(NF Scholarship:) 2024-25 ನೇ ಸಾಲಿನ ನ್ಯಾಷನಲ್ ಫೆಲೋಶಿಪ್ ಅಂಡ್ ಸ್ಕಾಲರ್ಶಿಪ್ ಅನ್ನು ಹೈಯರ್ ಎಜುಕೇಶನ್ ಆಫ್ ಎಸ್.ಟಿ ಸ್ಟೂಡೆಂಟ್ಸ್ ಗಳಿಗೆ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ, ಅರ್ಜಿ ಸಲ್ಲಿಕೆ ಹೇಗೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ನ್ಯಾಷನಲ್ ಫೆಲೋಶಿಪ್ ಅಂಡ್ ಸ್ಕಾಲರ್ಶಿಪ್ ಫಾರ್ ಹೈಯರ್ ಎಜುಕೇಶನ್ ಆಫ್ ಎಸ್.ಟಿ ಸ್ಟೂಡೆಂಟ್ಸ್ (ಎನ್.ಎಫ್.ಎಸ್.ಟಿ) 2024-25, ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ನೀಡುವ ಅವಕಾಶವಾಗಿದೆ. ಪರಿಶಿಷ್ಟ ಪಂಗಡ (ಎಸ್.ಟಿ)ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ಗಳನ್ನು ಒದಗಿಸುವ ಮೂಲಕ ಅವರಿಗೆ ಉನ್ನತ ಶಿಕ್ಷಣವನ್ನು ಒದಗಿಸುವ, ವೃತ್ತಿಪರ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಅವರನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
- ಜುಲೈ 1 ಕ್ಕೆ 36 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಾದ ಭಾರತೀಯ ಪರಿಶಿಷ್ಟ ಪಂಗಡದ (ಎಸ್.ಟಿ) ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.
- ಫೆಲೋಶಿಪ್ ಸ್ವೀಕರಿಸುವವರು ಪಿಜಿ ಹಂತದಲ್ಲಿ ಕನಿಷ್ಠ 55% ಅಂಕಗಳೊಂದಿಗೆ, ಸಚಿವಾಲಯ-ಅನುಮೋದಿತ ಸಂಸ್ಥೆಗಳಲ್ಲಿ ಪೂರ್ಣ ಸಮಯದ ನಿಯಮಿತ ಎಂ.ಫಿಲ್ ಅಥವಾ ಪಿಎಚ್.ಡಿ ಕಾರ್ಯಕ್ರಮಗಳಿಗೆ ದಾಖಲಾಗಿರಬೇಕು.
- ವಿದ್ಯಾರ್ಥಿವೇತನ ಅರ್ಜಿದಾರರು ಪದವಿಪೂರ್ವ ಅಥವಾ ಸ್ನಾತಕೋತ್ತರ ಪದವಿಗಳನ್ನು ಅನುಸರಿಸುತ್ತಿರಬೇಕು.
- ವಾರ್ಷಿಕ ಕುಟುಂಬ ಆದಾಯವು 6,00,000 ಕ್ಕಿಂತ ಕಡಿಮೆ ಇರಬೇಕು.
- ಎಷ್ಟು ಸ್ಕಾಲರ್ ಶಿಪ್ ಲಭ್ಯ:
35,000 ವರೆಗಿನ ಫೆಲೋಶಿಪ್ ಜೊತೆಗೆ 25,000 ವರೆಗಿನ ವಾರ್ಷಿಕ ಅನುದಾನ.ಅರ್ಜಿ ಸಲ್ಲಿಕೆ ಹೇಗೆ?:
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/NFTS2 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. - ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?;
31-10-2024