ಮೊಬೈಲ್‌ ಚಾರ್ಜರ್‌ನಿಂದ ಶಾಕ್‌ ತಗುಲಿ ವಿದ್ಯಾರ್ಥಿ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಮೊಬೈಲ್‌ ಚಾರ್ಜರ್‌ (Mobile Charger) ಬಳಸುವಾಗ ಎಲೆಕ್ಟ್ರಿಕ್ ಶಾಕ್ (Electric Shock) ಹೊಡೆದು ವಿದ್ಯಾರ್ಥಿಯೊಬ್ಬ (Student Death) ಸಾವಿಗೀಡಾಗಿದ್ದಾನೆ. ಮಂಜುನಾಥ್ ನಗರದ‌ ಪಿಜಿಯಲ್ಲಿ ವಾಸವಿದ್ದ ವಿದ್ಯಾರ್ಥಿ ದುರ್ಮರಣ (Death by shock)…

ಬೆಂಗಳೂರು: ಬೆಂಗಳೂರಿನಲ್ಲಿ ಮೊಬೈಲ್‌ ಚಾರ್ಜರ್‌ (Mobile Charger) ಬಳಸುವಾಗ ಎಲೆಕ್ಟ್ರಿಕ್ ಶಾಕ್ (Electric Shock) ಹೊಡೆದು ವಿದ್ಯಾರ್ಥಿಯೊಬ್ಬ (Student Death) ಸಾವಿಗೀಡಾಗಿದ್ದಾನೆ. ಮಂಜುನಾಥ್ ನಗರದ‌ ಪಿಜಿಯಲ್ಲಿ ವಾಸವಿದ್ದ ವಿದ್ಯಾರ್ಥಿ ದುರ್ಮರಣ (Death by shock) ಹೊಂದಿದ್ದಾನೆ.

ಬೀದರ್ ಮೂಲದ ಶ್ರೀನಿವಾಸ್ (24) ಸಾವನ್ನಪ್ಪಿದ ವಿದ್ಯಾರ್ಥಿ. ಇವರು ಬೀದರ್‌ನಿಂದ ಬೆಂಗಳೂರಿಗೆ ಬಂದು ಸಾಫ್ಟ್‌ವೇರ್ ಕೋರ್ಸ್ ಮಾಡುತ್ತಿದ್ದರು. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಪಿಜಿಯಲ್ಲಿ ಶ್ರೀನಿವಾಸ್ ಇದ್ದ ರೂಮ್‌ನಲ್ಲೇ ಘಟನೆ ನಡೆದಿದೆ. ಮೊಬೈಲ್ ಚಾರ್ಜ್ ಹಾಕಲು ಹೋದಾಗ ಎಲೆಕ್ಟ್ರಿಕ್ ಶಾಕ್ ಹೊಡೆದಿದ್ದು, ಚಾರ್ಜಿಂಗ್ ವೈರ್ ಅಥವಾ ಸ್ವಿಚ್ ಬೋರ್ಡ್‌ನಿಂದ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಅವರು ಬಳಸುತ್ತಿದ್ದ ಮೊಬೈಲ್‌ ಚಾರ್ಜರ್ ವೈರ್ ಕೂಡ ಸ್ವಲ್ಪ ಡ್ಯಾಮೇಜ್ ಆಗಿತ್ತು ಎನ್ನಲಾಗಿದೆ. ಕರೆಂಟ್ ಶಾಕ್ ತಗುಲಿ ಅಂಗಾತ ಬಿದ್ದಿದ್ದ ಶ್ರೀ‌ನಿವಾಸ್‌ರನ್ನು, ಈ ವೇಳೆ ಊಟಕ್ಕೆ ಬಾ ಎಂದು ಕರೆಯಲು ಬಂದ ಪಕ್ಕದ ಬೆಡ್ ಹುಡುಗ ಕಂಡು ಮೈಮುಟ್ಟಿ ಕರೆಯಲು ಮುಂದಾಗಿದ್ದಾನೆ. ಈ ವೇಳೆ ಆತನಿಗೂ ಶ್ರೀನಿವಾಸ್ ಮೈಯಿಂದ ಕರೆಂಟ್ ಶಾಕ್ ತಗುಲಿದೆ. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Vijayaprabha Mobile App free

ಪಿಜಿ ಸಿಬ್ಬಂದಿ ತಕ್ಷಣ ಬಸವೇಶ್ವರ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.