ಮೊಬೈಲ್​ ನೋಡುತ್ತಾ ಚಾಕು, ನೈಲ್ ಕಟ್ಟರ್, ಕೀ ಬಂಚ್ ನುಂಗಿದ ಬಾಲಕ!

ಪಾಟ್ನಾ : ಮೊಬೈಲ್ ಬಳಕೆ ಮಾಡುತ್ತಾ ನಾವು ಏನು ಮಾಡುತ್ತಿದ್ದೇವೆ ಎಂಬುದು ಸರಿಯಾಗಿ ಅರಿವಿಗೆ ಇರಲ್ಲ. ದಾರಿಯಲ್ಲಿ ನಡೆದು ಹೋಗುವಾಗ ಕೆಲವೊಮ್ಮೆ ಬೇರೆಯವರಿಗೆ ಡಿಕ್ಕಿಯಾಗಿರುವುದು ಇರುತ್ತದೆ. ಸದ್ಯ ಇಂತಹದೇ ಭಿನ್ನ ಘಟನೆವೊಂದು ನಡೆದಿದ್ದು ಬಾಲಕನೊಬ್ಬ…

ಪಾಟ್ನಾ : ಮೊಬೈಲ್ ಬಳಕೆ ಮಾಡುತ್ತಾ ನಾವು ಏನು ಮಾಡುತ್ತಿದ್ದೇವೆ ಎಂಬುದು ಸರಿಯಾಗಿ ಅರಿವಿಗೆ ಇರಲ್ಲ. ದಾರಿಯಲ್ಲಿ ನಡೆದು ಹೋಗುವಾಗ ಕೆಲವೊಮ್ಮೆ ಬೇರೆಯವರಿಗೆ ಡಿಕ್ಕಿಯಾಗಿರುವುದು ಇರುತ್ತದೆ. ಸದ್ಯ ಇಂತಹದೇ ಭಿನ್ನ ಘಟನೆವೊಂದು ನಡೆದಿದ್ದು ಬಾಲಕನೊಬ್ಬ ಮೊಬೈಲ್​ ನೋಡುತ್ತ ನೋಡುತ್ತಲೇ ಕೀ, ಚಾಕು ಸೇರಿದಂತೆ ಇತರೆ ಕಬ್ಬಿಣದ ವಸ್ತುಗಳನ್ನು ನುಂಗಿರುವುದು ಬೆಳಕಿಗೆ ಬಂದಿದೆ.

ಬಾಲಕನೊಬ್ಬ ಮೊಬೈಲ್​ ಫೋನ್​ನಲ್ಲಿನ ಆನ್​ಲೈನ್ ಗೇಮಿಂಗ್ ಹಾಗೂ ಸೋಶಿಯಲ್ ಮೀಡಿಯಾಗೆ ಅಡಿಕ್ಟ್ ಆಗಿ ಬಿಟ್ಟಿದ್ದಾನೆ. ಆತನು ಮೊಬೈಲ್ ಬಳಕೆ ಮಾಡುವ ಸಮಯದಲ್ಲಿ ತಾನು ಏನು ಮಾಡುತ್ತಾನೆ ಎಂಬುದು ಅರಿವಿಗೆ ಇರಲ್ಲ. ಹೀಗಾಗಿ ತನ್ನ ಪಕ್ಕದಲ್ಲಿ ಇಟ್ಟಿರುವಂತ ಕಬ್ಬಿಣದ ವಸ್ತುಗಳಾದ ಕೀ ಬಂಚ್​, 2 ಉಗುರು ಕಟ್​ ಮಾಡುವುದು (ನೈಲ್ ಕಟ್ಟರ್), ಚಾಕು ಸೇರಿ ಇತರೆ ಕೆಲ ವಸ್ತುಗಳನ್ನು ನುಂಗಿದ್ದನು. ಆದರೂ ಬಾಲಕನಿಗೆ ಏನು ಆಗಿರಲಿಲ್ಲ ಎಂದು ಹೇಳಲಾಗಿದೆ.

ಮನೆಯವರು ಕೀ ಬಂಚ್ ಎಲ್ಲಿದೆ ಎಂದು ಹುಡುಕಾಡುವಾಗ ಬಾಲಕ ತಾನು ನುಂಗಿರುವುದಾಗಿ ಹೇಳಿದ್ದಾನೆ. ಮೊದಲು ಇದು ತಮಾಷೆ ಎಂದು ತಿಳಿದಿದ್ದರು. ಬಳಿಕ ಗದರಿಸಿ ಕೇಳಿದಾಗ ನಾನೇ ನುಂಗಿದ್ದಾಗಿ ಹೇಳಿದ್ದಾನೆ. ಇದರಿಂದ ಬೆಚ್ಚಿ ಬಿದ್ದ ಮನೆಯವರು ತಕ್ಷಣ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಷಣೆ ಮಾಡಿಸಿದ್ದಾರೆ. ವೈದ್ಯರು ಸೋನೋಗ್ರಫಿ ಹಾಗೂ ಅಲ್ಟ್ರಾಸೌಂಡ್ ಮೂಲಕ ಪರೀಕ್ಷೆ ಮಾಡಿದಾಗ ಬಾಲಕನ ಹೊಟ್ಟೆಯಲ್ಲಿ ಕಬ್ಬಿಣದ ವಸ್ತುಗಳು ಇರುವುದು ದೃಢವಾಗಿದೆ. ಬಳಿಕ ಸತತ ಒಂದು ಗಂಟೆ ಆಪರೇಷನ್ ಮಾಡಿ ಹೊಟ್ಟೆಯಲ್ಲಿದ್ದ ಎಲ್ಲ ಕಬ್ಬಿಣದ ವಸ್ತುಗಳನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ಡಾ. ಅಮಿತ್ ಕುಮಾರ್ ಹೇಳಿದ್ದಾರೆ.

Vijayaprabha Mobile App free

ಈ ಸಂಬಂಧ ಬಾಲಕನ ತಾಯಿ ಮಾತನಾಡಿ, ಸ್ಮಾರ್ಟ್​ಫೋನ್​ಗೆ ಮಗ ಅಡಿಕ್ಟ್ ಆಗಿ ಸೋಶಿಯಲ್ ಮೀಡಿಯಾ, ಆನ್​​ಲೈನ್ ಗೇಮಿಂಗ್ ಅನ್ನು ಹೆಚ್ಚಾಗಿ ಆಡುತ್ತಿದ್ದ. ವಿಡಿಯೋಸ್, ರೀಲ್ಸ್​ ಹೆಚ್ಚು ಹೆಚ್ಚಾಗಿ ನೋಡುತ್ತಿದ್ದರಿಂದ ಮೆಂಟಲಿ ವೀಕ್ ಆಗಿದ್ದ. ನಂತರ ಪಬ್​​ಜೀ ಆಡಲು ಶುರು ಮಾಡಿದನೋ ಆವಾಗಿನಿಂದ ಮೆಂಟಲಿ ಬಹಳ ವೀಕ್ ಆಗಿಬಿಟ್ಟಿದ್ದ ಎಂದು ಹೇಳಿದ್ದಾರೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ನಗರದ ಚಂಡಿಮರಿ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.