ಎಚ್ಚರ! ಅತಿಯಾಗಿ ಸೋಡಾ ನೀರು ಕುಡಿಯುವ ಅಭ್ಯಾಸವಿದೆಯೇ?

ಸೋಡಾ ನೀರನ್ನು ವಾಸ್ತವವಾಗಿ ಕಾರ್ಬೊನೇಟೆಡ್ ನೀರು ಎಂದು ಕರೆಯುತ್ತಾರೆ. ಇದರಲ್ಲಿ ಸೋಡಿಯಂ ಬೈಕಾರ್ಬನೇಟ್ ಅನ್ನು ಖನಿಜಯುಕ್ತ ನೀರಿನಲ್ಲಿ ಸೇರಿಸುತ್ತಾರೆ. ಇದನ್ನು ಕ್ಲಬ್ ಸೋಡಾ, ಸೆಲ್ಟ್ಜರ್, ಸ್ಪಾರ್ಕ್ಲಿಂಗ್ ವಾಟರ್ ಅಥವಾ ಫಿಜ್ಜಿ ವಾಟರ್ ಎಂದೂ ಕರೆಯುತ್ತಾರೆ.…

ಸೋಡಾ ನೀರನ್ನು ವಾಸ್ತವವಾಗಿ ಕಾರ್ಬೊನೇಟೆಡ್ ನೀರು ಎಂದು ಕರೆಯುತ್ತಾರೆ. ಇದರಲ್ಲಿ ಸೋಡಿಯಂ ಬೈಕಾರ್ಬನೇಟ್ ಅನ್ನು ಖನಿಜಯುಕ್ತ ನೀರಿನಲ್ಲಿ ಸೇರಿಸುತ್ತಾರೆ. ಇದನ್ನು ಕ್ಲಬ್ ಸೋಡಾ, ಸೆಲ್ಟ್ಜರ್, ಸ್ಪಾರ್ಕ್ಲಿಂಗ್ ವಾಟರ್ ಅಥವಾ ಫಿಜ್ಜಿ ವಾಟರ್ ಎಂದೂ ಕರೆಯುತ್ತಾರೆ.

ಸೋಡಾ ಎಂದರೆ ಹೆಚ್ಚಿನವರಿಗೆ ಇಷ್ಟವಾಗುವುದು. ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿಗಳಿಗೆ ಕೆಲವರು ಸೋಡಾ ಬಳಕೆ ಮಾಡುವರು. ಇನ್ನು ಕೆಲವರು ಇದನ್ನೇ ಕುಡಿಯುವ ಅಭ್ಯಾಸ ಮಾಡಿಕೊಂಡಿರುವರು. ನೀರಿಗಿಂತಲೂ ಹೆಚ್ಚಾಗಿ ಸೋಡಾ ಕುಡಿಯುವಂತಹ ಜನರು ನಮ್ಮಲ್ಲಿ ಇದ್ದಾರೆ.

ತಂಪು ಪಾನೀಯಗಳು, ಫಿಜ್ಜಿ ಪಾನೀಯಗಳಲ್ಲಿ ಸೋಡಾ ಪ್ರಮಾಣ ಇರುತ್ತದೆ. ಇದನ್ನು ಹಾರ್ಡ್ ಪಾನೀಯ, ಕಾಕ್ಟೈಲ್‌ಗಳು ಅಥವಾ ಆಲ್ಕೊಹಾಲ್ಯುಕ್ತ ಪಾನೀಯಗಳೊಂದಿಗೆ ಬೆರೆಸಿ ಸಹ ನೀಡಲಾಗುತ್ತದೆ. ಸೋಡಾ ಪಾನೀಯದಲ್ಲಿ ಸಕ್ಕರೆ ಮತ್ತು ಕೃತಕ ಸಿಹಿಯನ್ನು ಒಳಗೊಂಡಿರುತ್ತದೆ. ಇದು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಹಾಳು ಮಾಡುತ್ತವೆ. ಜೊತೆಗೆ ದೇಹವು ಅನಾರೋಗ್ಯದ ವಿರುದ್ಧ ಹೋರಾಡಲು ಅಡ್ಡಿಯನ್ನುಂಟುಮಾಡುವುದು. ಇದು ವಿವಿಧ ಅನಾರೋಗ್ಯಗಳಿಗೆ ಪ್ರಚೋದನೆ ನೀಡುವುದು. ದೇಹದಲ್ಲಿ ಇರುವ ರೋಗ ನಿರೋಧಕ ಶಕ್ತಿಯು ನಿಧಾನವಾಗಿ ಕುಗ್ಗುವುದು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.