ಬೆಂಗಳೂರು: ರೇಣುಕಾಸ್ವಾಮಿ ಅವರ ರಕ್ತದ ಕಲೆಗಳು ಆರೋಪಿ ನಟ ದರ್ಶನ್ ಅವರ ಬಟ್ಟೆಯ ಮೇಲೆ ಪತ್ತೆಯಾದ ಬೆನ್ನಲ್ಲೇ ಇದೀಗ ಆರೋಪಿ ನಟಿ ಪವಿತ್ರಾಗೌಡ ಅವರ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ.
ಪವಿತ್ರಾಗೌಡ ಮನೆಯಲ್ಲಿ ಕೊಲೆ ದಿನ ಆಕೆ ಧರಿಸಿದ್ದ ಚಪ್ಪಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಬಳಿಕ ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಇದೀಗ ಬಂದ ಎಫ್‌ಎಸ್‌ಎಲ್ ವರದಿಯಲ್ಲಿ ಆಕೆಯ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಪತ್ತೆಯಾಗಿರುತ್ತದೆ.
ಪವಿತ್ರಾಗೌಡ ಚಪ್ಪಲಿಯಲ್ಲಿ ರೇಣುಕಾಸ್ವಾಮಿಯ ರಕ್ತದ ಕಲೆ ಪತ್ತೆಯಾಗುವ ಮೂಲಕ ಆಕೆಯ ವಿರುದ್ಧ ಈ ಚಪ್ಪಲಿ ಪ್ರಬಲ ಸಾಕ್ಷಿಯಾಗಲಿದೆ. ರೇಣುಕಾಸ್ವಾಮಿಗೆ ಪವಿತ್ರಾಗೌಡ ಚಪ್ಪಿಯಲ್ಲಿ ಹೊಡೆದ ಆರೋಪವಿತ್ತು. ಇದೀಗ ಅದೇ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ. ಈ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಇನ್ನು ದರ್ಶನ್ ಮನೆಯಲ್ಲಿ ಕೊಲೆ ನಡೆದ ದಿನ ಅವರು ಧರಿಸಿದ್ದ ಪ್ಯಾಂಟ್ ಹಾಗೂ ಶರ್ಟ್ ಅನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು. ನಂತರ ಬಂದ ಎಫ್‌ಎಸ್‌ಎಲ್ ವರದಿಯಲ್ಲಿ ದರ್ಶನ್ ಅವರ ಬಟ್ಟೆಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಪತ್ತೆಯಾಗಿತ್ತು.