(DL & RC) ರಾಜ್ಯದಲ್ಲಿ HSRP ಬಳಿಕ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದ್ದು, ಇದೀಗ DL ಮತ್ತು ವಾಹನ ನೋಂದಣಿ ಪ್ರಮಾಣ ಪತ್ರಕ್ಕೆ (RC) ಹೊಸ ಸ್ವರೂಪ ನೀಡಲಾಗುತ್ತಿದೆ.
ಹೌದು, ರಾಜ್ಯದಲ್ಲಿ ವಾಹನ ಚಾಲಕರಿಗೆ ನೀಡಲಾಗುವ DL ಮತ್ತು RC ಗೆ ಮೈಕ್ರೋಚಿಪ್ ಜೊತೆಗೆ ಕ್ಯೂಆರ್ ಕೋಡ್ (QR CODE) ಅಳವಡಿಸಿದ ಸ್ಮಾರ್ಟ್ ಕಾರ್ಡ್ (SMART CARD) ವಿತರಿಸಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂಪಿಸಿರುವ ನಿಯಮ ಅನುಷ್ಠಾನಕ್ಕೆ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದ್ದು, ಸೆಪ್ಟೆಂಬರ್ ನಿಂದ DL ಮತ್ತು RC ವಿತರಿಸಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.
ಇದರಿಂದ ಏನು ಲಾಭ:
ಡಿಎಲ್ (DL) ಮತ್ತು ಆರ್.ಸಿ (RC) ಗಳಲ್ಲಿ ಕ್ಯೂಆರ್ ಕೋಡ್ (QR CODE) ಇರಲಿದ್ದು, ಅದನ್ನು ಸ್ಕ್ಯಾನ್ (SCAN) ಮಾಡಿದರೆ ವಾಹನ ಸಂಪೂರ್ಣ ವಿವರ, ಚಾಲಕನ ವಿವರ ಹಾಗೂ ವಾಹನಗಳ ಮೇಲೆ ಪ್ರಕರಣಗಳ ಕುರಿತು ಮಾಹಿತಿ ಸಿಗಲಿದೆ. ಅಲ್ಲದೆ ಡಿಎಲ್ ನಲ್ಲಿ ಚಾಲಕನ ಹೆಸರು (NAME) , ಜನ್ಮ ದಿನಾಂಕ (DATE OF BIRTH), ವಿಳಾಸ, ರಕ್ತದ ಗುಂಪು, ಇದರ ಜೊತೆಗೆ ಡಿಎಲ್ ಹೊಂದಿರುವವರು ಅಂಗಾಂಗದ ದಾನಿಯಾಗಿದ್ದಾರೆಯೇ ಎಂಬುದನ್ನು ನಮೂದಿಸಲಾಗುತ್ತದೆ. ಅಲ್ಲದೆ ಡಿಎಲ್ ಹೊಂದಿದವರ ಮೊಬೈಲ್ ಸಂಖ್ಯೆ, ಅವರ ಸಂಬಂಧಿಕರ ಅಥವಾ ತಕ್ಷಣ ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆಯನ್ನು ಕೂಡ ನಮೂದಿಸಲಾಗುತ್ತದೆ.