ಪ್ರಧಾನ ಮಂತ್ರಿ ಜನ್ ಧನ್ ಯೋಜನೆ | ಏನೆಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ? ಅಗತ್ಯವಿರುವ ದಾಖಲೆಗಳು, ಅರ್ಜಿ ಸಲ್ಲಿಕೆ ಹೇಗೆ?

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ : ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ನು (PMJDY) 2014 ರಲ್ಲಿ ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್‌ ಖಾತೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದರು. ಪ್ರಧಾನ…

Pradhan Mantri Jan Dhan Yojana

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ : ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ನು (PMJDY) 2014 ರಲ್ಲಿ ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್‌ ಖಾತೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದರು.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಗರಿಷ್ಠ ಮಟ್ಟದಲ್ಲಿ ಬ್ಯಾಂಕ್‌ ಖಾತೆ ತೆರೆಯುವ ಗುರಿ ಹೊಂದಲಾಗಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಮೂಲಕ ವ್ಯಕ್ತಿಗಳು ಬ್ಯಾಂಕಿಂಗ್, ಉಳಿತಾಯ ಹಾಗೂ ಠೇವಣಿ ಖಾತೆ, ಹಣ ರವಾನೆ, ಪಿಂಚಣಿ, ಮತ್ತು ಕ್ರೆಡಿಟ್ ವಿಮೆ ಸೌಲಭ್ಯ ಪಡೆಯಬಹುದು. ರುಪೆ ಕಾರ್ಡ್‌ ಹೆಸರಿನ ಈ ಸೌಲಭ್ಯ ಕೋಟ್ಯಂತರ ಜನರಿಗೆ ಅನುಕೂಲಕಾರಿಯಾಗಿದೆ.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ಏನೆಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ?

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ಬ್ಯಾಂಕ್‌ ಖಾತೆ ಹೊಂದಿರದವರಿಗೆ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸಲಿದ್ದು, ಡೆಬಿಟ್‌ ಕಾರ್ಡ್ ನಿಂದ ಹಿಡಿದು ಅಪಘಾತ ವಿಮೆವರೆಗಿನ ಎಲ್ಲ ಬಗೆಯ ಬ್ಯಾಂಕಿಂಗ್‌ ಕ್ಷೇತ್ರದ ಮೂಲ ಸೌಲಭ್ಯಗಳನ್ನು ಒಳಗೊಂಡಿದೆ. ಆಧಾರ್‌ ಕಾರ್ಡ್ ಸಂಬಂಧಿತ ಬ್ಯಾಂಕ್‌ ಖಾತೆಗಳಿಗೆ ಓವರ್‌ ಡ್ರಾಪ್ಟ್‌ ಸೌಲಭ್ಯ ಕಲ್ಪಿಸಲಾಗುತ್ತಿದೆ. ಯೋಜನೆಯಡಿ ಖಾತೆ ಮಾಡಿಸಿಕೊಂಡ ವ್ಯಕ್ತಿ 6 ತಿಂಗಳ ನಂತರ 2500 ರೂ. ಓವರ್‌ ಡ್ರಾಪ್ಟ್‌ಗೆ ಭಾಜನನಾಗುತ್ತಾನೆ. ಪ್ರತಿಯೊಂದು ಮನೆಗೆ ಕನಿಷ್ಠ ಎರಡು ಬ್ಯಾಂಕ್‌ ಖಾತೆ ತೆರೆಯಬಹುದು.

Vijayaprabha Mobile App free

ಇದನ್ನೂ ಓದಿ: Gold price | ಚಿನ್ನ, ಬೆಳ್ಳಿ ಬೆಲೆ ಏರಿಕೆ; ಇಂದಿನ ಚಿನ್ನದ ಬೆಲೆ ಎಷ್ಟು ಗೊತ್ತಾ..?

ಈ ಕಾರಣಕ್ಕಾಗಿ ಈ ಯೋಜನೆಯಡಿ ಖಾತೆ ತೆರೆಯಲೇಬೇಕು

PMJDY ಯೋಜನೆಯಡಿಯಲ್ಲಿ ದೇಶದ ಅತಿ ಬಡವ ವರ್ಗದವರಿಗೆ ಬ್ಯಾಂಕ್‌ ಖಾತೆ ತೆರೆಯಬಹುದು. ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವು 4% p.a ಬಡ್ಡಿ ಗಳಿಸುತ್ತದೆ. ಖಾತೆದಾರನ ಮರಣದ ನಂತರ ಫಲಾನುಭವಿಗೆ ಪಾವತಿಸಬೇಕಾದ ರೂ.30,000 ಜೀವ ರಕ್ಷಣೆ ಒದಗಿಸುತ್ತದೆ. ಸರ್ಕಾರದ ಯೋಜನೆಗಳ ಫಲಾನುಭವಿಗಳು ಈ ಖಾತೆಯಲ್ಲಿ ನೇರ ಲಾಭ ವರ್ಗಾವಣೆ ಪಡೆಯಬಹುದು. ವ್ಯಕ್ತಿಗಳು ವಿಮೆ ಮತ್ತು ಪಿಂಚಣಿ ಸಂಬಂಧಿತ ಯೋಜನೆಗಳಿಗೆ ಪ್ರವೇಶಿಸಬಹುದು. ಈ ಖಾತೆ ಹೊಂದಿರುವವರು ದೇಶಾದ್ಯಂತ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು

PMJDY ಯೋಜನೆಯಡಿ ಖಾತೆ ತೆರೆಯಲು ವಿಳಾಸ ಪುರಾವೆ ಹೊಂದಿರಬೇಕು. (ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಖಾಯಂ ಖಾತೆ ಸಂಖ್ಯೆ (PAN), ಮತದಾರರ ಗುರುತಿನ ಚೀಟಿ ಮತ್ತುಆಧಾರ್ ಕಾರ್ಡ್ ಮೊದಲಾದವು), ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಬೇಕು. ಆಧಾರ್ ಇಲ್ಲದಿದ್ದರೆ ನೋಂದಾಯಿಸಿಕೊಂಡ ನಂತರ ಅರ್ಜಿ ಸಲ್ಲಿಸಬೇಕು. ಎರಡು ಪಾಸ್‌ಪೋರ್ಟ್  ಭಾವಚಿತ್ರಗಳನ್ನು ಸಲ್ಲಿಸಬೇಕು. ಈ ಯೋಜನೆಯಡಿಯಲ್ಲಿ ಖಾತೆ ತೆರೆಯಲು ಹತ್ತಿರದ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: C P Yogeshwar | ಚೆನ್ನಪಟ್ಟಣ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿರುದ್ಧ ದೂರು ದಾಖಲು

ಹೇಗೆ ಅರ್ಜಿ ಸಲ್ಲಿಸಬೇಕು?

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಗೆ ಖಾತೆಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ತೆರೆಯಬಹುದು. ಅರ್ಜಿ ನಮೂನೆಯನ್ನು PMJDY ಯ ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಬಹುದು. ಆನ್‌ಲೈನ್‌ನಲ್ಲೇ ಅರ್ಜಿಯ ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅದನ್ನು ಸಲ್ಲಿಸಬಹುದಾಗಿದ್ದು, ಯಾವೆಲ್ಲ ಬ್ಯಾಂಕ್ ನಲ್ಲಿ ಹೇಗೆ ಖಾತೆ ತೆರೆಯಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ವಿಡಿಯೋದಲ್ಲಿ ನೋಡಬಹುದು.
ಕೃಪೆ: Vishesha Vani

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.