ರಾಯಚೂರು: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವಿಗೆ ಕಾರಣವಾದರ ಹಿನ್ನಲೆಯಲ್ಲಿ ಬಾಣಂತಿಯರಿಗೆ ನೀಡಿದಂತ ಐವಿ ರಿಂಗಲ್ ಲ್ಯಾಕ್ಟೇಟ್ ದ್ರಾವಣ ಬಳಕೆಗೆ ಯೋಗವಲ್ಲ ಎಂಬುದಾಗಿ ಲ್ಯಾಬ್ ವರದಿಯಿಂದ ಶಾಕಿಂಗ್ ಮಾಹಿತಿ ಬಹಿರಂಗಗೊಂಡಿದೆ.
ರಾಯಚೂರಿನ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಸರಣಿ ಸಾವಾಗಿತ್ತು. ಈ ಘಟನೆಯ ನಂತರ ಒಟ್ಟು 3 ಲ್ಯಾಬ್ ಗಳಿಗೆ ತಲಾ 6 ಐಪಿ ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.
ಈ ದ್ರಾವಣವನ್ನು ಪರೀಕ್ಷಿಸಿದಂತ ಲ್ಯಾಬ್ ವರದಿ ಹೊರಬಿದ್ದಿದ್ದು, ಐಪಿ ರಿಂಗಲ್ ಲ್ಯಾಕ್ಟೇಟ್ ದ್ರಾವಣದಲ್ಲಿ ಎಂಡೋ ಟ್ಯಾಕ್ಸಿನ್ ಎಂಬ ಅಂಶ ಬಳಕೆಯಾಗಿದೆ. ಇದು ಬಳಕೆಗೆ ಯೋಗ್ಯವಲ್ಲ ಎಂಬ ಶಾಕಿಂಗ್ ಮಾಹಿತಿಯನ್ನು ಬಿಚ್ಚಿಟ್ಟಿದೆ.
ಇನ್ನು ಹೈದರಾಬಾದ್ನ ವಿಂಪ್ಟಾ ಲ್ಯಾಬ್ ವರದಿಯಲ್ಲಿ 6 ಸ್ಯಾಂಪಲ್ ಪೈಕಿ, 4 ಉಪಯೋಗಕ್ಕೆ ಯೋಗ್ಯವಿದೆ ಅಂತ ತಿಳಿಸಲಾಗಿದೆ. ಇನ್ನುಳಿದ 2 ಯೋಗ್ಯವಲ್ಲ ಅಂತ ವರದಿಯಲ್ಲಿ ಶಾಕಿಂಗ್ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಈಗ ಸರ್ಕಾರದ ಡ್ರಗ್ ಕಂಟ್ರೋಲ್ ಲ್ಯಾಬ್ನ ವರದಿ ಬರಬೇಕಿದ್ದು ಅದರಲ್ಲಿ ಏನು ವರದಿ ಬರುತ್ತದೋ ಎಂಬುದನ್ನು ಕಾದು ನೋಡಬೇಕಿದೆ.