ಒನಕೆ ಓಬವ್ವ ಜಯಂತಿಗೆ ಮೂರೇ ಜನ ಭಾಗಿ: ಸರ್ಕಾರಿ ಕಾರ್ಯಕ್ರಮ ಮುಂದೂಡಿಕೆ

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ನಡೆಯಬೇಕಾಗಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಯಲ್ಲಿ ಜನರ ಕೊರತೆಯಿಂದ ಜಯಂತಿ ಆಚರಣೆಯನ್ನು ಸ್ಥಗಿತಗೊಳಿಸಿದ ಘಟನೆ ಸೋಮವಾರ ನಡೆದಿದೆ. ಜಯಂತಿ ನಡೆಯುವ ಕಲಾಭವನದಲ್ಲಿ ಕೆಲವೇ ದಲಿತ…

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ನಡೆಯಬೇಕಾಗಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಯಲ್ಲಿ ಜನರ ಕೊರತೆಯಿಂದ ಜಯಂತಿ ಆಚರಣೆಯನ್ನು ಸ್ಥಗಿತಗೊಳಿಸಿದ ಘಟನೆ ಸೋಮವಾರ ನಡೆದಿದೆ.

ಜಯಂತಿ ನಡೆಯುವ ಕಲಾಭವನದಲ್ಲಿ ಕೆಲವೇ ದಲಿತ ಮುಖಂಡರು ಮಾತ್ರ ಇದ್ದು, ಮೂರು ಮತ್ತೊಂದು, ಅಂದರೆ ವೇದಿಕೆ ಮೂವರು ಮತ್ತು ಮುಂಭಾಗ 3 ರಿಂದ 4 ಜನರು ಒನಕೆ ಓಬವ್ವ ಜಯಂತಿ ಆಚರಣೆ ಮಾಡಲು ಮುಂದಾದಾಗ ಬಾರಿ ವಿರೋಧ ವ್ಯಕ್ತವಾಯಿತು. ನಂತರ ಜಯಂತಿಯನ್ನು ಮಾಡದೇ ಸ್ಥಗಿತಗೊಳಿಸಲಾಯಿತು. ಮುಂದೆ ಈ ಜಯಂತಿಯನ್ನು ಸರಿಯಾಗಿ ಮಾಡುವಂತೆ ಆಗ್ರಹಿಸಿದರು.

ಇದೇ ವೇಳೆ ದಲಿತ ಮುಖಂಡ ನಾಗರಾಜ ಹೆತ್ತೂರು ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ರಾಷ್ಟ್ರೀಯ ನಾಯಕಿಯರ ಜನ್ಮದಿನವನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡ ಆಚರಣೆ ಮಾಡಲು ಮುಂದಾಗಿದ್ದರು. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಸ್ವಾತಂತ್ರ್ಯ ಉತ್ಸವಕ್ಕೆ ತಮ್ಮದೆಯಾದ ಕೊಡುಗೆ ಕೊಟ್ಟಿರುವ ಒನಕೆ ಓಬವ್ವ ಜಯಂತಿಯನ್ನು ಸೋಮವಾರ ಕಲಾಭವನದಲ್ಲಿ ಹಮ್ಮಿಕೊಂಡಿದ್ದು, ಆದರೆ ಇಲ್ಲಿನ ಸನ್ನಿವೇಶ ನೋಡಿ ತುಂಬ ಬೇಸರವಾಯಿತು. ಇಷ್ಟು ದೊಡ್ಡ ಕಲಾಭವನದಲ್ಲಿ ವೇದಿಕೆ ಮೇಲೆ ಮೂವರು ಹಾಗೂ ಕೆಳಗೆ ವೀಕ್ಷಣೆ ಮಾಡಲು ಇದ್ದ ಮೂವರನ್ನು ಹಾಗೂ ಖಾಲಿ ಖಾಲಿ ಛೇರು ನೋಡಿ ಬೇಸರವಾಯಿತು ಎಂದರು.

Vijayaprabha Mobile App free

ವೇದಿಕೆ ಮೇಲೆ ಬೃಹತ್ ಬ್ಯಾನರ್ ಹಾಕಲಾಗಿದ್ದು, ಒನಕೆ ಓಬವ್ವನ ಫೋಟೋ ಹಾಕಲಾಗಿತ್ತು. ಆದರೆ ಇದನ್ನ ವೀಕ್ಷಣೆ ಮಾಡಲು ಜನರು ಇಲ್ಲದೇ ಬಿಕೋ ಎನ್ನುತಿತ್ತು. ಇಡೀ ದೇಶಕ್ಕಾಗಿ ಹೋರಾಟ ಮಾಡಿದಂತಹ ಹೆಣ್ಣು ಮಗಳು ಅವರು ಕೂಡ ದಲಿತ ಸಮುದಾಯದ ಮಗಳಿಗೆ ಜಿಲ್ಲಾಡಳಿತ ಸಂಪೂರ್ಣ ಅಪಮಾನ ಮಾಡಿದೆ ಎಂದು ಆರೋಪಿಸಿದರು.

ಇನ್ನು ಕಲಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ತಾರನಾಥ್ ಕೂಡ ಬಂದಿದ್ದರು. ದಯಮಾಡಿ ಈ ರೀತಿ ಅವಮಾನ ಮಾಡಬೇಡಿ. ಇದು ಅವರಿಗೆ ಅವಮಾನ ಮಾಡಿದಂತಲ್ಲ. ನಮಗೆ ನಾವೇ ಅವಮಾನ ಮಾಡಿಕೊಂಡಂತೆ. ಯಾವ ಕಾರಣಕ್ಕೂ ಈ ಜಯಂತಿ ಆಚರಣೆ ಮಾಡಲು ಬಿಡುವುದಿಲ್ಲ ಎಂದು ಅಧಿಕಾರಿಗೆ ತಾಕೀತು ಮಾಡಿದ್ದೇವೆ ಎಂದರು. ಮತ್ತೆ ಎಲ್ಲರನ್ನು ಕರೆದು ಸಭೆ ಮಾಡಬೇಕು. ಒಬ್ಬ ಪ್ರತಿನಿಧಿ ಕರೆದು ಜಯಂತಿ ಮಾಡಿದರೆ ಆಗುವುದಿಲ್ಲ. ಹೋರಾಡಿದ ವೀರ ಮಹಿಳೆಗೆ ನಿಜವಾಗಲು ಗೌರವ ಕೊಡಬೇಕೆಂದರೇ ಡಿಸಿ, ಸಿಇಒ ಒಂದು ನಿಮಿಷ ಬಂದು ಹೋಗಬೇಕಾಗಿತ್ತು ಎಂದು ಸಲಹೆ ನೀಡಿದರು. ಮುಂದೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ಒನಕೆ ಓಬವ್ವರ ಜಯಂತಿ ಮಾಡಬೇಕೆಂದು ಒತ್ತಾಯ ಮಾಡಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.