(AFE Scholarship) ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನ ಅಮೆಜಾನ್ ಫ್ಯೂಚರ್ ಎಂಜಿನಿಯರ್ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಅಮೆಜಾನ್ ಫ್ಯೂಚರ್ ಎಂಜಿನಿಯರ್ ಸ್ಕಾಲರ್ಶಿಪ್, ಅಮೆಜಾನ್’ನ ಉಪಕ್ರಮವಾಗಿದ್ದು, ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಸಂಬಂಧಿತ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಮತ್ತು ಬೆಂಬಲವನ್ನು ನೀಡುವ ಮೂಲಕ ಭಾರತದಾದ್ಯಂತದ ಶೈಕ್ಷಣಿಕವಾಗಿ ಪ್ರತಿಭಾನ್ವಿತರಾದ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ, ವಿಶೇಷವಾಗಿ ಹೆಣ್ಣು ಮಕ್ಕಳ ಜೀವನವನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ.
ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
* ಪ್ರಸ್ತುತ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (ಬಿ.ಇ) ಅಥವಾ ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿ.ಟೆಕ್) ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಸೈನ್ಸ್ ಅಥವಾ ನಿಕಟ ಸಂಬಂಧಿತ ವಿಷಯಕ್ಕೆ ದಾಖಲಾಗಿರುವಂತಹ ಮೊದಲ ವರ್ಷದಲ್ಲಿರುವ ಭಾರತೀಯ ವಿದ್ಯಾರ್ಥಿನಿಯರಿಗೆ ಲಭ್ಯವಿದೆ.
* ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು
* 2022ರ ನಂತರ ತಮ್ಮ ಹೈಯರ್-ಸೆಕೆಂಡರಿ ಪರೀಕ್ಷೆಯಲ್ಲಿ (ಸಿಬಿಎಸ್ಸಿ, ಐಎಸ್ಸಿ ಅಥವಾ ತತ್ಸಮಾನ) ಉತ್ತೀರ್ಣರಾಗಿರಬೇಕು.
* ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆದಿರುವುದು ಅವಶ್ಯಕ.
* ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 3,00,000 ಕ್ಕಿಂತ ಕಡಿಮೆ ಇರಬೇಕು.
ಎಷ್ಟು ಸ್ಕಾಲರ್ ಶಿಪ್ ಲಭ್ಯ:
50,000
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/AFES2 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?:
31-12-2024