ರಾಜ್ಯಾದ್ಯಂತ ಇನ್ಮುಂದೆ ಆಸ್ತಿ ರಿಜಿಸ್ಟರ್‌ ಆಫೀಸ್‌ಗೆ ಹೋಗಬೇಕಿಲ್ಲ: ‘ಎನಿವೇರ್ ನೋಂದಣಿ’ ಸೆಪ್ಟೆಂಬರ್‌ ನಲ್ಲೇ ಜಾರಿ

ಬೆಂಗಳೂರು: ರಾಜ್ಯ ವಿಧಾನಸಭೆಯ ಅಂದಾಜು ಸಮಿತಿಯು ನೋಂದಣಿ ಇಲಾಖೆ ನೀಡುವ ‘ಎನಿವೇರ್ ನೋಂದಣಿ’ ಸೇವೆಯನ್ನು ರಾಜ್ಯ ಮಟ್ಟದ ಕಾರ್ಯವಿಧಾನವಾಗಿ ವಿಸ್ತರಿಸುವುದಕ್ಕೆ ಮುಂದಾಗಿದೆ. ಸಾರ್ವಜನಿಕರು ಸ್ಥಿರಾಸ್ತಿ ನೋಂದಣಿಗಾಗಿ ನಿರ್ದಿಷ್ಟ ಉಪ ನೋಂದಣಿ ಕಚೇರಿಗೆ ಭೇಟಿ ನೀಡದೇ,…

ಬೆಂಗಳೂರು: ರಾಜ್ಯ ವಿಧಾನಸಭೆಯ ಅಂದಾಜು ಸಮಿತಿಯು ನೋಂದಣಿ ಇಲಾಖೆ ನೀಡುವ ‘ಎನಿವೇರ್ ನೋಂದಣಿ’ ಸೇವೆಯನ್ನು ರಾಜ್ಯ ಮಟ್ಟದ ಕಾರ್ಯವಿಧಾನವಾಗಿ ವಿಸ್ತರಿಸುವುದಕ್ಕೆ ಮುಂದಾಗಿದೆ. ಸಾರ್ವಜನಿಕರು ಸ್ಥಿರಾಸ್ತಿ ನೋಂದಣಿಗಾಗಿ ನಿರ್ದಿಷ್ಟ ಉಪ ನೋಂದಣಿ ಕಚೇರಿಗೆ ಭೇಟಿ ನೀಡದೇ, ಮತ್ತಾವುದೇ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಬಹುದಾದ ‘ಎನಿವೇರ್‌ ನೋಂದಣಿ’ ವ್ಯವಸ್ಥೆ ಸೆಪ್ಟೆಂಬರ್‌ ಮೊದಲ ವಾರದಿಂದಲೇ ರಾಜ್ಯಾದ್ಯಂತ ಜಾರಿಯಾಗಲಿದೆ.

ಎನಿವೇರ್ ನೋಂದಣಿ ವ್ಯವಸ್ಥೆಯ ಅಡಿ ಯಾವುದೇ ವ್ಯಕ್ತಿಯು ನೋಂದಣಿ ದಸ್ತಾವೇಜನ್ನು ಜಿಲ್ಲೆಯ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ‘ ಎನಿವೇರ್‌ ನೋಂದಣಿ ‘ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಬಹು ಕಚೇರಿ ಆಯ್ಕೆ ಸಿಗಲಿದ್ದು, ಒಂದೇ ಕಚೇರಿಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇರುವುದಿಲ್ಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.