ಗ್ವಾಲಿಯರ್ : ಪತಿ ಕಪ್ಪಾಗಿದ್ದಾನೆ ಎಂದು ಹೆಂಡತಿಯೊಬ್ಬಳು ಆತನನ್ನೇ ಬಿಟ್ಟು ಹೋಗಿರುವ ಘಟನೆ ಗ್ವಾಲಿಯರ್ ನಗರದಲ್ಲಿ ನಡೆದಿದೆ.
ನಗರದ ವಿಕ್ಕಿ ಫ್ಯಾಕ್ಟರಿ ನಿವಾಸಿ, 14 ತಿಂಗಳ ಹಿಂದೆ ಯುವತಿಯನ್ನು ಮದುವೆಯಾಗಿದ್ದ. ಮದುವೆಯ ನಂತರ, ಅವನ ಹೆಂಡತಿ ಅವನಿಗೆ ತೊಂದರೆ ಕೊಡಲು ಪ್ರಾರಂಭಿಸಿದಳು ಮತ್ತು ಅವನು ಕಪ್ಪಾಗಿದ್ದಾನೆ ಎಂಬ ಕಾರಣಕ್ಕೆ ಹಿಂಸೆ ಕೊಡುವುದು, ನಿಂದಿಸುವುದು ಮಾಡುತ್ತಿದ್ದಳಂತೆ. ಹೀಗಾಗಿ ನೊಂದ ಪತಿ ನನಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆಗ ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಇಬ್ಬರನ್ನೂ ಕೌನ್ಸೆಲಿಂಗ್‌ಗೆ ಕರೆದಿದ್ದಾರೆ.
ಈ ಇಬ್ಬರ ಜೊತೆಗೆ ಜುಲೈ 13ರಂದು ಕೌನ್ಸೆಲಿಂಗ್‌ಗೆ ಮಾಡಲಿದ್ದೇವೆ. ಇದಾದ ನಂತರವೇ ಈ ಕುರಿತು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಅಂತಾ ಅಧಿಕಾರಿ ಕಿರಣ್ ಅಹಿರ್ವಾರ್ ತಿಳಿಸಿದ್ದಾರೆ.
ಏನಿದು ಸ್ಟೋರಿ?
ಪತಿ ಕಪ್ಪಾಗಿದ್ದಾನೆ ಎಂದು ಹೆಂಡತಿಯೊಬ್ಬಳು ಆತನನ್ನೇ ಬಿಟ್ಟು ತವರು ಮನೆಗೆ ಹೋಗಿದ್ದಳು. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಆ ಮಗುವನ್ನೆ ತನ್ನ ಅತ್ತೆಯ ಮನೆಯಲ್ಲಿ ಬಿಟ್ಟು ಹೋಗಿದ್ದಾಳಂತೆ. ಆ ಕೂಡಲೇ ಪತಿ ಹೆಂಡತಿಯನ್ನು ಕರೆದುಕೊಂಡು ಬರಲು ಹೋಗಿದ್ದನಂತೆ. ಆಗ ಮತ್ತೆ ಪತ್ನಿಯೂ ಗಂಡ ಕಪ್ಪು ಮೈ ಬಣ್ಣದ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾಳೆ. ಆತನ ಜೊತೆಗೆ ಹಿಂತಿರುಗಲು ನಿರಾಕರಿಸಿದ್ದಾಳಂತೆ. ಹೀಗಾಗಿ ಪತಿ ಹಾಗೂ ಆಕೆಯ ಅತ್ತೆ ಪೊಲೀಸ್ ಅಧಿಕಾರಿ ಬಳಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.