ಪಡಿತದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಎಟಿಎಂನಲ್ಲೂ ಸಿಗಲಿದೆ ಅಕ್ಕಿ..!

ಒಡಿಶಾ: ಭಾರತದ ಮೊದಲ ಅಕ್ಕಿ ಎಟಿಎಂ ಒಡಿಶಾದಲ್ಲಿ ನಿರ್ಮಾಣವಾಗಿದ್ದು, ಒಡಿಶಾ ಆಹಾರ ಸರಬರಾಜು ಮತ್ತು ಗ್ರಾಹಕರ ಕಲ್ಯಾಣ ಸಚಿವ ಕೃಷ್ಣ ಚಂದ್ರ ಪಾತ್ರ ಅವರು ಅಕ್ಕಿ ಎಟಿಎಂಗೆ ಚಾಲನೆ ನೀಡಿದರು. ಮಂಚೇಶ್ವರದಲ್ಲಿರುವ ಗೋದಾಮಿನಲ್ಲಿ ಈ ಅಕ್ಕಿ…

ಒಡಿಶಾ: ಭಾರತದ ಮೊದಲ ಅಕ್ಕಿ ಎಟಿಎಂ ಒಡಿಶಾದಲ್ಲಿ ನಿರ್ಮಾಣವಾಗಿದ್ದು, ಒಡಿಶಾ ಆಹಾರ ಸರಬರಾಜು ಮತ್ತು ಗ್ರಾಹಕರ ಕಲ್ಯಾಣ ಸಚಿವ ಕೃಷ್ಣ ಚಂದ್ರ ಪಾತ್ರ ಅವರು ಅಕ್ಕಿ ಎಟಿಎಂಗೆ ಚಾಲನೆ ನೀಡಿದರು.

ಮಂಚೇಶ್ವರದಲ್ಲಿರುವ ಗೋದಾಮಿನಲ್ಲಿ ಈ ಅಕ್ಕಿ ಎಟಿಎಂ ಯತ್ರವನ್ನು ಅಳವಡಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಯಲ್ಲಿ ಅಕ್ಕಿ ವಿತರಣೆಯನ್ನು ಸರಳೀಕರಿಸಲು ಈ ಯತ್ರವನ್ನು ವಿನ್ಯಾಸಗೊಳಿಸಲಾಗಿದೆ.

ಅಕ್ಕಿ ಎಟಿಎಂ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಟಚ್‌ಸ್ಕ್ರೀನ್ ನಲ್ಲಿ ನಮೂದಿಸಬೇಕು. ಹೀಗೆ ನಮೂದಿಸಿದಾಗ 25ಕೆಜಿವರೆಗೆ ಅಕ್ಕಿಯನ್ನು ವಿತರಿಸಲು ಅನುಮತಿ ಸಿಗುತ್ತದೆ. ಬಳಿಕ ಬಯೋಮೆಟ್ರಿಕ್ ದೃಢೀಕರಣವಿರಲಿದೆ. ಅಕ್ಕಿ ವಿತರಿಸುವ ಈ ಹೊಸ ತಂತ್ರಜ್ಞಾನದಿಂದಾಗಿ ಸಾರ್ವಜನಿಕರು ಅಕ್ಕಿಗಾಗಿ ದೀರ್ಘಕಾಲ ಸರತಿ ಸಾಲಿನಲ್ಲಿ ಕಾಯುವ ಅಗತ್ಯವಿರುವುದಿಲ್ಲ.

Vijayaprabha Mobile App free

ಇನ್ನು ಈ ಅಕ್ಕಿ ಎಟಿಎಂನಿಂದಾಗಿ ಸಬ್ಸಿಡಿ ಅಕ್ಕಿಯ ಕಳ್ಳತನ ಹಾಗೂ ಬ್ಲ್ಯಾಕ್ ಮಾರ್ಕೆಟ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆ ಇದೆ. ಜೊತೆಗೆ ಫಲಾನುಭವಿಗಳು ಸರಿಯಾದ ತೂಕದಲ್ಲಿ ಅಕ್ಕಿಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಗುರಿಯಾಗಿದ್ದು, ಇದರಲ್ಲಿ ಯಾವುದೇ ಮೋಸಕ್ಕೂ ಅವಕಾಶ ಇರುವುದಿಲ್ಲ.

ಪ್ರಾರಂಭದಲ್ಲಿ ಅಕ್ಕಿ ಎಟಿಎಂ ಅನ್ನು ಭುವನೇಶ್ವರದಲ್ಲಿ ಪರಿಚಯಿಸಲಾಗುವುದು. ಅಂತಿಮವಾಗಿ ಒಡಿಶಾದ ಎಲ್ಲಾ ೩೦ ಜಿಲ್ಲೆಗಳಲ್ಲಿ ಪರಿಚಯಿಸಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.