Air India Air Transport Service Limited – ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವಿಸ್ ಲಿಮಿಟೆಡ್ ಸಂಸ್ಥೆಯಲ್ಲಿ 3256 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
10ನೇ ತರಗತಿ ಪಾಸಾದವರು, ದ್ವಿತೀಯ ಪಿಯುಸಿ ಹಾಗೂ ಡಿಗ್ರಿ ಪಾಸಾದವರು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜುಲೈ 12ನೇ ತಾರೀಖಿನಿಂದ ಜುಲೈ 16ರವರೆಗೆ ನೇರ ಸಂದರ್ಶನ ನಡೆಸುವುದರ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು, ನೇರ ಸಂದರ್ಶನ ನಡೆಯುವ ವಿಳಾಸ ಹಾಗೂ ಅಧಿಸೂಚನೆ ಸೇರಿದಂತೆ ಇತರೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ನೇಮಕಾತಿ ವಿವರ:
• ನೇಮಕಾತಿ ಸಂಸ್ಥೆ – ಏರ್ ಇಂಡಿಯಾ ಏರ್ ಟ್ರಾನ್ಸ್ಪೋರ್ಟ್ ಸರ್ವಿಸ್ ಲಿಮಿಟೆಡ್
• ನೇಮಕಾತಿ ಹುದ್ದೆಗಳ ಸಂಖ್ಯೆ – 3,256
• ಆಯ್ಕೆ ಪ್ರಕ್ರಿಯೆ – ನೇರ ಸಂದರ್ಶನ
Vacancy details:
ಡ್ಯೂಟಿ ಮ್ಯಾನೇಜರ್, ಜೂನಿಯರ್ ಆಫೀಸರ್, ಡೆಪ್ಯುಟಿ ಟರ್ಮಿನಲ್, ಹ್ಯಾಂಡಿಮ್ಯಾನ್ ಸೇರಿದಂತೆ ಒಟ್ಟು 3,256 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳ ಸಂಪೂರ್ಣ ವಿವರಕ್ಕಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು ಪರಿಶೀಲಿಸಿ.
Age limit-ವಯೋಮಿತಿ ಅರ್ಹತೆಗಳು – ಅರ್ಜಿ ಸಲ್ಲಿಸುವವರು ಕನಿಷ್ಠ 28 ವರ್ಷದಿಂದ 50 ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕು.
ವೇತನ ಶ್ರೇಣಿ / Pay Scale – ₹22,000/- ರಿಂದ ₹75,000/- ವರೆಗೆ
ನೇರ ಸಂದರ್ಶನ ನಡೆಯುವ ಸಮಯ ಮತ್ತು ವಿಳಾಸ :
ಈ ಹುದ್ದೆಗಳ ನೇಮಕಾತಿಯು ಹುದ್ದೆಗಳಿಗೆ ಅನುಗುಣವಾಗಿ ನಿಗದಿಪಡಿಸಿದ ದಿನಾಂಕ ಜುಲೈ 12 ರಿಂದ ಜುಲೈ 16ನೇ ತಾರೀಖಿನವರೆಗೆ, ಬೆಳಗ್ಗೆ 9:30 ಯಿಂದ ಮದ್ಯಾಹ್ನ 12:30 ರವರೆಗೆ ಕೆಳಗಿನ ವಿಳಾಸದಲ್ಲಿ ನಡೆಯುತ್ತದೆ.
ವಿಳಾಸ: ಜಿಎಸ್‌ಡಿ ಕಾಂಪ್ಲೆಕ್ಸ್, ಸಹರ್ ಪೊಲೀಸ್ ಠಾಣಾ ಹತ್ತಿರ, ಸಿಎಸ್‌ಎಂಐ ಏರ್‌ಪೋರ್ಟ್, ಟರ್ಮಿನಲ್-1, ಗೇಟ್ ನಂಬರ್-5, ಸಹರ್, ಅಂಧೇರಿ – ಪೂರ್ವ, ಮುಂಬೈ-400099
ಅರ್ಜಿ ಸಲ್ಲಿಸುವ ಮಾಹಿತಿ: ಅರ್ಜಿ ಸಲ್ಲಿಸಲು ಅರ್ಹರಿರುವ ಅಭ್ಯರ್ಥಿಗಳು ಕೆಳಗಿನ ಅಧಿಸೂಚನೆಯಲ್ಲಿ ಸಿಗುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿರಿ.
• ಸಂಸ್ಥೆಯ ಅಧಿಕೃತ ಜಾಲತಾಣ: https://www.aiasl.in/
• ಅಧಿಸೂಚನೆ : ಡೌನ್ಲೋಡ್