ಸದ್ಗುರು ಜಗ್ಗಿ ವಾಸುದೇವ್ ಅವರ ಜೀವನ ಚರಿತ್ರೆ – Sadhguru Jaggi Vasudev Biography
ಸದ್ಗುರು ಎಂದೇ ಖ್ಯಾತಿ ಪಡೆದಿರುವ ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಭಾರತೀಯ ಯೋಗ ಗುರು ಮತ್ತು ಲೇಖಕರು. ಸದ್ಗುರು ಅವರು ಸೆಪ್ಟೆಂಬರ್ 3, 1957 ರಂದು ಕರ್ನಾಟಕದ ಮೈಸೂರಿನಲ್ಲಿ ಜನಿಸಿದರು. ಸದ್ಗುರು ಅವರು ತಮ್ಮ 67ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಸದ್ಗುರು ಅವರು ಸೆಪ್ಟೆಂಬರ್ 3, 1957 ರಂದು ಕರ್ನಾಟಕದ ಮೈಸೂರಿನಲ್ಲಿ ಜನಿಸಿದರು. ಸದ್ಗುರುಗಳು 1982 ರಿಂದ ದಕ್ಷಿಣ ಭಾರತದಲ್ಲಿ ಯೋಗವನ್ನು ಕಲಿಸುತ್ತಿದ್ದರು. 1992 ರಲ್ಲಿ ಕೊಯಮತ್ತೂರು ಬಳಿ ‘ಇಶಾ ಫೌಂಡೇಶನ್’ ಸ್ಥಾಪಿಸಿದರು. ಇದು ಆಶ್ರಮ ಮತ್ತು ಯೋಗ ಕೇಂದ್ರವಾಗಿದೆ.
ಸದ್ಗುರು ಜಗ್ಗಿ ವಾಸುದೇವ್ ಅವರ ಬಾಲ್ಯಜೀವನ- Sadhguru Jaggi Vasudev Childhood Life
ಮೈಸೂರಿನ ನಿವಾಸಿಗಳಾಗಿದ್ದ ಸುಶೀಲ ಮತ್ತು ಡಾ. ವಾಸುದೇವ್ ಎಂಬ ತೆಲುಗು ದಂಪತಿಳ ಕಿರಿಯ ಮಗನೇ ಜಗದೀಶ್. ಇವರ ಮನೆಗೆ ಬಂದ ಗೊರವನೊಬ್ಬ ಮಗುವಿನ ಭವಿಷ್ಯ ಅತ್ಯುತ್ತಮವಾಗಿದೆಯೆಂದು ಹೇಳಿದ್ದರಂತೆ. ಹಾಗಾಗಿಯೇ ಈ ಮಗುವಿಗೆ ’ಜಗದೀಶ್’- ಅರ್ಥಾತ್ ಜಗತ್ತಿನ ಒಡೆಯ, ಎಂಬ ಹೆಸರಿಟ್ಟರು. ಜಗ್ಗಿಯವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪದವೀಧರರಾದರು. ತರಗತಿಗೇ ಎರಡನೆ ಸ್ಥಾನ ಪಡೆದರು. ಕಾಲೇಜು ದಿನಗಳಲ್ಲೇ ಇವರಿಗೆ ಪ್ರವಾಸ ಮತ್ತು ಮೋಟರ್‌ಬೈಕ್‌ಗಳೆಂದರೆ ಅತೀವ ಆಸಕ್ತಿಯಿತ್ತು.
ಸದ್ಗುರು ಅವರ ಪ್ರೀತಿಯ ಮಡದಿ ಬಗ್ಗೆ ನಿಮಗೆ ತಿಳಿದಿರದ ವಿಷಯಗಳು – Sadhguru Jaggi Vasudev Wife
ಸದ್ಗುರು ಅವರ ಪತ್ನಿ ವಿಜಯಕುಮಾರಿಯನ್ನು 1980ರಲ್ಲಿ ಮೈಸೂರಿನಲ್ಲಿ ಮೊದಲ ಬಾರಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು. ನಂತರ ಅವರಿಬ್ಬರ ನಡುವೆ ಪ್ರೇಮಾಂಕುರವಾಯಿತು. ಪತ್ರ ಮೂಲಕ ಮುಂದುವರೆದಿದ್ದ ಅವರ ಪ್ರೇಮ 1984ರಲ್ಲಿ ಶಿವರಾತ್ರಿಯ ದಿನವೇ ಮದುವೆಗೆ ತಿರುಗಿತು. ವಿವಾಹವಾದ 6 ವರ್ಷದ ಬಳಿಕ 1990 ರಲ್ಲಿ ಅವರಿಗೆ ಒಬ್ಬ ಮಗಳೂ ಜನಿಸಿದಳು. ಅವಳಿಗೆ ರಾಧೆ ಎಂದು ನಾಮಕರಣ ಮಾಡಲಾಯ್ತು. 1997ರಲ್ಲಿ ಸದ್ಗುರು ಅವರ ಧರ್ಮಪತ್ನಿ ಇಹಲೋಕ ತ್ಯಜಿಸಿದರು. ಸದ್ಗುರು ಹೇಳುವಂತೆ ಹುಣ್ಣಿಮೆಯ ದಿನ ಅವರ ಪತ್ನಿ ದೇಹವನ್ನು ಬಿಡುವುದಾಗಿ ನಿರ್ಧರಿಸಿದ್ದರಂತೆ.
ಚಾಮುಂಡಿ ಬೆಟ್ಟದಲ್ಲಿ ಸದ್ಗುರುವಿಗೆ ಆಧ್ಯಾತ್ಮಿಕ ಅನುಭವ!
ಸದ್ಗುರು ತಮ್ಮ 25 ವರ್ಷದಲ್ಲಿ ಅವರು ಒಮ್ಮೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದರು. ಅಲ್ಲಿ ಎತ್ತರದ ಕಲ್ಲುಬಂಡೆಯ ಮೇಲೆ ಕುಳಿತ ಅವರು ಧ್ಯಾನ ಮಾಡಲು ಆರಂಬಿಸಿದರು. ಆ ಧ್ಯಾನ ಅವರನ್ನು ಸಮಾಧಿ ಸ್ಥಿತಿಗೆ ತಲುಪಿಸಿತ್ತು. ಸಮಾಧಿ ಸ್ಥಿತಿಯಿಂದ ಹೊರಬಂದ ನಂತರ ಸದ್ಗುರು ಅವರು ತಾನು 10 ನಿಮಿಷ ಧ್ಯಾನದಲ್ಲಿ ಕುಳಿತಿದ್ದೆ ಎಂದು ಅಂದುಕೊಂಡರು. ಆದರೆ ಅವರು ಸಮಾಧಿ ಸ್ಥಿತಿ ತಲುಪಿ ನಾಲ್ಕು ಗಂಟೆಯಾಗಿತ್ತು. ಅಲ್ಲಿಂದ ಅವರ ಆತ್ಮಾತ್ಮಿಕ ಬದುಕು ಆರಂಭವಾಯಿತು.
ಮೈಸೂರಲ್ಲಿ ಕೋಳಿ ಫಾರಂ ತೆರೆದಿದ್ದ ಸದ್ಗುರು- Sadguru Jaggi Vasudev Poultry Farm in Mysore
ಭಾರತದ ಅನೇಕ ಸ್ಥಳಗಳಿಗೆ ಮೋಟಾರ್‌ಬೈಕ್‌ನಲ್ಲೇ ಪ್ರವಾಸ ಹೋಗುತ್ತಿದ್ದ ಸದ್ಗುರು ಅವರಿಗೆ ಪಾಸ್‌ಪೋರ್ಟ್ ಇಲ್ಲದಿದ್ದುದರಿಂದ ನೇಪಾಳದ ಗಡಿಯಲ್ಲಿ ಪ್ರವೇಶ ದೊರೆಯಲಿಲ್ಲ. ಈ ಕಾರಣದಿಂದ ಬಹು ಬೇಗ ಹಣ ಸಂಪಾದಿಸಬೇಕು ಎಂದು ಸದ್ಗುರು ಆರಂಭದಲ್ಲಿ ಮೈಸೂರಿನಲ್ಲಿ ಕೋಳಿ ಫಾರಂ ತೆರೆದಿದ್ದರು. ಆದರೆ ಅವರಿಗೆ ಆಧ್ಯಾತ್ಮದ ಕಡೆ ಅವರ ಒಲವು ಹೆಚ್ಚುತ್ತಲೇ ಇತ್ತು. ಹೀಗಾಗಿ ಈ ಕೋಳಿ ಫಾರಂ ಮುಚ್ಚಲು ಮುಂದಾದರು. ಇದಾದ ಬಳಿಕ ಅವರು ಯೋಗ ಕಲಿಸಲು ಮುಂದಾದರು. ಹಲವು ವರ್ಷಗಳ ಕಾಲ ಜನರಿಗೆ ಯೋಗ ತರಬೇತಿ ನೀಡಿದರು.
ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ಸದ್ಗುರು ಅವರ ಸಲಹೆ!
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮಾನಸಿಕ ಖಿನ್ನತೆಯ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರಪಂಚದಾದ್ಯಂತ ಸುಮಾರು 970 ಮಿಲಿಯನ್ ಜನರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ಆತಂಕ ಮತ್ತು ಖಿನ್ನತೆಯು ಸಾಮಾನ್ಯವಾಗಿದೆ. ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿರುವವರ ಸಂಖ್ಯೆಯು ವರ್ಷಗಳಲ್ಲಿ ಗಣನೀಯವಾಗಿ ಏರಿದೆ. ಇದಕ್ಕೆ ಕಾರಣ ಮತ್ತು ಅದರಿಂದ ಹೊರಬರುವುದು ಹೇಗೆ ಎಂಬುದನ್ನು ಸದ್ಗುರು ವಿವರಿಸಿದ್ದಾರೆ.
ಹೃದಯವನ್ನು ಜೋಪಾನವಾಗಿ ಇಟ್ಟುಕೊಳ್ಳಲು ಸದ್ಗುರು ನೀಡದ ಸಲಹೆ!
ಸದ್ಗುರು ತಮ್ಮ ಭಕ್ತರಿಗೆ ಆಗಾಗ್ಗೆ ಆರೋಗ್ಯದ ಬಗ್ಗೆ ಸಲಹೆಗಳನ್ನು ನೀಡುತ್ತಿರುತ್ತಾರೆ. ಹಾಗೆಯೇ ಆರೋಗ್ಯಕರ ಅಪಧಮನಿಗಳು ಮತ್ತು ಬಲವಾದ ಹೃದಯರಕ್ತನಾಳದ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿ ವಿಧಾನವನ್ನು ಸದ್ಗುರು ಹೇಳಿದ್ದಾರೆ. ಅಪಧಮನಿಗಳನ್ನು ಸ್ವಚ್ಛವಾಗಿಡುವಲ್ಲಿ ಮಹತ್ತರವಾದ ಪಾತ್ರ ವಹಿಸುವ ಕರಿಮೆಣಸು. ಹೀಗಾಗಿ ಅದನ್ನು ಸಣ್ಣ ಪ್ರಮಾಣದಲ್ಲಿ ನಿತ್ಯವೂ ಆಹಾರದಲ್ಲಿ ಸೇವಿಸುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಸದ್ಗುರು.
ದಿನವೂ ಮಲಗುವಾಗ ಪಾಲಿಸಬೇಕಾದ ನಿಯಮಗಳು: ಸದ್ಗುರು ನೀಡಿದ ಮಾಹಿತಿ
ಮನುಷ್ಯನಿಗೆ ನಿದ್ರೆ ತುಂಬಾ ಅವಶ್ಯಕ. ದಿನಕ್ಕೆ 8 ಗಂಟೆಗಳ ಕಾಲ ನಾವು ನಿದ್ರೆ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೂ ರಾತ್ರಿ ನಿದ್ರೆ ಮಾಡುವ ವಿಚಾರದಲ್ಲಿ ಮಾತ್ರ ಕಾಂಪ್ರಮೈಸ್ ಆಗಬಾರದು. ನಿದ್ರಾಹೀನತೆ ಸಮಸ್ಯೆಯನ್ನು ನಾವಾಗಿಯೇ ತಂದುಕೊಳ್ಳಬಾರದು. ಮಲಗೋದಕ್ಕೆ ಟಿಪ್ಸ್ ಬೇಕಾ? ಎಂದರೆ ಖಂಡಿತಾ ಬೇಕು ಮಲಗುವಾಘ ಪಾಲಿಸಬೇಕಾದ ನಿಯಮಗಳ ಬಗ್ಗೆ ಸದ್ಗುರು ನೀಡಿದ ಮಾಹಿತಿ ಈ ಯೂಟ್ಯೂಬ್ ವಿಡಿಯೋದಲ್ಲಿದೆ.
ಆದಿಯೋಗಿಯ ಅದ್ಭುತ ಪ್ರತಿಮೆ ಸ್ಥಾಪನೆ ಮಾಡಿದ ಸದ್ಗುರು- Installation of statue of Adiyogi
ಇಶಾ ಫೌಂಡೇಶನ್‌ನ ಸಂಸ್ಥಾಪಕ- ಸದ್ಗುರು ಜಗ್ಗಿ ವಾಸುದೇವ್ ಅವರು ತಮಿಳುನಾಡಿನ ಕೊಯಮತ್ತೂರಿನ ಇಶಾ ಯೋಗ ಸಂಕೀರ್ಣದಲ್ಲಿ ಆದಿಯೋಗಿಯ ಅದ್ಭುತ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಇದನ್ನು 500 ಟನ್ ಉಕ್ಕಿನಿಂದ ಕೆತ್ತಲಾಗಿದೆ. ಈ ಶಿಲ್ಪವು 112 ಅಡಿ ಎತ್ತರದಲ್ಲಿ ನಿಂತಿದೆ. ಗಿನ್ನೆಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಈ ಪ್ರತಿಮೆಯನ್ನು “ಅತಿದೊಡ್ಡ ಬಸ್ಟ್ ಶಿಲ್ಪ” ಎಂದು ಗುರುತಿಸಿದೆ. ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 24, 2017 ರಂದು ಉದ್ಘಾಟಿಸಿದರು.
https://vijayaprabha.com/sale-of-pop-ganesha-idols-banned/