Diabetes : ರಕ್ತದಲ್ಲಿನ ಸಕ್ಕರೆ/ಗ್ಲೂಕೋಸ್ ಅನ್ನು ದೇಹ ಪ್ರೊಸೆಸ್ ಮಾಡದಿದ್ದರೆ ಮಧುಮೇಹ(Diabetes) ಸಂಭವಿಸುತ್ತದೆ.
ಹೌದು, ಇದರಿಂದ ಹೃದಯಾಘಾತ, ಪಾರ್ಶ್ವವಾಯು, ದೃಷ್ಟಿಹೀನತೆ & ಕಿಡ್ನಿ ಸಮಸ್ಯೆ ಉಂಟಾಗಬಹುದು. ರೋಗಲಕ್ಷಣಗಳೆಂದರೆ ಆಗಾಗ ಬಾಯಾರಿಕೆ, ಅತಿಯಾದ ಮೂತ್ರ ವಿಸರ್ಜನೆ, ಆಯಾಸ, ತೂಕ ನಷ್ಟ, ಹುಣ್ಣುಗಳು & ದೃಷ್ಟಿ ಮಂದ. ಸಂಸ್ಕರಿಸಿದ ಆಹಾರ ಮತ್ತು ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿರುವ ಪಾನೀಯ ಸೇವಿಸಬೇಡಿ. ಆರೋಗ್ಯಕರ ತೂಕ ಕಾಪಾಡಿಕೊಳ್ಳಿ. ಸೊಪ್ಪು, ಬೇಳೆ, ರಾಗಿ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Pneumonia : ಇಂದು ವಿಶ್ವ ನ್ಯೂಮೋನಿಯಾ ದಿನ; ನ್ಯೂಮೋನಿಯಾ ಲಕ್ಷಣಗಳೇನು? ಪತ್ತೆ ಹಚ್ಚುವುದು ಹೇಗೆ?
Diabetes : ಮಧುಮೇಹಿಗಳ ಆಹಾರ ಕ್ರಮ ಹೀಗಿರಲಿ..
- ಕಾರ್ಬೋ ಹೈಡ್ರೇಟ್ಸ್ ಪ್ರಮಾಣ ಕಡಿಮೆ ಇರುವ, ನಿಧಾನವಾಗಿ ಜೀರ್ಣವಾಗುವ ಆಹಾರ ಸೇವಿಸಿ.
- ಆಹಾರದಲ್ಲಿ ಪ್ರೊಟೀನ್, ಫೈಬರ್ ಅಂಶ ಹೆಚ್ಚಿರಲಿ.
- ಕುಚ್ಚಲಕ್ಕಿ, ಚಪಾತಿ, ಓಟ್ಸ್, ಇಡೀ ಧಾನ್ಯದ ನೂಡಲ್ ಉತ್ತಮ.
- ದ್ವಿದಳ ಧಾನ್ಯಗಳು, ಹಣ್ಣು, ತರಕಾರಿ, ಡ್ರೈ ಫ್ರೂಟ್ಸ್‌ಗಳು ಒಳ್ಳೆಯದು.
- ಸಿಹಿ ಹೆಚ್ಚಿರುವ ಹಣ್ಣುಗಳ ಸೇವನೆ ಬೇಡ.
- ಮಾಂಸಾಹಾರಿಗಳು ಚಿಕನ್, ಫಿಶ್, ಎಗ್‌ವೈಟ್ ಸೇವನೆ ಮಾಡಬಹುದು.
- ಕೊಬ್ಬಿನ ಅಂಶ ಇರುವ ಆಹಾರ ಸೇವನೆಯಿಂದ ದೂರವಿರಿ.
ಇದನ್ನೂ ಓದಿ: Mango Fruit | ಮಾವು ಯಾವೆಲ್ಲ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಗೊತ್ತಾ?