2024-25 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾದ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ, ಸರಕು ಸಾಗಣೆ/ಟ್ಯಾಕ್ಸಿ/ಹಳದಿ ಫಲಕದ ವಾಹನಗಳನ್ನು ಖರೀದಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 10, 2024.
ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಅರ್ಜಿ ಸಲ್ಲಿಸುವ ಮತ್ತು ಆಯ್ಕೆಯಾದ ಅರ್ಹ ಫಲಾನುಭವಿಗಳು ಸರಕು ಸಾಗಣೆ/ಟ್ಯಾಕ್ಸಿ/ಹಳದಿ ಫಲಕದ ವಾಹನಗಳ ಖರೀದಿಯಲ್ಲಿ ಶೇ.75 ಅಥವಾ ಗರಿಷ್ಠ ರೂ.4.00 ಲಕ್ಷದವರೆಗೆ ಸಹಾಯಧನವನ್ನು ಪಡೆಯುತ್ತಾರೆ ಮತ್ತು ಈ ಯೋಜನೆಯನ್ನು ಬ್ಯಾಂಕ್ ಸಹಯೋಗದಲ್ಲಿ ಜಾರಿಗೊಳಿಸಲಾಗುವುದು.
ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಯಾವ ವಾಹನಗಳನ್ನು ಖರೀದಿಸಬಹುದು?ಅರ್ಹ ಫಲಾನುಭವಿಗಳು ಸುವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಸರಕು ಸಾಗಣೆ ವಾಹನಗಳು/ಟ್ಯಾಕ್ಸಿ/ಹಳದಿ ಕ್ಯಾಬ್‌ಗಳನ್ನು ಖರೀದಿಸಬಹುದು.
ಟ್ಯಾಕ್ಸಿ / ಕಾರ್ಗೂಡ್ಸ್ /ಟಾಟಾ ASನಾಲ್ಕು ಚಕ್ರಗಳು / ಅಶೋಕ್ ಲೇಲ್ಯಾಂಡ್ ದೋಸ್ತ್ಆಟೋ / ಬಜಾಜ್ ಆಟೋ ಯಾರು ಅರ್ಜಿ ಸಲ್ಲಿಸಬಹುದು?
1) ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿರಬೇಕು.
2) ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
3) ಅರ್ಜಿದಾರರು 21 ರಿಂದ 60 ವರ್ಷ ವಯಸ್ಸಿನವರಾಗಿರಬೇಕು.
4) ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ರೂ.1,50,000 ಮತ್ತು ನಗರ ಪ್ರದೇಶಗಳಲ್ಲಿ ರೂ.2,00,000 ವ್ಯಾಪ್ತಿಯಲ್ಲಿರಬೇಕು.
5) ಲಘು ವಾಣಿಜ್ಯ ವಾಹನ ಚಲಾಯಿಸಲು ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯ.
6) ಕುಟುಂಬದ ಸದಸ್ಯರುಸರ್ಕಾರೀ ಕೆಲಸದಲ್ಲಿ ಇರಬಾರದು
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೇವಾಸಿಂಧು ವೆಬ್‌ಸೈಟ್‌ನಲ್ಲಿ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿದ ನಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ.
ಅರ್ಜಿಯನ್ನು ಸಲ್ಲಿಸಲು ಅಗತ್ಯವಿರುವ ದಾಖಲೆಗಳು
:ಅರ್ಜಿದಾರರ ಆಧಾರ್ ಕಾರ್ಡ್ಬ್ಯಾಂಕ್ ಖಾತೆಗಳ ಪುಸ್ತಕಜಾತಿ ಮತ್ತು ಆದಾಯ ಪ್ರಮಾಣಪತ್ರಫೋಟೋಚಾಲಕರ ಪರವಾನಗಿಮೊಬೈಲ್ ಫೋನ್ ಸಂಖ್ಯೆಪಡಿತರ ಚೀಟಿಯ ಪ್ರತಿ.