ಕೇರಳ ಮಾದರಿ ಜಾರಿಗೆ ರಾಜ್ಯ ಸರ್ಕಾರ ನಿರ್ಧಾರ; ‘ಆಪರೇಶನ್ ಅಮೃತ್’ ಯೋಜನೆ ಎಂದರೇನು?

Operation Amrit Yojana: ಕರ್ನಾಟಕದಲ್ಲಿ ಆ್ಯಂಟಿ ಬಯಾಟಿಕ್ ಔಷಧಗಳ (Antibiotic medicine) ಹೆಚ್ಚು ಹಾಗೂ ದುರ್ಬಳಕೆ ತಡೆಗೆ ಕೇರಳ ಮಾದರಿಯ ‘ಆಪರೇಶನ್ ಅಮೃತ್’ ಯೋಜನೆ (Operation Amrit Yojana) ಜಾರಿಗೊಳಿಸಲು ರಾಜ್ಯ ಸರ್ಕಾರ (State…

Operation Amrit Yojana

Operation Amrit Yojana: ಕರ್ನಾಟಕದಲ್ಲಿ ಆ್ಯಂಟಿ ಬಯಾಟಿಕ್ ಔಷಧಗಳ (Antibiotic medicine) ಹೆಚ್ಚು ಹಾಗೂ ದುರ್ಬಳಕೆ ತಡೆಗೆ ಕೇರಳ ಮಾದರಿಯ ‘ಆಪರೇಶನ್ ಅಮೃತ್’ ಯೋಜನೆ (Operation Amrit Yojana) ಜಾರಿಗೊಳಿಸಲು ರಾಜ್ಯ ಸರ್ಕಾರ (State Govt) ನಿರ್ಧರಿಸಿದೆ.

ಕೇರಳ ಮಾದರಿ ಆಳವಡಿಕೆಗೆ ಅಗತ್ಯವಿರುವ ವರದಿ ನೀಡುವಂತೆ ರಾಜ್ಯ ಔಷಧ ನಿಯಂತ್ರಣ ವಿಭಾಗಕ್ಕೆ ಆರೋಗ್ಯ ಇಲಾಖೆ ಆದೇಶಿಸಿದೆ. ವೈದ್ಯರ ಸಲಹೆ ಇಲ್ಲದೆ ಆ್ಯಂಟಿ ಬಯಾಟಿಕ್‌ ಹಾಗೂ ಕಳಪೆ ಗುಣಮಟ್ಟದ ಔಷಧಗಳು ಮಾರಾಟವಾಗುತ್ತಿದ್ದು, ಇದು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Operation Amrit Yojana: ‘ಆಪರೇಶನ್ ಅಮೃತ್’ ಯೋಜನೆ ಎಂದರೇನು?

Operation Amrit Yojana vijayaprabha news
Implementation of Operation Amrit Yojana in the state

ಕೇರಳದಲ್ಲಿ ಆ್ಯಂಟಿಬಯಾಟಿಕ್ ಔಷಧಗಳ ಅತಿಯಾದ ಬಳಕೆಗೆ ಕಡಿವಾಣ ಹಾಕಲು ‘ಆಪರೇಶನ್ ಅಮೃತ್’ ಜಾರಿ ಮಾಡಿದ್ದು, ಇದನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ

Vijayaprabha Mobile App free

ಈ ಯೋಜನೆಯಡಿ ವೈದ್ಯರ ಸಲಹೆ ಇಲ್ಲದೆ ನೇರ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಔಷಧ ಅಂಗಡಿಗಳಿಗೆ ನಿಯಮಾವಳಿ ರೂಪಿಸಿದ್ದು, ಅದರ ಅನ್ವಯ ಮಳಿಗೆಗಳು ಆ್ಯಂಟಿಬಯಾಟಿಕ್‌ಗಳ ಖರೀದಿ ಮತ್ತು ಮಾರಾಟದ ನಿಖರ ಮಾಹಿತಿಯನ್ನು ಔಷಧ ನಿಯಂತ್ರಕ ಇಲಾಖೆಗೆ ನೀಡಬೇಕು. ಕಾನೂನು ಉಲ್ಲಂಘಿಸುವ ಅಂಗಡಿಗಳ ವಿರುದ್ಧ ಜನರು ದೂರು ನೀಡಬಹುದು.

https://vijayaprabha.com/8000-under-pradhan-mantri-kaushala-vikas-yojana/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.