AICTE: ಎಐಸಿಟಿಇ – ಸಕ್ಷಮ್ ಸ್ಕಾಲರ್‌ಶಿಪ್ (AICTE Saksham Scholarship) ಸ್ಕೀಮ್ 2024-25, ತಾಂತ್ರಿಕ ಶಿಕ್ಷಣವನ್ನು ಪಡೆಯಲು ಸಿದ್ಧರಿರುವ ವಿಶೇಷ – ಸಾಮರ್ಥ್ಯದ ಮಕ್ಕಳನ್ನು ಬೆಂಬಲಿಸಲು ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ಎಜುಕೇಶನ್ (ಈ ಹಿಂದಿನ ಎಂಎಚ್‌ಆರ್‌ಡಿ)ನ ಉಪಕ್ರಮವಾಗಿದೆ. ಇದೀಗ ಈ ಯೋಜನೆಯನ್ನು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ಜಾರಿಗೊಳಿಸಿದೆ.
ಅರ್ಹತೆಗಳೇನು?
ಅಗತ್ಯ ಮಾನದಂಡವಾದ 40% ಕ್ಕಿಂತ ಕಡಿಮೆಯಿಲ್ಲದ ಅಸಾಮರ್ಥ್ಯವನ್ನು ಹೊಂದಿರುವ ವಿಶೇಷ – ಸಾಮರ್ಥ್ಯದ ವರ್ಗಕ್ಕೆ ಸೇರಿದ ಭಾರತೀಯ ಪ್ರಜೆಗಳಿಗೆ ಮುಕ್ತವಾಗಿದೆ. ಅರ್ಜಿದಾರರು ಪ್ರಸ್ತುತ-ವರ್ಷದ ಎಐಸಿಟಿಇ – ಅನುಮೋದಿತ ಸಂಸ್ಥೆಯಲ್ಲಿ ಪದವಿ/ಡಿಪ್ಲೊಮಾ ಕಾರ್ಯಕ್ರಮದ ಮೊದಲ ಅಥವಾ ಎರಡನೆಯ ವರ್ಷಕ್ಕೆ (ಲ್ಯಾಟರಲ್ ಪ್ರವೇಶದ ಮೂಲಕ) ದಾಖಲಾಗಿರಬೇಕು. ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ರೂ. 8,00,000ಕ್ಕಿಂತ ಕಡಿಮೆ ಇರಬೇಕು.
ವಾರ್ಷಿಕ ಸಹಾಯಧನ ಎಷ್ಟು?
ಕೋರ್ಸ್ ಮುಗಿಯುವವರೆಗೆ ಪ್ರತಿ ವರ್ಷದ ಅಧ್ಯಯನಕ್ಕೆ ವಾರ್ಷಿಕ ರೂ. ₹50,000
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-10-2024
ಅರ್ಜಿ ಸಲ್ಲಿಸುವ ವಿಧಾನ: (ಆನ್‌ಲೈನಲ್ಲಿ ಅರ್ಜಿ ಹಾಕಿ)
Short Url: www.b4s.in/nwmd/ASDA1