠ್ ಮಾತನಾಡಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿ ವಿ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಂಬಾಕು ಮುಕ್ತ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಜರುಗಿತು.
ಹಾಜರಿದ್ದ ಎಲ್ಲಾ ಎಲ್ಲ ವಿದ್ಯಾರ್ಥಿಗಳಿಗೆ ಎಸ್ ಎ ವಾಲಿಕಾರ ಶಿಕ್ಷಕರು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು ತಂಬಾಕು ಸೇವನೆಯ ವಿರುದ್ಧ ಪ್ರತಿಜ್ಞೆ ಮಾಡುವ ಮೂಲಕ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು, ಇದು ರಾಷ್ಟ್ರದ ಯುವಜನರಿಗೆ ಆರೋಗ್ಯಕರ, ತಂಬಾಕು ಮುಕ್ತ ಭವಿಷ್ಯವನ್ನು ಸೃಷ್ಟಿಸುವ ಸಾಮೂಹಿಕ ಪ್ರಯತ್ನವಾಗಿದೆ
ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಶ್ರೀ ಆರ್ ಬಿ ಶೇಡ್ಯಾಳ ಐ ಕೆ ನದಾಪ್ ದೈಹಿಕ ಶಿಕ್ಷಕರಾದ ಮಮತಾ ಹಿರೇಮಠ್ ಧರೆಪ್ಪ ಸಿದ್ನಾಥ ನಿವೇದಿತಾ ಹಿರೇಮಠ್ ನವೀನ್ ಹಿರೇಮಠ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.