Accident: ಪಾದಚಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ, ಹಿಂಬದಿ ಸವಾರ, ರಸ್ತೆ ಬದಿ ನಿಂತಿದ್ದ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಕುಂಟೋಜಿಯಲ್ಲಿ ನಡೆದಿದೆ.
ಹೌದು, ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಮೃತರನ್ನು ತಾಳಿಕೋಟೆಯ ಗೋಟಖಂಡಕಿಯ ನಿಂಗರಾಜ ಚೌದರಿ(32), ದೇವರಹಿಪ್ಪರಗಿಯ ಹಂಚಲಿ ನಿವಾಸಿ ಅನಿಲ್ ಖೈನೂರ(23) ಮಲಗಲದಿನ್ನಿ ನಿವಾಸಿ ಉದಯಕುಮಾರ(19) ಎಂದು ಗುರುತಿಸಲಾಗಿದೆ.
ಇನ್ನು, ಗಂಭೀರವಾಗಿ ಗಾಯಗೊಂಡಿದ್ದ ರಾಯಪ್ಪ ಎಂಬುವರು ಕೂಡ ಸಾವನ್ನಪ್ಪಿದ್ದು, ಈ ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://vijayaprabha.com/gowri-ganesha-habba/
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.