Shikhar Dhawan retirement: ಟೀಂ ಇಂಡಿಯಾಗೆ (Team India) ಅನಿರೀಕ್ಷಿತ ಹೊಡೆತ ಬಿದ್ದಿದ್ದು, ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ (Shikhar Dhawan) ಸಂಚಲನ ಮೂಡಿಸಿದ್ದು, ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಗೆ ನಿವೃತ್ತಿ (Retirement) ಘೋಷಿಸಿದ್ದಾರೆ.
ಹೌದು, ಶಿಖರ್ ಧವನ್ ” ‘ನನಗೆ ಒಂದೇ ಒಂದು ಕನಸು ಇತ್ತು. ಭಾರತಕ್ಕಾಗಿ ಆಡುವುದು. ಅದನ್ನು ನಾನು ಸಾಧಿಸಿದೆ. ನನ್ನ ವೃತ್ತಿಜೀವನಕ್ಕೆ ತೆರೆ ಎಳೆಯುತ್ತಿರುವ ಸಂದರ್ಭದಲ್ಲಿ ದೇಶಕ್ಕಾಗಿ ಸಾಕಷ್ಟು ಪಂದ್ಯಗಳನ್ನು ಆಡಿದ ತೃಪ್ತಿಯಿದೆ” ನಾನು ಇಷ್ಟು ದಿನ ಕ್ರಿಕೆಟ್ ಆಡಿದ ನನ್ನ ತಂಡಕ್ಕೂ & ಅನೇಕ ಜನರಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.
ಇನ್ನು, ನನ್ನ ಪ್ರಯಾಣದಲ್ಲಿ ಕೊಡುಗೆ ನೀಡಿದ ಅನೇಕ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ಮೊದಲನೆಯದಾಗಿ ನನ್ನ ಕುಟುಂಬ. ನನ್ನ ಬಾಲ್ಯದ ತರಬೇತುದಾರ ದಿವಂಗತ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಆಟದ ಮೂಲಭೂತ ಅಂಶಗಳನ್ನು ಕಲಿತಿದ್ದೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.”ನಾನು ಇಷ್ಟು ದೀರ್ಘಕಾಲ ಕ್ರಿಕೆಟ್ ಆಡಿದ ನನ್ನ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಮತ್ತೊಂದು ಕುಟುಂಬ ಸಿಕ್ಕಿತು, ನನಗೆ ಹೆಸರು, ಖ್ಯಾತಿ ಮತ್ತು ಎಲ್ಲಾ ಅಭಿಮಾನಿಗಳ ಪ್ರೀತಿ ಸಿಕ್ಕಿತು ಎಂದು ಹೇಳಿದ್ದಾರೆ.
ಧವನ್ ತಮ್ಮ ವೃತ್ತಿಜೀವನದಲ್ಲಿ ಎಷ್ಟು ರನ್ ಕಲೆಹಾಕಿದ್ದಾರೆ ಗೊತ್ತಾ?
ದಶಕಕ್ಕೂ ಹೆಚ್ಚು ಕಾಲ ಭಾರತ ತಂಡದ ಆರಂಭಿಕ ಆಟಗಾರನಾಗಿದ್ದ ಶಿಖರ್ ಧವನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 34 ಟೆಸ್ಟ್ ಪಂದ್ಯಗಳನ್ನಾಡಿದ್ದು, 2315 ರನ್ ಕಲೆಹಾಕಿದ್ದು 7 ಶತಕ ಬಾರಿಸಿದ್ದಾರೆ. 167 ODI ಪಂದ್ಯಗಳನ್ನು ಆಡಿದ್ದು, 6793 ರನ್ ಕಲೆ ಹಾಕಿದ್ದು, 17 ಶತಕ ಬಾರಿಸಿದ್ದಾರೆ. ಮತ್ತು 68 ಟಿ20 ಪಂದ್ಯಗಳಲ್ಲಿ 1759 ರನ್ ಗಳಿಸಿದ್ದಾರೆ.
ಶಿಖರ್ ಧವನ್ ಭಾರತ ತಂಡವನ್ನು ಪ್ರವೇಶ ಮಾಡುವ ಮೊದಲು ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿಗಾಗಿ ಆಡಿದ್ದರು. ಆ ಮೂಲಕ ತಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದರು. ಭಾರತ ತಂಡ ಪ್ರವೇಶದ ನಂತರ ರೋಹಿತ್ ಜೊತೆಗೆ ಏಕದಿನದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯಾಗಿದ್ದರು.
ಶಿಖರ್ ಧವನ್ ವಿದಾಯ! ಈ ಕಠಿಣ ನಿರ್ಧಾರಕ್ಕೆ ಕಾರಣವೇನು?
ಶಿಖರ್ ಧವನ್ ಬಹಳ ಸಮಯದಿಂದ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ. ಶಿಖರ್ ಧವನ್ ಕೊನೆಯ ಬಾರಿಗೆ 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಪರ ಆಡಿದ್ದರು. ಇದಾದ ನಂತರ ಓಪನರ್ ಆಗಿ ಧವನ್ ಸ್ಥಾನವನ್ನು ಶುಭಮನ್ ಗಿಲ್ ತುಂಬಿದರು. ಇಷ್ಟೆ ಅಲ್ಲದೆ ಐಪಿಎಲ್‌ನಲ್ಲಿ ಕೂಡಾ ಧವನ್ ನಿರೀಕ್ಷೆಗೆ ತಕ್ಕಂತೆ ಅವರ ಪ್ರದರ್ಶನ ನೀಡಿರಲಿಲ್ಲ. 38 ವರ್ಷದ ಆಟಗಾರ ಧವನ್ ಗಾಯಗಳ ವಿರುದ್ಧ ಹೋರಾಡುತ್ತಿದ್ದಾರೆ. ಅವಕಾಶ ಮತ್ತು ವಯಸ್ಸಿನ ಕಾರಣದಿಂದ ಧವನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ ಎನ್ನಲಾಗಿದೆ.
2022 ರಲ್ಲಿ ಕೊನೆಯ ಬಾರಿಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಧವನ್ !
ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 2010 ರಲ್ಲಿ ಇಂಡಿಯಾ ತಂಡದಲ್ಲಿ ಮೊದಲ ಪಂದ್ಯವಾಡಿದ್ದ ಶಿಖರ್ ಧವನ್ ನಂತರ ಟೀಮ್ ಇಂಡಿಯಾ ಪರ 167 ಒಡಿಐ ಪಂದ್ಯಗಳನ್ನು ಆಡಿದ್ದಾರೆ. 2022ರಲ್ಲಿ ಭಾರತ ತಂಡದಿಂದ ಹೊರಬಿದ್ದಿದ್ದರು. ಇದಾದ ನಂತರ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಧವನ್ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ದುಲೀಪ್ ಟ್ರೋಫಿಗೆ ಆಯ್ಕೆ ಮಾಡಲಾದ ನಾಲ್ಕು ತಂಡಗಳಲ್ಲೂ ಅವರ ಹೆಸರು ಕಾಣಿಸಿಕೊಂಡಿರಲಿಲ್ಲ. ಇದರಿಂದ ನಿವೃತ್ತಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಐಪಿಎಲ್‌ನಲ್ಲಿ ಮುಂದುವರಿಯುತ್ತಾರಾ ಶಿಖರ್ ಧವನ್!
ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ನಡುವೆ ಐಪಿಎಲ್‌ನಲ್ಲಿ ಧವನ್ ಆಡಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿರುವ ಧವನ್ ಐಪಿಎಲ್‌ನಲ್ಲಿ ಮುಂದುವರಿಯಲಿದ್ದಾರೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕೂಡಾ ಇದೆ. ಶಿಖರ್ ಧವನ್ ಅವರಿಗೆ 38 ವರ್ಷವಾಗಿದೆ. ಹೀಗಾಗಿ ಇವರನ್ನು ಪಂಜಾಬ್ ಕಿಂಗ್ಸ್ ರಿಟೈನ್ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ಮೆಗಾ ಹರಾಜಿನ ಮೂಲಕ ಶಿಖರ್ ಧವನ್ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.